fbpx
ಹೆಚ್ಚಿನ

ನಮ್ಮ ರಾಷ್ಟ್ರಗೀತೆಯನ್ನು ಮೊದಲು ಹಾಡಿದ್ದು ಯಾರು ಮತ್ತು ಎಲ್ಲಿ ಎಂಬುದು ಗೊತ್ತಾ ?- ಪ್ರತಿಯೊಬ್ಬ ಭಾರತೀಯನು ತಿಳಿದುಕೊಳ್ಳಲೇಬೇಕು!

ಜನಗಣಮನ-ಅಧಿನಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ!
ಪಂಜಾಬ ಸಿಂಧು ಗುಜರಾತ ಮರಾಠಾ
ದ್ರಾವಿಡ ಉತ್ಕಲ ಬಂಗ
ವಿಂಧ್ಯ ಹಿಮಾಚಲ ಯಮುನಾ ಗಂಗಾ
ಉಚ್ಛಲ ಜಲಧಿತರಂಗ
ತವ ಶುಭ ನಾಮೇ ಜಾಗೇ,
ತವ ಶುಭ ಆಶಿಷ ಮಾಗೇ,
ಗಾಹೇ ತವ ಜಯಗಾಥಾ.
ಜನಗಣಮಂಗಳದಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ!
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ ಜಯ ಹೇ!

 

ನೊಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಠಾಗೋರ್ ನಮ್ಮ ದೇಶಕ್ಕೆ ಕೊಟ್ಟ ಅಭೂತಪೂರ್ವ ಕೊಡೆಗೆಯೇ ಜನಗಣಮನ. ರಾಷ್ಟ್ರಗೀತೆ ಜನಗಣಮನ ಕಿವಿಗೆ ಬಿದ್ದರೇ ಸಾಕು ನಮ್ಮ ನರನಾಡಿಗಳಲ್ಲಿ ದೇಶಭಕ್ತಿಯ ವಿದ್ಯುತ್ ಪ್ರವಾಹವೇ ಸಂಚರಿಸಿಬಿಡುತ್ತದೆ, ಹಾಗೂ ಆಂತರ್ಯದಲ್ಲಿ ದೇಶಭಕ್ತಿಯ ದಿವ್ಯ ಪ್ರಭೆ ರಾರಾಜಿಸಿಬಿಡುತ್ತದೆ. ಇನ್ನೂ ಒಕ್ಕೊರಳಿನಿಂದ ಜಾತಿ-ಮತ-ಬೇಧ ಭಾವವಿಲ್ಲದೆ ರಾಷ್ಟ್ರ ಗೀತೆಯನ್ನು ಹಾಡಿದರೆ ಸಾಕು ಪ್ರತಿಯೊಬ್ಬರ ಹೃನ್ಮನಗಳು ಪುಳಿಕಿತಗೊಳ್ಳುತ್ತದೆ.

ಹೀಗಿರುವಾಗ ಜನವರಿ 24 ,1950 ರಂದು ಜನಗಣಮನ ದೀರ್ಘ ಗೀತೆಯಲ್ಲಿ ಬರುವ ಮೊದಲ 5 ಸಾಲುಗಳನ್ನು ಮಾತ್ರ ರಾಷ್ಟ್ರಗೀತೆ ಎಂದು ಸಂವಿಧಾನ ಸಭೆಯು ಅಂಗೀಕರಿಸಿತು.ವಿಶೇಷ ಏನೆಂದರೆ ಜನಗಣಮನ ಗೀತೆಯನ್ನು ನಮ್ಮ ಸರ್ಕಾರ ರಾಷ್ಟ್ರಗೀತೆ ಎಂದು ಘೋಷಿಸುವ ಅನೇಕ ವರ್ಷಗಳ ಹಿಂದೆಯೇ ನಮ್ಮ ರಾಷ್ಟ್ರಗೀತೆಯನ್ನು ಅಧಿವೇಶನವೊಂದರಲ್ಲಿ ಹಾಡಲಾಗಿತ್ತು. ಹಾಗಾದರೆ ನಮ್ಮ ರಾಷ್ತ್ರಗೀತೆಯನ್ನು ಮೊದಲು ಎಲ್ಲಿ ಹಾಡಲಾಯಿತು ಮತ್ತು ಯಾರು ಹಾಡಿದರೂ ? ಎನ್ನುವ ಸಹಜ ಕುತೂಹಲ ನಿಮ್ಮಲ್ಲಿದ್ದರೆ, ಮುಂದೆ ಓದಿ !

ನಮ್ಮ ದೇಶದ ಹೆಮ್ಮೆಯ ಗೀತೆಯನ್ನು ಡಿಸೆಂಬರ್ 27 ,1911 ರಂದು ರಾಷ್ಟ್ರೀಯ ಕಾಂಗ್ರೆಸ್ ನ ಕೋಲ್ಕತ್ತಾ ಅಧಿವೇಶನದಲ್ಲಿ ಹಾಡಲಾಯಿತು. ಈ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದವರೂ ಬಿ.ಎನ್ ಧರ್ ಮತ್ತು ನಮ್ಮ ಹೆಮ್ಮೆಯ ರಾಷ್ಟ್ರ ಗೀತೆಯನ್ನು ಅಂದು ಮೊದಲು ಹಾಡಿದವರು ಸರಳಾದೇವಿ ಎಂಬುವವರು.

ನಮ್ಮ ರಾಷ್ಟ್ರಗೀತೆಯನ್ನುರವೀಂದ್ರನಾಥ ಠಾಗೋರ್ ಐರಿಷ್ ಭಾರತೀಯ ಕವಿಯತ್ರಿಯೊಂದಿಗೆ ಸೇರಿ ಆಂಧ್ರಪ್ರದೇಶದ ಮದನ ಪಲ್ಲಿಯಲ್ಲಿ ಭಾಷಾಂತರಿಸಿದರೂ ಮತ್ತು ಅಬಿದ್ ಅಲಿ ಎಂಬುವವರು ಹಿಂದಿಯಿಂದ ಉರ್ದು ಭಾಷೆಗೆ ಭಾಷಾಂತರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top