fbpx
ಹೆಚ್ಚಿನ

ಭಾರತದ ಮೂಲ ಸಂವಿಧಾನವನ್ನು ಕೈ ಬರಹದಲ್ಲಿ ಬರೆದವರು ಯಾರು ಮತ್ತು ಅದಕ್ಕಾಗಿ ಅವರು ಪಡೆದ ಸಂಭಾವನೆ ಎಷ್ಟು ಗೊತ್ತೇ? – ತಪ್ಪದೆ ತಿಳ್ಕೊಳಿ !

ಭಾರತದ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ ಎಂಬುದು ನಮೆಗೆಲ್ಲ ಗೊತ್ತಿದೆ .ಹೀಗಾಗಿ ಈ ಸಂವಿಧಾನವು ಡಿಸೆಂಬರ್ 9, 1 942 ರಿಂದ ನವೆಂಬರ್ 26, 1949ರ ಮಧ್ಯ ಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು, ಜನವರಿ 26 , 1950 ರಂದು ಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ ಪ್ರತಿವರ್ಷ ಜನವರಿ 26 ರಂದು ಗಣರಾಜ್ಯೋತ್ಸವ ವನ್ನು ಆಚರಿಸಲಾಗುತ್ತದೆ.

ವಿಶ್ವದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನ ಭಾರತದಾಗಿದ್ದು. ಭಾರತ ಸಂವಿಧಾನದ ಮೂಲ ಪ್ರತಿಗಳ ಬಗ್ಗೆ ಇರುವ ಒಂದು ಇಂಟೆರೆಸ್ಟಿಂಗ್ ವಿಚಾರವನ್ನು ನೀವು ತಿಳಿದ್ಕೊಳ್ಳಲೇಬೇಕು. ಹೌದು, ಭಾರತ ಸಂವಿಧಾನದ
ಮೂಲ ಪ್ರತಿಗಳನ್ನು ಕೈ ಬರಹದಲ್ಲಿ ಬರೆಯಲಾಗಿತ್ತು ಎಂಬುದು ನಿಮಗೆ ಗೊತ್ತೇ? ಹೌದು, ನಮ್ಮ ಭಾರತದ ಸಂವಿಧಾನದ ಮೂಲ ಪ್ರತಿಗಳು ಕೈ ಬರಹದಲ್ಲಿ ಬರೆಯಲಾಗಿತ್ತು. ಅಂದಹಾಗೆ ನಮ್ಮ ಸಂವಿಧಾನದ ಮೂಲ ಗಳನ್ನೂ ಕೈ ಬರಹದಲ್ಲಿ ಬರೆದವರಾರು ಮತ್ತು ಅದಕ್ಕೆ ಅವರು ಪಡೆದ ಸಂಭಾವನೆಯಷ್ಟು ಎಂಬುದನ್ನು ತಿಳಿಯುವ ಕುತೂಹಲ ನಿಮಲ್ಲಿದ್ದರೆ…ತಪ್ಪದೆ ಮುಂದೆ ಓದಿ !

ನಮ್ಮ ಭಾರತದ ಮೂಲ ಸಂವಿಧಾನವನ್ನು ಕೈ ಬರಹದಲ್ಲಿ ಬರೆದವರು ಯಾರು ಗೊತ್ತೇ ?

ನಮ್ಮ ಭಾರತ ಸಂವಿಧಾನದ ಮೂಲ ಪ್ರತಿಗಳು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಬರೆಯಲ್ಪಟ್ಟಿದ್ದು ಇದನ್ನು ಬರೆದವರು ಪ್ರೇಮ್ ಬಿಹಾರಿ ನಾರಾಯಣ್ . ಹೌದು, ಭಾರತದ ಮೂಲ ಸಂವಿಧಾನವನ್ನು ಸುಂದರ ಕ್ಯಾಲಿಗ್ರಾಫಿಯಿಂದ ಇಟಾಲಿಕ್ ಶೈಲಿಯಲ್ಲಿ ಪ್ರೇಮ್ ಬಿಹಾರಿ ನಾರಾಯಣ್ ಅವರು ಕೈಬರಹದಲ್ಲಿ ಬರೆದಿದ್ದು ವಿಶೇಷವಾಗಿ ಸಂವಿಧಾನದ ಪ್ರತಿ ಪುಟವನ್ನು ಶಾಂತಿನಿಕೇತಂತ ಕಲಾವಿದರಿಂದ ಅಲಂಕರಿಸಲಾಗಿದೆ.

 

 

ಭಾರತದ ಮೂಲ ಸಂವಿಧಾನನ್ನು ಬರೆಯಲು ಪ್ರೇಮ್ ಬಿಹಾರಿ ನಾರಾಯಣ್ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತೇ ?

ಅಂದಹಾಗೆ ಭಾರತದ ಮೂಲ ಸಂವಿಧಾನವನ್ನು ಕಾಗದದ ಮೇಲೆ ಇಳಿಸಲು ಪ್ರೇಮ್ ಬಿಹಾರಿ ನಾರಾಯಣ್ ರೈಝಾದ ಯಾವುದೇ ಸಂಭಾವನೆಯನ್ನು ಪಡೆಯಲಿಲ್ಲ. ಹೌದು, ಇದು ಅಚ್ಚರಿಯ ವಿಷಯವಾದರೂ ಇದನ್ನು ನೀವು ನಂಬಲೇಬೇಕು. ಶ್ರೀಯುತ ಬಿಹಾರಿಯವರು ಸಂಭಾವನೆ ಬದಲಿಗೆ ಸಂವಿಧಾನದ ಪ್ರತಿಯೊಂದು ಪುಟದಲ್ಲೂ ತಮ್ಮ ಹೆಸರನ್ನು ಬರೆಯಲು ಅನುಮತಿ ಕೊಡುವಂತೆ ಕೇಳಿದರು ಮತ್ತು ಕೊನೆಯ ಪುಟದಲ್ಲಿ ತಮ್ಮ ತಾತನ ಹೆಸರಿನೊಂದಿಗೆ ತಮ್ಮ ಹೆಸರನ್ನು ಬರೆದರೂ.

ಇಂದಿಗೂ ಭಾರತದ ಸಂವಿಧಾನದ ಮೂಲ ಪ್ರತಿಗಳನ್ನು ಭಾರತದ ಸಂಸತ್ತಿನ ಗ್ರಂಥಾಲಯದಲ್ಲಿ ವಿಶೇಷ ಹೀಲಿಯಮ್ ತುಂಬಿದ ಕೇಸ್ ಗಳಲ್ಲಿ ಇರಿಸಿರುವುದು ವಿಶೇಷ.

ಒಟ್ಟಿನಲ್ಲಿ ಭಾರತದ ಮೂಲ ಸಂವಿಧಾನವನ್ನು ತಮ್ಮ ಕೈ ಬರಹದಲ್ಲಿ ಬರೆದ ಪ್ರೇಮ್ ಬಿಹಾರಿ ನಾರಾಯಣ್ ರವರಿಗೆ ಭಾರತೀಯರೆಲ್ಲರೂ ಸದಾ ಕಾಲ ಕೃತಜ್ಞತರಾಗಿರಬೇಕು ಅಲ್ಲವೇ ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top