fbpx
ಉಪಯುಕ್ತ ಮಾಹಿತಿ

ಫೇಸ್‌ಬುಕ್‌ ಬಳಕೆದಾರರೇ ಗಮನಿಸಿ – ಈ ಕಾರಣಕ್ಕೆ ನಿಮ್ಮ ಅಕೌಂಟ್ ಡಿಲೀಟ್ ಆಗಬಹುದು.

ಫೇಸ್ ಬುಕ್ ಬಳಕೆದಾರರೇ ನಿಮಗಾಗಿ ಇಲ್ಲೊಂದು ಸಿಹಿ ಸುದ್ದಿ ಬಂದಿದ್ದು, ಇನ್ನು ಮುಂದೆ ಸುಳ್ಳು ಸುದ್ದಿಗಳ ಆಟಕ್ಕೆ ಫೇಸ್‌ಬುಕ್‌ ಕಡಿವಾಣ ಹಾಕಲಿದೆ.

ಹೌದು, ತನ್ನ ವೇದಿಕೆ ಮೂಲಕ ಸುಳ್ಳು ಸುದ್ದಿಗಳ ಹರಡುವಿಕೆ ತಡೆಗೆ ಮುಂದಾಗಿರುವ ಫೇಸ್‌ಬುಕ್‌, ಮುಂದಿನ ದಿನಗಳಲ್ಲಿ ನಕಲಿ ಫೇಸ್‌ಬುಕ್‌ ಗ್ರೂಪ್‌ ಹಾಗೂ ಪೇಜ್‌ ಸ್ವತಃ ರದ್ದುಪಡಿಸುವ ನಿರ್ಧಾರಕ್ಕೆ ಬಂದಿದೆ.

ನಕಲಿ ಫೇಸ್ ಬುಕ್ ಗ್ರೂಪ್ ಮತ್ತು ಸುಳ್ಳು ಸುದ್ದಿಗಳಿಂದ ಹಲವರಿಗೆ ತೊಂದರೆಯಾಗಿದ್ದು ,ಇದು ಹೆಚ್ಚಾದಷ್ಟು ಫೇಸ್ಬುಕ್ ಇಮೇಜ್ ಗೆ ಡ್ಯಾಮೇಜ್ ಹಾಗುವ ಸಾಧ್ಯತೆಗಳಿದ್ದು ಹಾಗಾಗಿ ಈಗಲೇ ಫೇಸ್ಬುಕ್ ಎಚ್ಚೆತ್ತುಕೊಳ್ಳುತಿದ್ದೆ .

 

 

ಹೀಗಾಗಿ ನಕಲಿ ಗ್ರೂಪ್‌ ಹಾಗೂ ಪೇಜ್‌ಗಳು ಸಮಾಜ ವಿರೋಧಿ ಅಥವಾ ಯಾವುದೇ ನಿಯಮಗಳನ್ನು ಉಲ್ಲಂಘಿಸದಿದ್ದರೂ ಅವರು ರದ್ದಾಗಲಿವೆ.

ಮುಖ್ಯವಾಗಿ ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಫೇಸ್‌ಬುಕ್‌ ವೇದಿಕೆಯಲ್ಲಿ ಅನುಮತಿಯಿಲ್ಲದ ದ್ವೇಷದ ಭಾಷಣಗಳು, ಗ್ರಾಫಿಕ್‌ ಉಲ್ಲಂಘನೆ, ಕಿರುಕುಳ, ತಂಟೆಕೋರ, ನಿಯಂತ್ರಿತ ಸರಕುಗಳು, ಬೆತ್ತಲೆ ಹಾಗೂ ಲೈಂಗಿಕ ಚಟುವಟಿಕೆಗಳು ಸೇರಿದಂತೆ ಇನ್ನಿತರ ವಿಚಾರಗಳನ್ನು ರದ್ದುಗೊಳಿಸಬಹುದಾದ ಅಂಶಗಳಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ,’ ಎಂದು ಫೇಸ್‌ಬುಕ್‌ ಹೇಳಿದೆ.

ಈ ರೀತಿಯ ಕ್ರಮ ಕೈಗೊಳ್ಳುತ್ತಿರುವುದರಿಂದ ಈಗಾಗಲೆ ಹಲವು ಫೇಸ್ ಬುಕ್ ಬಳಕೆದಾರರು ತಮ್ಮ ಖಾತೆಗಳಿಗೆ ಲಾಗಿನ್ ಆಗುವಲ್ಲಿ ಸಮಸ್ಯೆ ಎದುರಿಸಿದ್ದಾರೆ.

ಒಟ್ಟಿನಲ್ಲಿ ಫೇಸ್ಬುಕ್ ಒಳ್ಳೆಯ ನಿರ್ಧಾರ ಕೈಗೊಂಡಿದ್ದು ಇದರಿಂದಾಗಿ ನಕಲಿ ಪೇಜ್ ಸೃಷ್ಟಿಸುತ್ತಿರುವವರಿಗೆ, ನಕಲಿ ಅಕೌಂಟ್ ಹೊಂದಿರುವವರಿಗೆ ಸರಿಯಾದ ಶಾಸ್ತಿ ಆಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top