fbpx
ಸಮಾಚಾರ

ಸರ್ಕಾರದಿಂದ ಮಹಿಳೆಯರಿಗೆ ಬಂಪರ್ ಗಿಫ್ಟ್ – ₹10,000 ನಗದು ಹಾಗೂ ಸ್ಮಾರ್ಟ್ ಫೋನ್.

ಅರೆ! ಇದೇನು ಮಹಿಳೆಯರಿಗೆ ಸರ್ಕಾರದಿಂದ ₹10,000 ನಗದು ಹಾಗೂ ಸ್ಮಾರ್ಟ್ ಫೋನ್ ಸಿಗಲಿದೆಯೇ? ಇದೇನಿದು ಬಂಪರ್ ಗಿಫ್ಟ್ ಅಂತ ಯೋಚ್ನೆ ಮಾಡ್ತಿದೀರಾ? ಹೌದು, ಇದು ನಿಮಗೆ ಆಶ್ಚರ್ಯ ಎನಿಸಿದರೂ ನೀವು ನಂಬಲೇ ಬೇಕು!

ಅಸಲಿಗೆ ಮಹಿಳೆಯರಿಗೆ ₹10,000 ನಗದು ಹಾಗೂ ಸ್ಮಾರ್ಟ್ ಫೋನ್ ನೀಡುತ್ತಿರುವ ಸರ್ಕಾರ ನಮ್ಮ ಸರ್ಕಾರವಲ್ಲ . ಬದಲಿಗೆ ಇಂತಹದೊಂದು ಬಂಪರ್ ಗಿಫ್ಟ್ ಅನ್ನು ನೀಡುತ್ತಿರುವುದು ಆಂಧ್ರಪ್ರದೇಶದ ಸರ್ಕಾರ . ಹೌದು, ಲೋಕ ಸಭಾ ಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸುವ ಸಲುವಾಗಿ ಆಂಧ್ರಪ್ರದೇಶದ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡು, ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರಿಗೆ ತಲಾ 10,000 ರು. ನಗದು ಹಾಗೂ ಒಂದೊಂದು ಸ್ಮಾರ್ಟ್ ಫೋನ್ ನೀಡುವುದಾಗಿ ಪ್ರಕಟಿಸಿದ್ದಾರೆ. ಮುಖ್ಯವಾಗಿ ಇದಕ್ಕಾಗಿ ‘ಪಸುಪು-ಕುಂಕುಮ್’ ಎಂಬ ಯೋಜನೆಯನ್ನು ಅವರು ಘೋಷಿಸಿದ್ದು, ಮೂರು ಕಂತುಗಳಲ್ಲಿ ಮಹಿಳೆಯರಿಗೆ ಚೆಕ್ ವಿತರಿಸುವುದಾಗಿ ಹೇಳಿದ್ದಾರೆ.

 

 

ಕಂತುಗಳಲ್ಲಿ ಸಿಗಲಿದೆ ಮಹಿಳೆಯರಿಗೆ ಚೆಕ್ :

ಫೆಬ್ರವರಿ ಮೊದಲ ವಾರ 2500 ರು. ಚೆಕ್, ಫೆಬ್ರವರಿ ಕೊನೆಯಲ್ಲಿ 3000 ರು. ಚೆಕ್ ಹಾಗೂ ಏಪ್ರಿಲ್ನಲ್ಲಿ ಕೊನೆಯ ಕಂತಿನ ಹಣ ನೀಡಲಾಗುವುದು ಎಂದು ನಾಯ್ಡು ರವರು ಕಳೆದ ಶುಕ್ರವಾರ ನಡೆದ ಮಹಿಳಾ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಘೋಷಿಸಿದ್ದಾರೆ.

ಹಣವಿಲ್ಲದಿದ್ದರೂ ಸಾಲ ಮಾಡಿ ಕೊಡುಗೆ ನೀಡುತ್ತೇನೆ :

2014ರ ನಂತರ ಇಲ್ಲಿಯವರೆಗೆ ನಾಯ್ಡು ಈ ಸಂಘಗಳಿಗಾಗಿ 21,116 ಕೋಟಿ ರು. ಮೊತ್ತದ ಕೊಡುಗೆಗಳನ್ನು ನೀಡಿದ್ದಾರೆ. ಇದು ‘ವೋಟಿಗಾಗಿ ನೋಟು’ ಯೋಜನೆ ಎಂದು ಪ್ರತಿಪಕ್ಷ ವೈಎಸ್ಆರ್ ಕಾಂಗ್ರೆಸ್ ಟೀಕಿಸುತ್ತಿದ್ದು ಇದಕ್ಕೆ ಖಡಕ್ ಉತ್ತರ ನೀಡಿರುವ ನಾಯ್ಡು ರವರು ‘ನನ್ನ ಅಕ್ಕತಂಗಿಯರು ಆತ್ಮಗೌರವದಿಂದ ಬಾಳಲು ಸರ್ಕಾರ ದಿಂದ ನೀಡುತ್ತಿರುವ ಕೊಡುಗೆಯಿದು. ಸರ್ಕಾರದಲ್ಲಿ ಹಣವಿಲ್ಲದಿದ್ದರೂ ಸಾಲ ಮಾಡಿ ಇದನ್ನು ನೀಡುತ್ತಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಆಂಧ್ರದ ಸ್ವಸಹಾಯ ಸಂಘಗಳಲ್ಲಿ 93 ಲಕ್ಷ ಮಹಿಳೆಯರು ಸದಸ್ಯರಾಗಿದ್ದು, ಅವರಿಗೆಲ್ಲ ಹಣ ಹಾಗೂ ಫೋನ್ ನೀಡಲು 9400 ಕೋಟಿ ರು. ಖರ್ಚಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top