fbpx
ಸಮಾಚಾರ

“ಗುಲಾಮಗಿರಿಯ ಗುಲಾಮರು ನನ್ನನ್ನು ವಿರೋಧಿಸುತ್ತಾರೆ” ಪ್ರೊ. ಭಗವಾನ್

ಸಾಮಾಜಿಕ ವಿದ್ಯಮಾನಗಳ ಬಗ್ಗೆ ತಮ್ಮ ನಿಲುವನ್ನು ನಿರ್ಬಿಢೆಯಿಂದ ಮಂಡಿಸುತ್ತಲೇ ಒಂದು ಪಂಥದವರ ವಿರೋಧವನ್ನೂ ಕಟ್ಟಿಕೊಂಡಿರುವವರು ಪ್ರಗತಿಪರ ಚಿಂತಕ, ಹಿರಿಯ ಸಾಹಿತಿ ಪ್ರೊ. ಕೆ.ಎಸ್ ಭಗವಾನ್​.. ತಮ್ಮ ಬರಹಗಳಿಗಿಂತಲೂ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಹೆಚ್ಚು ಸುದ್ದಿಯಾಗುವ ಕೆಎಸ್ ಭಗವಾನ್ ಅವರು ಇದೀಗ ಹೊಸ ಬಾಂಬ್ ವೊಂದನ್ನು ಸ್ಪೋಟಿಸಿದ್ದಾರೆ.

ಇತ್ತೀಚಿಗೆ ಶ್ರೀರಾಮನ ಕುರಿತು ಅವಹೇಳನಕಾರಿ ಪುಸ್ತಕವನ್ನೇ ರಚಿಸಿ ಅದರಲ್ಲಿ ಶ್ರೀರಾಮ ದೇವರಲ್ಲ, ಕೊಲೆಗಡುಕ ಅಂತೆಲ್ಲಾ ಉಲ್ಲೇಖಿಸಿದ್ದ ಭಗವಾನ್ ಇದೀಗ ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೈಸೂರಿನ ಅಂಬೇಡ್ಕರ್ ಪಾರ್ಕ್ನಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಭಾರತ ಇನ್ನೂ ಹಿಂದೂ ಧರ್ಮದ ಗುಲಾಮಗಿರಿಯಲ್ಲಿದೆ. ಜನರಿಗೆ ಗುಲಾಮಗಿರಿಯನ್ನು ವಿರೋಧಿಸುವ ತಾಕತ್ತಿಲ್ಲ” ಎಂದು ಹೇಳಿದ್ದಾರೆ.

“ಹಿಂದೂ ಧರ್ಮದ ಮನುಸ್ಮೃತಿಯ ಪ್ರಕಾರ ಬ್ರಾಹ್ಮಣರನ್ನು ಹೊರತುಪಡಿಸಿ ಲಿಂಗಾಯತರು, ಒಕ್ಕಲಿಗರು ಸೇರಿದಂತೆ ಎಲ್ಲರೂ ಶೂದ್ರರು. ಮನುಸ್ಮೃತಿಯಲ್ಲಿ ಶೂದ್ರರು ಅಂದ್ರೆ ದಾಸಿಯ ಮಕ್ಕಳು, ಸೂ..ಮಕ್ಕಳು ಅಂತ ಬರೆಯಲಾಗಿದೆ.”

“ನಮ್ಮ ಜನರಿಗೆ ಗುಲಾಮಗಿರಿಯನ್ನು ವಿರೋಧ ಮಾಡುವ ತಾಕಿತ್ತಿಲ್ಲ. ಇಂಥಾ ಗುಲಾಮಗಿರಿಯನ್ನು ನಾವು ವಿರೋಧ ಮಾಡಿದ್ದಕ್ಕೆ ಕೆಲ ಗುಲಾಮರು ನನ್ನನ್ನು ವಿರೋಧಿಸುತ್ತಿದ್ದಾರೆ. ಒಂದು ವರ್ಗದ ಗುಲಾಮರು ಮತ್ತು ಅವರ ಗುಲಾಮರು ನನ್ನನ್ನು ವಿರೋಧಿಸುತ್ತಾರೆ. ಇದೇ ಗುಲಾಮರು ಹೋಗಿ ಬಾಬ್ರಿ ಮಸೀದಿ ಒಡೆದು ಹಾಕಿದರು. ಕೆಲ ಗುಲಾಮರು ನಾವು ಶೂದ್ರರು, ಸೂ.. ಮಕ್ಕಳು ಎನ್ನುವ ಅರಿವಿಲ್ಲದೆ ಆ ಗುಲಾಮರ ಕೆಲಸ ಮಾಡುತ್ತಾರೆ ಎಂದು ಭಗವಾನ್ ಮತ್ತೊಂದು ವಿವಾದ ಸ್ಪೋಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top