fbpx
ಸಮಾಚಾರ

“ಸುಳ್ಳು ಭರವಸೆ ನೀಡಿ ಈಡೇರಿಸದ ನಾಯಕರಿಗೆ ಪಬ್ಲಿಕ್ ಅಲ್ಲಿ ಹೊಡೆಯಬೇಕು” ನಿತಿನ್ ಗಡ್ಕರಿ ಹೇಳಿದ್ದು ಪ್ರಧಾನಿ ಮೋದಿಗಾ?

“:ಜನರಿಗೆ ಚುನಾವಣೆಗೂ ಮುನ್ನ ಭರವಸೆ ನೀಡಿ, ಆ ಕೆಲಸ ಈ ಕೆಲಸ ಎಂಬ ಕನಸು ಹುಟ್ಟಿಸಿ ಗೆದ್ದ ನಂತರ ಅದನ್ನು ಈಡೇರಿಸದ ನಾಯಕರನ್ನು ಸಾರ್ವಜನಿಕವಾಗಿ ಥಳಿಸಬೇಕು” ಎಂದು ಹೇಳಿದ್ದ ನಿತಿನ್ ಗಡ್ಕರಿ ಅವರ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.. ಗಡ್ಕರಿ ಅವರು ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಗಡ್ಕರಿ, ಸಾಮಾನ್ಯವಾಗಿ ಪ್ರಜೆಗಳು ಭರವಸೆ ನೀಡುವ, ಹೊಸ ಜೀವನದ ಕನಸುಗಳನ್ನು ಬಿತ್ತುವ ನಾಯಕನನ್ನು ಮೆಚ್ಚಿಕೊಳ್ಳುತ್ತಾರೆ. ಆದರೆ ಆ ನಾಯಕ ನೀಡಿದ ಭರವಸೆ ಈಡೇರದಿದ್ದರೆ ಅವರ ಕನಸುಗಳು ಭಗ್ನವಾಗುತ್ತದೆ. ಹೀಗಾಗಿ ಸುಳ್ಳು ಭರವಸೆ ನೀಡಿ ಅದನ್ನು ಈಡೇರಿಸದ ನಾಯಕರನ್ನು ಸಾರ್ವಜನಿಕವಾಗಿ ಥಳಿಸಬೇಕು ಎಂದು ಹೇಳಿದ್ದರು. ಈ ವೇಳೆ ಗಡ್ಕರಿ ನೇರವಾಗಿ ಎಲ್ಲೂ ಯಾರ ಹೆಸರೂ ಹೇಳದಿದ್ದರೂ, ಇದು ಮೋದಿ ಉದ್ದೇಶಿಸಿಯೇ ಆಡಿದ ಮಾತು ಎಂದು ವಿಶ್ಲೇಷಿಸಲಾಗಿದೆ.

ಗಡ್ಕರಿ ಅವರ ಈ ಹೇಳಿಕೆ ರಾಷ್ಟ್ರ ರಾಜಕೀಯದಲ್ಲಿ ಹೊಸದೊಂದು ಬಿರುಗಾಳಿಯನ್ನೇ ಎಬ್ಬಿಸಿದ್ದು, ಪ್ರಧಾನಿ ಹುದ್ದೆಯ ಮೇಲೆ ಕಣ್ಣಿರಿಸಿರುವ ಗಡ್ಕರಿ ನೇರವಾಗಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಅಲ್ಲದೆ ಪ್ರಧಾನಿ ಮೋದಿ ಅವರೇ ನಿಮ್ಮ ವಿರುದ್ಧ ಧನಿ ಎತ್ತಬಲ್ಲ ಮಂದಿ ಆಗಮಿಸುತ್ತಿದ್ದಾರೆ ಎಂದು ಮಧ್ಯ ಪ್ರದೇಶ ಕಾಂಗ್ರೆಸ್ ಸಚಿವರು ಹೇಳಿದ್ದಾರೆ.

ಸುಳ್ಳು ಭರವಸೆ ನೀಡಿಯೇ ನಾವು ಅಧಿಕಾರಕ್ಕೆ ಬಂದಿದ್ದು ಎಂದು ಹೇಳಿದ್ದ ಗಡ್ಕರಿ:
2014ರ ಚುನಾವಣೆಯಲ್ಲಿ ಬಿಜೆಪಿ ಅವಾಸ್ತವಿಕ ಭರವಸೆಗಳನ್ನ ನೀಡಿತ್ತೆಂದು ಈ ಹಿಂದೆಯೂ ಗಡ್ಕರಿ ಒಪ್ಪಿಕೊಂಡಿದ್ದರು. ““ನಮಗೆ ಯಾವತ್ತೂ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎನ್ನುವುದು ಗೊತ್ತಿತ್ತು, ಹೀಗಾಗಿ ನಮ್ಮವರೇ ಸುಳ್ಳು ಆಶ್ವಾಸನೆಗಳನ್ನು ಕೊಡಲು ಸಲಹೆ ನೀಡಿದರು. ಅದರಂತೆ ಸುಳ್ಳು ಭರವಸೆಗಳಿಂದಲೇ ನಮ್ಮ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿತು,, ಈಗ ಜನರು ನಮಗೆ ನಾವು ನೀಡಿದ್ದ ಆಶ್ವಾಸನೆಗಳನ್ನು ನೆನಪಿಸುತ್ತಿದ್ದಾರೆ. ಆದರೆ ಜನರು ಭರವಸೆಗಳನ್ನು ನೆನಪಿಸುವಾಗ ನಮಗೆ ನಗು ಬರುತ್ತದೆ. ನಕ್ಕು ಮುಂದೆ ಸಾಗುತ್ತೇವೆ” ಎಂದು ಕೇಂದ್ರ ಸಾರಿಗೆ ಸಚಿವರೂ ಆಗಿರುವ ನಿತಿನ್ ಗಡ್ಕರಿ ಕೆಲ ದಿನಗಳ ಹಿಂದೆ ನಡೆದ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಅವರ ಈ ಮಾತುಗಳು ಪಕ್ಷದೊಳಗೆ ಸಾಕಷ್ಟು ಸಂಚಲನ ಮೂಡಿಸಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top