fbpx
ಸಮಾಚಾರ

ಮಾರಾಟಕ್ಕಿದೆ ಪ್ರಧಾನಿ ಮೋದಿಗೆ ಬಂದ ಉಡುಗೊರೆಗಳು – ನೀವು ಖರೀದಿಸ್ಬೇಕಾ ? ಹಾಗಾದರೆ ತಪ್ಪದೆ ಹೀಗೆ ಮಾಡಿ.

ನವದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್(ಎನ್ಜಿಎಂಎ)ನಲ್ಲಿ ಇದೆ ಭಾನುವಾರ (ಜ.28-ಜ.29) ದಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ಉಡುಗೊರೆಗಳ ಹರಾಜು ಪ್ರಕ್ರಿಯೆಯು ಆರಂಭವಾಗಿದ್ದು. ನಿಮಗೆ ಬೇಕಾದ ವಸ್ತುವನ್ನು ನೀವು ಆನ್ಲೈನ್ ಮೂಲಕ ಕೊಂಡುಕೊಳ್ಳಬಹುದಾಗಿದೆ!

 

 

ಆದರೆ ವಿಶೇಷ ಎಂದರೆ ಉಡುಗೊರೆಗಳ ಹರಾಜಿನಿಂದ ಬರುವ ಹಣವನ್ನು ಗಂಗಾ ನದಿ ಶುಚಿತ್ವಕ್ಕೆ ರೂಪಿಸಲಾಗಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ನಮಾಮಿ ಗಂಗೆ’ ಯೋಜನೆಗೆ ಬಳಸಲಾಗುತ್ತದೆ ಎಂದು ತಿಳಿದು ಬಂದಿರುವುದು.

ನಿನ್ನೆ ಮತ್ತು ಇಂದು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಮ್ಯೂಸಿಯಂನಲ್ಲೇ ಹರಾಜು ಪ್ರಕ್ರಿಯೆ ನಡೆಯಲಿಡಿದ್ದು ಆ ಬಳಿಕ 2 ದಿನಗಳ ಕಾಲ ಆನ್ಲೈನ್ ಮೂಲಕವೂ ಹರಾಜು ನಡೆಸಲಾಗುತ್ತದೆ. ಉಡುಗೊರೆಗಳನ್ನು https://pmmementos.gov.in/ ಇ-ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದ್ದು ಆಸಕ್ತರು ಖರೀದಿಸಬಹುದಾಗಿದೆ . ಇವುಗಳ ಬೆಲೆಯು ಬೆಲೆಯು ಸುಮಾರು 100 ರು.ಯಿಂದಿಡಿದು 30000 ರವರೆಗೆ ಇದೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ ರವರಿಗೆ ಬಂದ ಉಡುಗೊರೆಗಳನ್ನು ಮಾರಾಟಕ್ಕಿಟ್ಟು ಅದರಿಂದ ಬಂದ ಹಣವನ್ನು ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ನಮಾಮಿ ಗಂಗಾ ಯೋಜನೆಗೆ ಬಳಸಿಕೊಳ್ಳುತ್ತಿರುವುದು ಅಭಿನಂದನೀಯವಾಗಿದೆ. ಮತ್ತೆ ಇನ್ನೇಕೆ ತಡ?ನೀವು ಕೂಡ ಪ್ರಧಾನಿ ಮೋದಿ ರವರಿಗೆ ಬಂದ ಉಡುಗೊರೆಗಳನ್ನು ಕೊಳ್ಳಬೇಕೆಂದು ಬಯಸಿದ್ದೆ ಆದಲ್ಲಿ ಈ ಕೂಡಲೇ ಇಲ್ಲಿ ಕ್ಲಿಕ್ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top