fbpx
ಬಿಗ್ ಬಾಸ್

ಲಕ್ಷ ಲಕ್ಷ ಸಂಬಳ ಬರುತ್ತಿದ್ದ ಕೆಲಸವನ್ನು ಬದಿಗೊತ್ತಿ ಬಿಗ್​ ಬಾಸ್​ನಲ್ಲಿ 50 ಲಕ್ಷ ಗೆದ್ದ ಮಾಡರ್ನ್ ರೈತ ಶಶಿ !

ಬಿಗ್ ಬಾಸ್ ಸೀಸನ್ 6 ಕ್ಕೆ ನಿನ್ನೆ ತೆರೆ ಬಿದ್ದಿದ್ದು . ಈ ಬಾರಿಯ ವಿನ್ನರ್ ಪಟ್ಟವನ್ನು ಮಾಡ್ರನ್ ರೈತ ಎಂದೇ ಹೆಸರು ಗಳಿಸಿರುವ ರೈತ ಶಶಿಕುಮಾರ್  ಅಲಂಕರಿಸಿದ್ದಾರೆ. ಇನ್ನೂ ಹಾಡುಗಾರ ನವೀನ ಸಜ್ಜು ರನ್ನರ್ ಅಪ್ ಪಟ್ಟಕ್ಕೆ ತೃಪ್ತಿ ಪಡೆದುಕೊಂಡಿದ್ದಾರೆ. ಹೀಗಿರುವಾಗ ಬಿಗ್ಗ್ ಬಾಸ್ ಟ್ರೋಫಿ ಮತ್ತು 50 ಲಕ್ಷ ರು ತನ್ನದಾಗಿಸಿಕೊಂಡ ಸ್ಪರ್ಧಿ ಶಶಿ ಕುಮಾರ್ ಬಗ್ಗೆ ಎಲ್ಲೆಡೆ ಮಾತಾಗುತ್ತಿದೆ. ಹಾಗಾದರೆ ನಾವು ಅವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ :

 

 

ಬಿಎಸ್ಸಿ ಕೃಷಿ ಪದವೀಧರ :

ಆರನೇ ಆವೃತ್ತಿಯ ಆಲ್ರೌಂಡರ್ ಆಗಿದ್ದ ಬಿಗ್ ಬಾಸ್ ವಿನ್ನರ್ ಶಶಿ ಅವರ ಶೈಕ್ಷಣಿಕ ಸಾಧನೆ ಗಮನಾರ್ಹವಾಗಿದ್ದು . ಬಿಎಸ್ಸಿ ಕೃಷಿ ಪದವೀಧರನಾಗಿರುವ ಶಶಿ, ಎಂಎಸ್ಸಿ ಪದವಿ ಯಲ್ಲಿ ಐದು ಗೋಲ್ಡ್ ಮೆಡಲ್ ಗಳನ್ನೂ ಬಾಚಿ ಕೊಂಡಿದ್ದಾರೆ.

ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ :

ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳುವ ಮುಂಚಿನಿಂದಲೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಶಶಿ ರಕ್ತದಾನ ಶಿಬಿರ ಸೇರಿದಂತೆ ಅನೇಕ ಸಾಮಾಜಿಕ ಸೇವೆಗಳನ್ನೂ ಕೂಡ ಶಶಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಎದುರು ಕಾರ್ಯಕ್ರಮ ನೀಡಿದ್ದರು ಶಶಿ :

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಜರ್ಮನಿಯಲ್ಲಿ ನಡೆಸಿದ ಮೆಕ್ ಇನ್ ಇಂಡಿಯಾ ಶೋನಲ್ಲಿ ಶಶಿ ಕುಮಾರ್ ಮತ್ತು ತಂಡ ಕಾರ್ಯಕ್ರಮ ನಡೆಸಿಕೊಟ್ಟಿದ್ದರು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ಲಕ್ಷ ಸಂಬಳದ ಪ್ಯಾಕೇಜ್ ತಿರಸ್ಕರಿಸಿದ್ದ ಶಶಿ :

ಓದು ಮುಗಿಸಿ ಈ ಹಿಂದೆ ಬೆಂಗಳೂರಿನ ದೊಡ್ಡ ಕಂಪೆನಿಯೊಂದರಲ್ಲಿ ಲಕ್ಷ ಸಂಬಳದ ಪ್ಯಾಕೇಜ್ ಬರುವಂತಹ ಕೆಲಸ ಕೂಡ ಗಿಟ್ಟಿಸಿಕೊಂಡಿದ್ದ ಶಶಿ ಆ ನಂತರ ಕೆಲಸ ಬಿಟ್ಟು ವ್ಯವಸಾಯದ ಕಡೆ ಮುಖ ಮಾಡಿದ್ದೂ ಕೃಷಿ ಬಗ್ಗೆ ಅವರಿಗಿರುವ ಆಸಕ್ತಿಯನ್ನು ಎತ್ತಿ ತೋರಿಸುತ್ತದೆ.

ಒಟ್ಟಿನಲ್ಲಿ ವಿದ್ಯಾಭ್ಯಾಸದೊಂದಿಗೆ ಡೊಳ್ಳು ಕುಣಿತ ಮತ್ತು ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುವ ಶಶಿ ಕೆಲ ಸೀರಿಯಲ್ನಲ್ಲೂ ಅಭಿನಯಿಸಿದ್ದು ಇವೆಲ್ಲದರ ನಡುವೆ ಕೃಷಿಯನ್ನೇ ಅವಲಂಬಿಸಿರುವ ಶಶಿ ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿರುವುದು ಹಲವರಿಗೆ ಖುಷಿ ತಂದಿದೆ. ತನ್ನ ದಿಟ್ಟ ನಿರ್ಧಾರಗಳಿಂದ ಮತ್ತು ಜಾಣ್ಮೆಯಿಂದ ಎಲ್ಲರ ಮನೆಯ ಮಾತಾಗಿರುವ ಶಶಿ ಟಾಸ್ಕ್ಗಳಲ್ಲಿ ಛಲ ಬಿಡದೇ ಸ್ಪರ್ಧಿಸಿದ್ದು ಶ್ಲಾಘನೀಯವೇ ಸರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top