fbpx
ಮನೋರಂಜನೆ

ಗಣೇಶನ ಮದುವೆಯ ಗಣೇಶನಿಗೆ ಪವರ್ ಸ್ಟಾರ್ ಮೇಲೆ ಫುಲ್ ಫಿದಾ ಆಗಿರೋದು ಯಾಕಂತೆ ಗೊತ್ತಾ

ಸಿಂಪ್ಲಿಸಿಟಿ ಗೆ ಇನ್ನೊಂದು ಹೆಸರೇ ದೊಡ್ಮನೆ ರಾಜ್ ಕುಟುಂಬ ಆ ಮನೆಯ ಚಿಕ್ಕ ಮಕ್ಕಳಿಂದ ದೊಡ್ಡವರ ವರೆಗೂ ಯಾವುದೇ ಅಹಂ ಇಲ್ಲ ,ಅಷ್ಟು ಹೆಸರು ಮಾಡಿದರು ಜನರ ಬಳಿ ಇವರುಗಳು ನಡೆದುಕೊಳ್ಳುವ ರೀತಿ ನಿಜವಾಗಲೂ ಮೆಚ್ಚಬೇಕು.ಇದಕ್ಕೆ ಇನ್ನೊಂದು ನಿರ್ದರ್ಶನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೌದು ನಟನೆಯ ಜೊತೆ ಇವರ ನಡತೆಯನ್ನು ಮೆಚ್ಚಿ ಅಭಿಮಾನಿಗಳು ಆದವರು ತುಂಬಾನೇ ಹೆಚ್ಚು.

ಅಪ್ಪು ದೊಡ್ಡ ನಟರಾದ್ರೂ ಕೂಡ ತುಂಬಾ ಸರಳ ಸಜ್ಜನಿಕೆಯ ವ್ಯಕ್ತಿತ್ವದವರು.ಈ ವಿಷಯ ನಮಗೆ ಗೊತ್ತಿದರು ಹೊಸದಾಗಿ ಈ ವಿಷ್ಯದ ಬಗ್ಗೆ ಮಾತನಾಡಿರುವುದು ಬೇರೆ ಯಾರು ಅಲ್ಲ ಇನ್ನೊಂದು ಕಾಲ ಪ್ರತಿಭೆ ಮಾಸ್ಟರ್ ಆನಂದ್.
ಅಪ್ಪು ಸರಳತೇ ಗೆ ಮಾಸ್ಟರ್ ಆನಂದ್​ ಫುಲ್ ಫಿದಾ ಆಗಿದ್ದಾರೆ.

ಚೈಲ್ಡ್ ಆಕ್ಟರ್ ಆಗಿ ಸಿನಿಮಾರಂಗ ಪ್ರವೇಶ ಮಾಡಿದ ಆನಂದ್ ಅನೇಕ ಕಿರುತೆರೆ ಹಾಗೂ ಹಿರಿತೆರೆಗಳಲ್ಲಿ ನಟನೆ ಮಾಡಿ ಹೊಸ ಛಾಪನ್ನು ಮೂಡಿಸಿದವರು,ಅದರ ಜೊತೆ ನಿರ್ದೇಶನ ಹಾಗೂ ನಿರೂಪಕರಾಗಿ ಕೂಡ ತುಂಬಾ ಹೆಸರು ಮಾಡಿದವರು.ಈ ಹಿಂದೆ ಬಿಗ್ ಬಾಸ್ ಶೋ ನಲ್ಲಿ ಭಾಗವಹಿಸಿ ಜನರಿಂದ ಮೆಚ್ಚುಗೆ ಪಡೆದವರು.
ಇಷ್ಟು ದಿನ ಸಣ್ಣ ಪುಟ್ಟ ಪಾತ್ರ ಮಾಡುತಿದ್ದ ಆನಂದ್ ಈಗ ಪೂರ್ಣಪ್ರಮಾಣದ ನಟರಾಗಲು ಹೊರಟಿದ್ದಾರೆ,ಈ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರವರ ಪೂರ್ಣ ಸಪೋರ್ಟ್ ಸಿಕ್ಕಿದು ಆ ಸಿನಿಮಾದ ಟೈಟಲ್ ಟ್ರ್ಯಾಕ್​​​ಗೆ ಅಪ್ಪು ಧ್ವನಿಯಾಗಿದ್ದಾರೆ.

 

ಈ ಸಾಂಗ್ ರೆಕಾರ್ಡಿಂಗ್​ ವೇಳೆ ಪುನೀತ್ ಸಹಕರಿಸಿದ ರೀತಿ ಹಾಗೂ ಅವರ ಸರಳ ಮನೋಭಾವಕ್ಕೆ ಮನಸೋತ ಆನಂದ್ ಪುನೀತ್ ಬಗ್ಗೆಗಿನ ಅವರ ಮಾತನ್ನು ತಮ್ಮ ಫೇಸ್​​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.
“ಎಲ್ಲರಿಗೂ ನಮಸ್ಕಾರ.. ಈ ಫೋಟೋ ಹಿಂದಿನ ಕಥೆ ಇಲ್ಲಿ ಹೇಳಲು ಬಯಸುತ್ತೇನೆ. ಹೊಸ ಚಿತ್ರತಂಡವೊಂದು ಉತ್ಸಾಹಿ ನಿರ್ದೇಶಕರು, ನಿರ್ಮಾಪಕರು ಹಾಗೂ ಸಂಗೀತ ನಿರ್ದೇಶಕರೊಂದಿಗೆ ಆಕಾಶ್​ ಆಡಿಯೋ ಸ್ಟುಡಿಯೋದಲ್ಲಿ ಅದೇ ಚಿತ್ರದ ಶೀರ್ಷಿಕೆ ಗೀತೆಗಾಗಿ ಶ್ರೀ ಅಪ್ಪು ಸರ್ ಅವರಿಂದ ಹಾಡಿಸುವ ಕೆಲಸದಲ್ಲಿ ತೊಡಗಿತ್ತು. ಚಿತ್ರದ ಮುಖ್ಯಭೂಮಿಕೆಯಲ್ಲಿ ನಾನೂ ಇರುವ ಕಾರಣ ಅಲ್ಲಿ ಭಾಗವಹಿಸಿದ್ದೆ.

 

 

 

ಪ್ರತ್ಯಕ್ಷವಾಗಿ ಇಂದು ಅಪ್ಪು ಸರ್​ರವರು ಹಾಡಿದ ರೀತಿ ಹಾಗೂ ಅತೀಸಹನೆ ಮತ್ತು ತಾಳ್ಮೆಯಿಂದ ಸಂಗೀತ ಹಾಗೂ ಚಿತ್ರ ನಿರ್ದೇಶಕರ ಅಪೇಕ್ಷೆಯಂತೆ ಹಾಡಿದ ರೀತಿ ಕಂಡು ಬೆರಗಾದೆ.. ಅದಕ್ಕಾಗಿ ಅವರ ಆ ತಾಳ್ಮೆ ಮತ್ತು ಸಿಂಪ್ಲಿಸಿಟಿಗೆ ಇಂದು ಸಲಾಂ ಎಂದು ನಾನು ಬರೆದುಕೊಂಡಿದ್ದು. ಹಾಡಿನ ನಂತರ ಅವರು ಎಲ್ಲರೊಡನೆ ಬೆರೆತ ರೀತಿ, ಫೋಟೋಗಳಿಗೆ ಸ್ಪಂದಿಸಿದ ರೀತಿ ನಿಜಕ್ಕೂ ಖುಷಿಕೊಟ್ಟಿತು. ಆ ಫೋಟೋ ಅವರ ಫೇಸ್​ಬುಕ್​​ನಲ್ಲಿ ಹಾಕಿದ್ದು ಹಾಗೂ ನನ್ನ ಬಗ್ಗೆ ಸಂತೋಷದಿಂದ ಆಡಿರುವ ಮಾತುಗಳನ್ನು ಕಂಡು ನಾನು ಅವರ ಅಭಿಮಾನಿಯಾಗಿದ್ದೇನೆ.
ಥ್ಯಾಂಕ್ಯೂ ಅಪ್ಪು ಸರ್​. ನಿಮ್ಮ ಪ್ರೀತಿ ಹೀಗೆ ಇರಲಿ…”ಎಂದು ಬರೆದು ಕೊಂಡಿದ್ದಾರೆ .

ನಮ್ಮ ಪುನೀತ್ ರಾಜ್ ಕುಮಾರ್ ಕೂಡ ಆನಂದ್ ರವರ ಕುರಿತು ಅವರ ಟ್ವಿಟ್ಟರ್ ನಲ್ಲಿ ಹೀಗೆ ಬರೆದು ಕೊಂಡಿದ್ದಾರೆ ‘ಇವತ್ತು ಮಾಸ್ಟರ್ ಆನಂದ್​ಗೆ ಒಂದ್ ಹಾಡು ಹಾಡಿದೆ. ತುಂಬಾ ಖುಷಿ ಆಯ್ತು. ಮಾಸ್ಟರ್ ಆನಂದ್ ನೋಡಿದಾಗ್ಲೆಲ್ಲ ಒಂದೇ ನೆನಪಾಗೋದು ಗಣೇಶನ ಮದುವೆ ಸಿನಿಮಾ.. ಅವತ್ತಿನಿಂದ ಇವತ್ತಿನವರೆಗೂ ಒಳ್ಳೆ ಕೆಲಸ ಮಾಡಿದ್ದಾರೆ…… All the best Anand…’ ಎಂಬ ಪ್ರೋತ್ಸಾಹದ ಮಾತುಗಳನಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top