ಬಿಗ್ ಬಾಸ್ ಸ್ಪರ್ಧಿ ನಟಿ ಆಶಿತಾ ಚಂದ್ರಪ್ಪ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸುದ್ದಿ ಪೋಸ್ಟ್ ಮಾಡಿದ್ದೂ. ಇದನ್ನು ಕಂಡ ನೆಟ್ಟಿಗರು ಒಂದೆರೆಡು ಸಮಾಧಾನದ ಮಾತುಗಳನ್ನು ಆಡಿದ್ದಾರೆ.
ಹೌದು, ಬಿಗ್ ಬಾಸ್ ಸ್ಪರ್ಧಿ ನಟಿ ಟಿ ಆಶಿತಾ ಚಂದ್ರಪ್ಪ ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಾಯಿಯ ಬಗ್ಗೆ ಬರೆದುಕೊಂಡಿದ್ದು, ಅವರ ಅಗಲಿಕೆಗೆ ಅಕ್ಷರಶಃ ಕುಗ್ಗಿ ಹೋಗಿದ್ದಾರೆ.
ನಟಿ ಆಶಿತಾ ಚಂದ್ರಪ್ಪ ಅವರ ತಾಯಿ ಎರಡು ವಾರಗಳ ಹಿಂದಷ್ಟೇ ವಿಧಿವಶರಾಗಿದ್ದು,ತಾಯಿಯ ನೆನಪಿನಲ್ಲಿ ಆಶಿತಾ ಇನ್ಸ್ಟಾಗ್ರಾಂನಲ್ಲಿ ಮನಕಲಕುವ ಪೋಸ್ಟ್ ಹಾಕಿದ್ದಾರೆ.
“ನೀವು ನಮ್ಮನ್ನು ಅಗಲಿ 13 ದಿನಗಳು ಕಳೆದಿವೆ. ನೀವಿಲ್ಲದೇ ಪ್ರತಿ ದಿನವೂ ಮತ್ತಷ್ಟು ಕಠಿಣವಾಗ್ತಿದೆ ಎನ್ನುಸುತ್ತಿದೆ. ನೀವು ನಮ್ಮನ್ನು ಮೇಲಿನಿಂದ ನೋಡುತ್ತಿದ್ದೀರ ಅಂತ ಗೊತ್ತು. ಎಂದಿನಂತೆ ನಮ್ಮನ್ನ ಬೈಯುತ್ತಾ, ನಾವು ಅಳೋದನ್ನ ನೋಡ್ತಿರ್ತೀರ ಅಂತ ಗೊತ್ತು. ಆದ್ರೆ ಅದು ನಮಗೆ ಕೇಳಿಸಲ್ಲ. ಅಮ್ಮಾ..ನಾನು ನಿಮ್ಮನ್ನು ಮಿಸ್ ಮಾಡುತ್ತಿದ್ದೇನೆ. ನನ್ನ ಜೀವನ ಎಂದಿನಂತೆ ಇಲ್ಲ. ನಿದ್ದೆಯಿಲ್ಲದ ಈ ದಿನಗಳು ಯಾವಾಗ ಕೊನೆಯಾಗುತ್ತೋ ಗೊತ್ತಿಲ್ಲ. ನಾನು ನಿಮ್ಮ ಮಡಿಲಲ್ಲಿ ಮಲಗಿ ಜೋರಾಗಿ ಅಳಬೇಕು. ಐ ಲವ್ ಯು, ಮಿಸ್ ಯೂ ಸೋ ಮಚ್ “ ಅಂತ ಆಶಿತಾ ಬರೆದುಕೊಂಡಿದ್ದಾರೆ.
ಆರೋಗ್ಯವಾಗಿಯೇ ಇದ್ದ ಆಶಿತಾ ತಾಯಿ ಚಿತ್ರಕಲಾ ಇದ್ದಕ್ಕಿದ್ದಂತೆ ಸಾವನ್ನಪ್ಪಿರುವುದು ಕುಟುಂಬಕ್ಕೆ ಆಘಾತ ನೀಡಿದ್ದು, ಈ ದುಃಖವನ್ನು ಭರಿಸುವ ಶಕ್ತಿ ದೇವರೇ ನೀಡಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
