fbpx
ಸಮಾಚಾರ

ಬಿಗ್ ಬಾಸ್ ವಿನ್ನರ್ ಶಶಿ ಗೆದ್ದ ₹50 ಲಕ್ಷ ಹಣದಲ್ಲಿ ಏನ್ ಮಾಡ್ತಾರಂತೆ ಗೊತ್ತಾ?

ಕಲರ್ಸ್‌’ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಅತಿದೊಡ್ಡ ರಿಯಾಲಿಟಿ ಷೋ ಬಿಗ್‌ ಬಾಸ್‌ 6ನೆ ಆವೃತ್ತಿಯು ತೆರೆ ಕಂಡಿದ್ದು ಈ ಬಾರಿಯ ವಿನ್ನರ್ ಪಟ್ಟ ರೈತ ಶಶಿ ಕುಮಾರ್ ಪಾಲಾಗಿದೆ ಇನ್ನು ಗಾಯಕ ನವೀನ ಸಜ್ಜು ಅವರು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಒಟ್ಟಿನಲ್ಲಿ ಬಿಗ್ ಬಾಸ್ ಸೀಸನ್ 6 ವಿನ್ನರ್ ಆಗಿರುವ ಶಶಿ ಅವರಿಗೆ 50 ಲಕ್ಷ ರೂಪಾಯಿ ಮತ್ತು ಆಕರ್ಷಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದು , ಬಿಗ್ ಬಾಸ್ ಸ್ಟೇಜ್ ಮೇಲೆಯೇ ತಮಗೆ ಬಂದ ಹಣವನ್ನು ಏನು ಮಾಡುತ್ತೇನೆಂದು ಹೇಳಿಕೊಂಡಿದ್ದಾರೆ. ಹಾಗಾದರೆ ಶಶಿ ಏನು ಹೇಳಿದ್ದಾರೆ? ಬನ್ನಿ ಮುಂದೆ ಅವರದೇ ಮಾತುಗಳಲ್ಲಿ ಓದೋಣ !

 

 

‘’ನಾನು ಕಾಮನ್​ ಮ್ಯಾನ್ ಆಗಿ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟೆ. ಆದ್ರೆ ಮನೆಯಲ್ಲಿ ಯಾವತ್ತೂ ಆ ಪದವನ್ನು ಬಳಸಲಿಲ್ಲ ಅಂತಾ ಅಂದ್ಕೊಂಡಿದ್ದೇನೆ. ನಾನೊಬ್ಬ ಯಂಗ್ ಫಾರ್ಮರ್ ಆಗಿ ಇಲ್ಲಿಗೆ ಬಂದೆ. ಬಿಗ್​ಬಾಸ್​ನಲ್ಲಿ ಗೆದ್ದಿರುವ ₹50 ಲಕ್ಷದ ಜೊತೆಯಲ್ಲಿ, ಈ ಸೀಸನ್​ನಲ್ಲಿ ಪಾಲ್ಗೊಂಡಿದ್ದಕ್ಕಾಗಿ ಸಿಗುವ ಹಣವನ್ನು ಸೇರಿಸಿ, ಇಷ್ಟೊಂದು ಹಣವನ್ನು ನಾನು ಯಾವತ್ತೂ ನೋಡಿಲ್ಲ. ಹಾಗೆ, ಈಗ ಬಂದಿರೋ ದುಡ್ಡನ್ನು ಸಂಪೂರ್ಣವಾಗಿ ಬೇರೆಯವರಿಗೆ ಕೊಡ್ತೀನಿ ಅಂತಾ ಹೇಳುವುದಿಲ್ಲ. ನನ್ನದು ಮಧ್ಯಮ ವರ್ಗದ ಕುಟುಂಬ. ನಾನೇನು ಸೂಪರ್ ರಿಚ್ ಪರ್ಸನ್ ಅಲ್ಲ. ನನಗೆ 50 ಲಕ್ಷ ರೂಪಾಯಿ ಎಷ್ಟು ದೊಡ್ಡದು ಅನ್ನೋದು ಗೊತ್ತಿದೆ. ಯಾಕೆಂದರೆ ನಾನೇನೂ ಇಲ್ಲದೇ ಈ ಹಂತಕ್ಕೆ ಬಂದಿದ್ದೇನೆ. ಅಲ್ಲದೇ, ಯಾರಿಗಾದರೂ ಒಂದು ಸಾರಿ ಹಣ ಕೊಟ್ರೆ ಒಮ್ಮೆ ಮಾತ್ರ ಉಪಯೋಗ ಆಗುತ್ತೆ. ಹಾಗಾಗಿ ನಾನು ಇರುವ ಹಣದಲ್ಲಿ ನನಗೆ ಗೊತ್ತಿರುವ ಹೊಸ ತಂತ್ರಜ್ಞಾನವನ್ನ ಯುವಕರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ. ನನ್ನ ಅಧ್ಯಯನದ ಪ್ರಕಾರ ರೈತರಿಗೆ ಹೊಸ ಟೆಕ್ನಾಲಿಜಿಯ ಅಗತ್ಯವಿದೆ. ತಂತ್ರಗಾರಿಕೆಗಳು ತಿಳಿಯದೇ ಕೆಲವಡೆ ಅನ್ನದಾತರು ಎಡವುತ್ತಿದ್ದಾರೆ. ಹಾಗಾಗಿ ಆಕ್ಷೇತ್ರದ ಯುವಕರಿಗೆ ಅಗ್ರಿಕಲ್ಚರ್ ಮತ್ತು ಫಾರ್ಮಿಂಗ್ ಬಗ್ಗೆ ತಿಳಿಸಲು ಹಣವನ್ನು ಉಪಯೋಗಿಸುತ್ತೇನೆ’’ ಎಂದು ಹೇಳಿಕೊಂಡಿದ್ದಾರೆ ಶಶಿ.

ಬಿಗ್ ಬಾಸ್ ಮೊದಲ ಸೀಸನ್ ನಲ್ಲಿ ವಿಜಯ್ ರಾಘವೇಂದ್ರ, 2ನೇ ಸೀಸನ್ ನಲ್ಲಿ ಅಕುಲ್ ಬಾಲಾಜಿ, ಮೂರನೇ ಸೀಸನ್ ನಲ್ಲಿ ಶ್ರುತಿ ಮತ್ತು ನಾಲ್ಕನೇ ಸೀಸನ್’ನಲ್ಲಿ ಪ್ರಥಮ್ ಬಿಗ್ ಬಾಸ್ ಹಾಗು ಐದನೇ ಸೀಸನ್ ನಲ್ಲಿ ಚಂದನ್ ಶೆಟ್ಟಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top