fbpx
ಸಮಾಚಾರ

ಅಪ್ಪಟ ದೇಶಭಕ್ತ ರಾಜಕಾರಣಿ, ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಇನ್ನಿಲ್ಲ !

ಮಾನವತಾವಾದಿ, ಅಪ್ರತಿಮ ದೇಶ ಭಕ್ತ , ಛಲಗಾರ ಮತ್ತು ಸಾಮಾಜಿಕ ಹಾಗೂ ಧೀಮಂತ ರಾಜಕರಣಿಯಾಗಿದ್ದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಇಂದು ಬಾರದ ಲೋಕದತ್ತ ಮುಖ ಮಾಡಿದ್ದಾರೆ.

ದೀರ್ಘ ಕಾಲದ ಆನಾರೋಗ್ಯದಿಂದ ಬಳಲಿ ಬೆಂಡಾಗಿದ್ದ ಫೆರ್ನಾಂಡಿಸ್ ರವರು ದೆಹಲಿಯ ಆಸ್ಪತ್ರೆಯೊಂದರಲ್ಲಿ ಅಸುನೀಗಿದ್ದು . ಜವರಾಯನ ಕರೆಗೆ ಓಗೊಟ್ಟು ಹೊರಟ ಅಪ್ರತಿಮ ರಾಜಕಾರಣಿ ಜಾರ್ಜ್ ಫೆರ್ನಾಂಡಿಸ್ ರವರಿಗೆ 88 ವರ್ಷ ವಯಸ್ಸಾಗಿತ್ತು.

ಮೂಲತಃ ಮಂಗಳೂರಿನವರಾದ ಜಾರ್ಜ್ ಫೆರ್ನಾಂಡಿಸ್, 1930 ಜೂನ್ 3 ರಂದು ಜನಿಸಿದ್ದರು. ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದರು.

ಜನತಾ ದಳದಲ್ಲಿದ್ದ ಜಾರ್ಜ್ ಫೆರ್ನಾಂಡೀಸರು ನಂತರ ತಮ್ಮದೇ ಸಮತಾ ಪಕ್ಷ ಆರಂಭಿಸಿದ್ದಲ್ಲದೆ ನಂತರದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದರು ಹಾಗೂ ವಿ.ಪಿ ಸಿಂಗ್ ಅವರ ಆಡಳಿತಾವಧಿಯಲ್ಲಿ ರೈಲ್ವೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಹಾಗೂ ಕೊನೆಯ ಬಾರಿಗೆ ಅವರು 2009 ರ ಆಗಸ್ಟ್ ನಿಂದ 2010 ರ ಜೂಲೈ ವರೆಗೆ ರಾಜ್ಯಸಭಾ ಸದ್ಯಸರಾಗಿದ್ದರು.

 

 

ಒಟ್ಟಿನಲ್ಲಿ ಹೋರಾಟಗಾರ, ಕಾರ್ಮಿಕ ಮುಖಂಡ, ಪ್ರಖರ ಸಮಾಜವಾದಿ, ಅತ್ಯುತ್ತಮ ವಾಗ್ಮಿ ಹೀಗೆ ಅನೇಕ ವಿಶೇಷಣಗಳನ್ನು ಹೊಂದಿದ್ದ ಮಹಾ ಮಾನವತಾವಾದಿ ರಾಜಕಾರಣಿ ಜಾರ್ಜ್ ಫೆರ್ನಾಂಡಿಸ್ ಇಂದು ನಮ್ಮನ್ನೆಲ್ಲ ಅಗಲಿ ಆಕಾಶದ ನಕ್ಷತ್ರವಾಗಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top