fbpx
ಮನೋರಂಜನೆ

ಬಿಗ್ ಬಾಸ್ ಖ್ಯಾತಿಯ ಜಗನ್ ಗೆ ಕೂಡಿ ಬಂತು ಕಂಕಣಭಾಗ್ಯ.

ಕನ್ನಡ ಕಿರುತೆರೆ ಯಲ್ಲಿ ಹೀರೋ ಪಾತ್ರದಾರಿ ಜಗನ್ ಗಾಂಧಾರಿ,ಪುನರ್ ವಿವಾಹ ಸೇರಿದಂತೆ ಇನ್ನೂ ಅನೇಕ ಧಾರಾವಾಹಿಗಳಲ್ಲಿ ನಟನೆ ಮಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡು ಮನೆ ಮನೆಗಳಲ್ಲಿ ಹೆಸರು ಮಾಡಿದವರು,ನಂತರ ನಟನೆ ಜೊತೆ ನಿರೂಪಣೆ ಮಾಡುವ ಹೊಣೆ ನಿರ್ವಹಿಸಲು ನಿರ್ಧಾರ ಮಾಡಿದರು ಆದ್ರೆ ನಿರೂಪಣೆ ಇವರಿಗೆ ಅಷ್ಟು ಕೂಡಿ ಬರಲಿಲ್ಲ ನಂತರ ದೊರೆತ ಬಿಗ್ ಬಾಸ್ ಕನ್ನಡ 5 ಸೀಸನ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟ ಆಡಿ ಅನೇಕ ಕಾಂಟ್ರವರ್ಸಿಗಳಲ್ಲಿ ಸಿಲುಕಿಕೊಂಡವರು ,ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಸ್ವಲ್ಪ ದಿನ ಬ್ರೇಕ್ ತೆಗೆದು ಕೊಂಡಿದ್ದ ಜಗನ್ ಈಗ ಮತ್ತೆ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದರ ಜೊತೆ ಅವರ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ ,ಅದು ಏನು ಅಂದ್ರೆ ಜಗನ್ ವಿವಾಹ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ,ಈಗಾಗಲೆ ನಿಶ್ಚಿತಾರ್ಥ ಮಾಡಿಕೊಂಡಿರುವ ಜಗನ್ನಾಥ್ ಶೀಘ್ರದಲ್ಲೇ ಸಪ್ತಪದಿ ತುಳಿಯುತ್ತಿದ್ದಾರೆ. ಇವರು ಮದುವೆಯಾಗುತ್ತಿರುವ ಹುಡುಗಿ ಯಾರು ಅಂತ ಅವರ ಮಾತುಗಳಲ್ಲೇ ಕೇಳಿ “ತಾನು ಮದುವೆಯಾಗುತ್ತಿರುವ ಯುವತಿ ಹೆಸರು ರಕ್ಷಿತಾ ಮುನಿಯಪ್ಪ. ಕಳೆದ ಮೂರು ವರ್ಷಗಳಿಂದ ನಾವಿಬ್ಬರೂ ಗೆಳೆಯರಾಗಿದ್ದು, ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಂಡಿದ್ದೇವೆ. ಒಬ್ಬರನ್ನೊಬ್ಬರು ಪ್ರೀತಿಸಿಕೊಂಡೆವು” ಎನ್ನುತ್ತಾರೆ ಜಗನ್.

 

 

 

ರಕ್ಷಿತಾ ಅವರು ಫ್ಯಾಷನ್ ಡಿಸೈನರ್ ಆಗಿದ್ದು ಈ ಹಿಂದೆಯೇ ಇವರಿಬ್ಬರ ರಿಲೇಷ‌ನ್‍ಶಿಪ್ ಬಗ್ಗೆ ತಿಳಿಸಿದ್ದರು. “ಎಂಜಿನಿಯರಿಂಗ್ ಮುಗಿಸಿದ ಬಳಿಕ ರಕ್ಷಿತಾ ಎರಡು ವರ್ಷಗಳ ಕಾಲ ದುಬೈನಲ್ಲಿದ್ದು ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿದರು. ಮದುವೆಯಾಗಲು ಈಗ ಸೂಕ್ತ ಸಮಯ ಅನ್ನಿಸಿ ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಿದ್ದೇವೆ ಎಂದಿದ್ದಾರೆ ಜಗನ್ನಾಥ್ ಚಂದ್ರಶೇಖರ್. ಇದೇ ಮೇ 23ರಂದು ನಡೆಯಲಿದೆ. ಮೇ 22ರಂದು ಸಂಗೀತ ಕಾರ್ಯಕ್ರಮ ಹಾಗೂ ಮೇ 23ರಂದು ಮದುವೆ ನಡೆಯಲಿದೆ. ಮೇ 26ಕ್ಕೆ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎರಡೂ ಕುಟುಂಬಗಳು ಇಲ್ಲೇ ಇರುವ ಕಾರಣ ಈ ಎಲ್ಲಾ ಕಾರ್ಯಕ್ರಮಗಳು ಬೆಂಗಳೂರಿನಲ್ಲೇ ನಡೆಯಲಿವೆ ಎಂಬ ಮಾಹಿತಿಯನ್ನು ಜಗನ್ನಾಥ್ ನೀಡಿದ್ದಾರೆ. ಇವರು ಸಂಸಾರ ಜೀವನ ಚೆನ್ನಾಗಿದ್ದು ಸುಖಕರವಾದ ಜೀವನ ನಡೆಸಲಿ ಎಂದು ನಾವು ಆಶಿಸೋಣ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top