fbpx
ಸಮಾಚಾರ

ಸಾವನಪ್ಪಿದ ಮಗ ಮರಳಿ ಬದುಕಿ ಬರುತ್ತಾನೆಂದು ಆತನಿಗಾಗಿ ಸ್ಮಶಾನದಲ್ಲಿ 38 ದಿನಗಳ ಕಾಲ ಕಾದ ತಂದೆ !

ಪ್ರಪಂಚದಲ್ಲಿ ವಿಚಿತ್ರವಾದ ಘಟನೆಗಳು ನಡೆಯುತ್ತಲೇ ಇರುತ್ತವೆ, ಇದೀಗ ಅಂತಹದೇ ಒಂದು ಘಟನೆ ನಡೆದಿದ್ದು ಸಾವನ್ನಪ್ಪಿದ ಮಗ ಮತ್ತೆ ಬದುಕಿ ಬರುತ್ತಾನೆ ಎಂದುಕೊಂಡು ತಂದೆಯೊಬ್ಬರು 38 ದಿನ ಸ್ಮಶಾನ ಕಾದಿರೋ ವಿಚಿತ್ರ ಘಟನೆ ಆಂಧ್ರಪ್ರದೇಶದಲ್ಲಿ ಘಟಿಸಿದೆ.

ಹೌದು, ಮಗ ಬದುಕಿ ಬರುತ್ತಾನೆಂದು ತಂದೆ ಸ್ಮಶಾನದಲ್ಲಿ ಕಾದಿದ್ದಷ್ಟೇ ಅಲ್ಲದೆ ಆತನಿಗಾಗಿ ಬರೋಬ್ಬರಿ ₹7 ಲಕ್ಷ ರೂ ವ್ಯಯಿಸಿದ್ದಾರೆ. ಇದು ವಿಚಿತ್ರ ಎನಿಸಿದರೂ ನೀವು ನಂಬಲೇಬೇಕು!

ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಕೋಡೂರು ನಿವಾಸಿಯಾದ ತುಪ್ಪಾಕುಲ ರಾಮು(56) ಅವರ ಮಗ ಟಿ. ಶ್ರೀನಿವಾಸುಲು(26)ಕಳೆದ ತಿಂಗಳು ಜ್ವರದಿಂದಾಗಿ ಸಾವನ್ನಪ್ಪಿದ್ದು ಇದರಿಂದ ಮನ ನೊಂದ ತಂದೆ ಮಗನ ಅಗಲಿಕೆಯನ್ನು ಅರಗಿಸಿಕೊಳ್ಳಲಾಗದೆ ಈ ರೀತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

2014 ರಿಂದ ಕುವೈತ್​​ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸುಲು 3 ತಿಂಗಳ ಹಿಂದಷ್ಟೇ ಮನೆಗೆ ಬಂದಿದ್ದರು. ತನ್ನೊಂದಿಗೆ ಆಟೋ ರಿಕ್ಷಾವನ್ನೂ ತಂದು, ಜೀವನನಿರ್ವಹಣೆಗಾಗಿ ಹಣ ಸಂಪಾದಿಸುತ್ತಿದ್ದರು. ಈ ಮಧ್ಯೆ ಜ್ವರಕ್ಕೆ ತುತ್ತಾದ ಶ್ರೀನಿವಾಸುಲು ಅವರನ್ನು ತಿರುಪತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ವಿಪರ್ಯಾಸದಿಂದ ಅವರು ಜವರಾಯನ ಕರೆಗೆ ಓಗೊಡಬೇಕಾಯಿತು ,ಹೀಗಾಗಿ ಮಗನ ಸಾವಿನಿಂದ ತತ್ತರಿಸಿ ಹೋದ ತಂದೆ ಹೇಗಾದರೂ ಮಗನನ್ನು ಮತ್ತೆ ಉಳಿಸಿಕೊಳ್ಳಲು ವಾಮಾಚಾರಿಗಳ ಮೊರೆ ಹೋಗಿ ವಾಮಾಚಾರಿಗಳಿಗೆ ಬರೋಬ್ಬರಿ ₹7 ಲಕ್ಷ ಹಣವನ್ನು ರಾಮು ರವರು ನೀಡಿರುವುದಾಗಿ ತಿಳಿದು ಬಂದಿದ್ದು ‘ನಿಮ್ಮ ಮಗನನ್ನು ಬದುಕಿಸಬೇಕಾದರೆ 41 ದಿನಗಳವರೆಗೆ ಸಮಾಧಿಯನ್ನು ಕಾಯಬೇಕು’ ಎಂದು ವಾಮಾಚಾರಿಯೊಬ್ಬರು ಹೇಳಿದ ಸಲುವಾಗಿ ರಾಮು ರವರು ಅಷ್ಟು ದಿನಗಳ ಕಾಲ ಸಮಾಧಿಯ ಮುಂದೆ ಮಗನಿಗಾಗಿ ಕಾದಿದ್ದರು ಎನ್ನಲಾಗಿದೆ.

ಈ ವಿಚಿತ್ರ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಾಗ ಅವರು ಸ್ಮಶಾನಕ್ಕೆ ಹೋಗಿ ರಾಮು ಅವರೊಂದಿಗೆ ಮಾತನಾಡಿ ಅವರನ್ನು ಮನೆಗೆ ಕಳುಹಿಸಿದ್ದಾರೆ . ಆದರೆ ಮನೆಗೆ ಹೊರಟರೂ ರಾಮು, ತನ್ನ ಮಗನನ್ನು ವಾಮಾಚಾರಿಗಳು ಬದುಕಿಸುತ್ತಾರೆ ಎಂದೇ ನಂಬಿದ್ದರು. ಒಟ್ಟಿನಲ್ಲಿ ಈ ವಿಷಯವಾಗಿ ವಾಮಾಚಾರಿಯ ವಿರುದ್ಧ ದೂರು ದಾಖಲಿಸಲು ರಾಮು ರವರು ನಿರಾಕರಿಸಿದ್ದು ‘ನನ್ನ ಇಚ್ಛೆಯಂತೆ ಆಚರಣೆಗಳಲ್ಲಿ ನಂಬಿಕೆ ಇಡುವುದು ನನ್ನ ಹಕ್ಕು. ಅವರು ಯಾವುದೇ ತಪ್ಪು ಮಾಡಿಲ್ಲ’ ಎಂದು ಹೇಳಿಕೆ ಕೊಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top