ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪಕ್ಷದವರು ಇನ್ನೊಂದು ಪಕ್ಷದ ವಿರುದ್ಧ ಅಥವಾ ಎದುರು ಪಕ್ಷದ ರಾಜಕಾರಣಿಗಳ ಬಗ್ಗೆ ಏನಾದರು ಬರೆದು ಪೋಸ್ಟ್ ಮಾಡುವುದು ಇತ್ತೀಚಿಗೆ ಸರ್ವೇ ಸಾಮಾನ್ಯವಾಗಿ ಹೋಗಿದ್ದು. ಅದರಂತೆ ಬಿಜೆಪಿ ಬಳಗ ಸಿಎಂ ಕುಮಾರಸ್ವಾಮಿ ವಿರುದ್ಧ ಟ್ವೀಟ್ ಮಾಡಿದೆ.
ಮುಖ್ಯಮಂತ್ರಿ ಅವರ ವಿರುದ್ಧ ಬಿಜೆಪಿ ಟ್ವೀಟ್ ಮಾಡುವ ಮೂಲಕ ಎಚ್.ಡಿ ಕುಮಾರಸ್ವಾಮಿ ರವರ ಮತ್ತು ಹಲವು ರಾಜಕಾರಣಿಗಳ ಕೋಪಕ್ಕೆ ಗುರಿಯಾಗಿದ್ದಾರೆ .
ಅಷ್ಟಕ್ಕೂ ಬಿಜೆಪಿ ಟ್ವೀಟ್ ಏನು ಗೊತ್ತೇ?
‘ಕರ್ನಾಟಕದಲ್ಲಿ ನಾಟಕ ಶೀರ್ಷಿಕೆಯಡಿ’ ಬಿಜೆಪಿ ಟ್ವೀಟ್ ಮಾಡಿದ್ದೂ, ”ಸ್ಕ್ರಿಪ್ಟ್ 1: ನಾನು ವಿಷಕಂಠ, ಸ್ಕ್ರಿಪ್ಟ್ 2: ನಾನು ಕ್ಲರ್ಕ್ನಂತೆ ಕೆಲಸ ಮಾಡುತ್ತಿದ್ದೀನಿ , ಸ್ಕ್ರಿಪ್ಟ್ 3: ನಾನು ಸದ್ಯದಲ್ಲೇ ಸಾಯಬಹುದು, ಸ್ಕ್ರಿಪ್ಟ್ 4: ಸಿಂಗಾಪುರದಲ್ಲಿ ಪಾರ್ಟಿ, ಸ್ಕ್ರಿಪ್ಟ್ 5: ಸೀತಾರಾಮ ಕಲ್ಯಾಣ ವೀಕ್ಷಣೆ, ಸ್ಕ್ರಿಪ್ಟ್ 6: ನಾನು ರಾಜೀನಾಮೆ ನೀಡುತ್ತೇನೆ”- ಇದು ಕರ್ನಾಟಕದಲ್ಲಿ ನಾಟಕ! ನಿರ್ಮಾಣ, ನಿರ್ದೇಶನ, ಚಿತ್ರಕಥೆ-ಸಿಎಂ ಕುಮಾರಸ್ವಾಮಿ” ಎಂದು ಬರೆದು ಪೋಸ್ಟ್ ಮಾಡಿದೆ .
‘Nataka’ in Karnataka,
Script 1 : I’m Vishakanta
Script 2 : I work as clerk
Script 3 : I may die soon
Script 4 : Party in Singapore
Script 5 : Watch Sitaramakalyana
Script 6 : I will resign
Written, Produced & directed by CM @hd_kumaraswamy.
— BJP Karnataka (@BJP4Karnataka) January 28, 2019
ಒಟ್ಟಿನಲ್ಲಿ ಸಕ್ರಿಯ ರಾಜಕಾರಣದಲ್ಲಿ ಕುಮಾರಸ್ವಾಮಿ ಅವರು ಹಾಗಾಗೇ ನೀಡುವ ಹೇಳಿಕೆಗಳು ಮತ್ತು ನಿರ್ಧಾರಗಳನ್ನು ಪರಿಗಣಿಸಿ ಬಿಜೆಪಿ ಈ ರೀತಿ ಟ್ವೀಟ್ ಮಾಡಿದ್ದೂ, ಇದೀಗ ಈ ಟ್ವೀಟ್ ವೈರಲ್ ಆಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
