ಲೋಕಸಭಾ ಚುನಾವಣೆ ಇನ್ನೇನು ಸಮೀಪಿಸುತ್ತಿದ್ದು, ಸರ್ವ ಪಕ್ಷಗಳು ಭರದ ಸಿದ್ದತೆಯಲ್ಲಿ ತೊಡಗಿಕೊಂಡಿವೆ. ಹೇಗಾದರೂ ಮಾಡಿ ಜನರ ಮನಸೂರೆಗೊಂಡು ಓಟು ಗಿಟ್ಟಿಸಬೇಕೆಂದು ಸರ್ವ ಪಕ್ಷಗಳು ಹಪಹಪಿಸುತ್ತಿದ್ದು, ಓಟಿಗಾಗಿ ಒಂದಷ್ಟು ಆಶ್ವಾಸನೆಗಳನ್ನು ನೀಡುತ್ತಿವೆ.
ಇದರ ಹಿನ್ನೆಲೆಯಲ್ಲಿ ಛತ್ತೀಸ್ಗಢದ ರಾಯಪುರದ ಕಿಸಾನ್ ಆಹಾರ್ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್ ಗಾಂಧಿ 15 ವರ್ಷಗಳ ಬಳಿಕ ಅಧಿಕಾರಕ್ಕೆ ಬರಲು ಕಾರಣರಾದ ಚತ್ತೀಸ್ಗಢದ ಜನರಿಗೆ, ವಿಶೇಷವಾಗಿ ರೈತರಿಗೆ ಕೃತಜತ್ಞೆಗಳನ್ನು ತಿಳಿಸಿದ್ದಾರೆ. ಹಾಗೂ ಇದೆ ಸಂದರ್ಭದಲ್ಲಿ ಒಂದು ಮಹತ್ತರ ಆಶ್ವಾಸನೆ ಕೊಟ್ಟ ರಾಹುಲ್ ಗಾಂಧಿ ಅವರು “ದೇಶದ ಎಲ್ಲಾ ರಾಜ್ಯಗಳಲ್ಲೂ ಇರುವ ಬಡವರಿಗೆ ಕನಿಷ್ಠ ಆದಾಯ ದೊರೆಯುವಂತೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಇಂತದ ಯೋಜನೆ ವಿಶ್ವದಲ್ಲೇ ಮೊದಲು ಆಗಿದ್ದು, ಬೇರೆ ಯಾವುದೇ ದೇಶದಲ್ಲಿ ಇಂತಹ ಯೋಜನೆ ಜಾರಿ ಮಾಡಿಲ್ಲ” ಎಂದು ಭರವಸೆ ಕೊಟ್ಟಿದ್ದಾರೆ.
#WATCH Rahul Gandhi in Atal Nagar, Chhattisgarh: After winning in 2019 we’ll take a step that no party has ever taken, we will ensure minimum universal basic income for the poor. No government in the world has ever taken such a decision. pic.twitter.com/V064QfsWrM
— ANI (@ANI) January 28, 2019
We have now taken a step that no govt has taken before. We have decided to give every poor person a Minimum Income Guarantee when we form the govt. This is a historic step taken to eradicate hunger and poverty: CP @RahulGandhi #CongressForMinimumIncomeGuarantee pic.twitter.com/pR0v61cKWZ
— Congress (@INCIndia) January 28, 2019
ಹೀಗಾಗಿ ರಾಹುಲ್ ಗಾಂಧಿ ಅವರು 2019ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರ ಕುಟುಂಬಕ್ಕೆ ಕನಿಷ್ಠ ಆದಾಯ ಗ್ಯಾರಂಟಿ ಎಂದಿದ್ದಲ್ಲದೆ ದೇಶದಲ್ಲಿ ಯಾರು ಬಡತನ ಮತ್ತು ಹಸಿವಿನಿಂದ ಇರಬಾರದು ಎಂಬುವುದು ನಮ್ಮ ಉದ್ದೇಶ. ಈ ಯೋಜನೆಯನ್ನು ಛತ್ತೀಸ್ಗಢ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ಜಾರಿ ಮಾಡಲಾಗುವುದು ಎಂದು ಹೇಳಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
