ಈ ವರ್ಷದ ಬಹುನೀರಿಕ್ಷಿತ ಸಿನಿಮಾ ಎಂದೇ ಖ್ಯಾತಿ ಗಳಿಸಿದ್ದ ಸ್ಯಾಂಡಲ್ವುಡ್ ಯುವರಾಜ , ಸಿಎಂ ಕುಮಾರಸ್ವಾಮಿ ಪುತ್ರನ ಅಭಿನಯದ ಮತ್ತು ಎ.ಹರ್ಷ ನಿರ್ದೇಶನದ ‘ಸೀತಾರಾಮ ಕಲ್ಯಾಣ’ ಚಿತ್ರ ಜ.೨೫ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶ್ವಸಿಯಾಗಿ ಮುನ್ನುಗುತ್ತಿದೆ. ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಾಣದ ಸಿನಿಮಾ ಇದಾಗಿದ್ದು ಸುಮಾರು 300 ಕ್ಕೂ ಹೆಚ್ಚಿನ ಥಿಯೇಟರ್ ಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡಿದೆ.
‘ಸೀತಾರಾಮ ಕಲ್ಯಾಣ’ ಸಿನಿಮಾ ನೋಡಿದ ರಾಜಕೀಯ ಗಣ್ಯರು, ಕೆಲವು ಸೆಲೆಬ್ರೆಟಿಗಳು ನಿಖಿಲ್ ಕುಮಾರಸ್ವಾಮಿ ಅಭಿನಯಕ್ಕೆ ಮನಸೋತಿದ್ದು. ನಿಖಿಲ್ ತಾತ ದೇವೇಗೌಡ್ರು ಸಿನಿಮಾ ನೋಡಿ ಕಣ್ಣೀರಾಕಿದ್ದಾರೆ ಮತ್ತು ನಿಖಿಲ್ ಅಪ್ಪಾ ಸಿಎಂ ಕುಮಾರಸ್ವಾಮಿ ಮಗನ ನೃತ್ಯಕ್ಕೆ ಶಬ್ಬಾಶ್ ಗಿರಿ ನೀಡಿದ್ದಾರೆ. ಇದೀಗ ಇದರ ಹಿನ್ನೆಲೆಯಲ್ಲೇ ಕಿಚ್ಚ ಸುದೀಪ್ ಕೂಡ ‘ಸೀತಾರಾಮ ಕಲ್ಯಾಣ’ ನೋಡಿ ಶುಭ ಹಾರೈಸಿದ್ದಾರೆ ಮತ್ತು ಸಿನಿಮಾದಲ್ಲಿನ ನಿಖಿಲ್ ಆಕ್ಟಿಂಗ್ ಗೆ ಫಿದಾ ಆಗಿ ನಿಖಿಲ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ :
ಅಷ್ಟಕ್ಕೂ ನಿಖಿಲ್ ಆಕ್ಟಿಂಗ್ ಬಗ್ಗೆ ಕಿಚ್ಚ ಹೇಳಿದ್ದೇನು?
ಚಿತ್ರದಲ್ಲಿ ನಿಖಿಲ್ ಭರವಸೆ ಮೂಡಿಸುವ ನಟನಂತೆ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯ ಹಾಗೂ ಸಂದರ್ಭವನ್ನು ವ್ಯಕ್ತ ಪಡಿಸಿದ ರೀತಿ ತುಂಬಾ ಇಷ್ಟವಾಯಿತು. ನಿಮ್ಮನ್ನು ಜನರಿಗೆ ಇನ್ನೂ ಹೆಚ್ಚು ಹತ್ತಿರವಾಗುವ ಪಾತ್ರದಲ್ಲಿ ನೋಡಲು ಇಚ್ಛಿಸುತ್ತೇನೆ. ಬೆಸ್ಟ್ ವಿಶ್ ಮೈ ಫ್ರೆಂಡ್..’ ಎಂದು ನಿಖಿಲ್ ನಟನೆಗೆ, ಚಿತ್ರಕ್ಕೆ ಬೇಷ್ ಎಂದಿದ್ದಾರೆ ಕಿಚ್ಚ.
Nikhil surely looks a promising actor. luvd his subtlety in performance n has delivered what’s expected outta him towards the scene written. Would luv to see him in a script and a character mch simpler to take him close to peoples hearts. Bst wishes my friend.#Seetharamakalyana
— Kichcha Sudeepa (@KicchaSudeep) January 28, 2019
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
