fbpx
ಭವಿಷ್ಯ

ಮಾರ್ಚ್ 22- ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಶುಕ್ರವಾರ, 22 ಮಾರ್ಚ್ 2019
ಸೂರ್ಯೋದಯ : 6:22 am
ಸೂರ್ಯಾಸ್ತ: 6:30 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಫಾಲ್ಗುಣ
ಪಕ್ಷ : ಶುಕ್ಲಪಕ್ಷ
ತಿಥಿ :ದ್ವಿತೀಯಾ 24:55
ನಕ್ಷತ್ರ :ಹಸ್ತ 11:06
ಯೋಗ :ಧ್ರುವ 25:42
ಕರಣಂ:ತೈತುಲ 14:20 ಗರಿಜ 24:55

ಅಭಿಜಿತ್ ಮುಹುರ್ತ:12:02 pm – 12:50 pm
ಅಮೃತಕಾಲ :3:14 am – 4:42 am

ರಾಹು ಕಾಲ:10:56 am – 12:26 pm
ಗುಳಿಕ ಕಾಲ:7:56 am – 9:26 am
ಯಮಗಂಡ:3:26 pm – 4:56 pm

 

 

ನಿಮ್ಮ ಸಕಾರಾತ್ಮಕ ಚಿಂತನೆಗಳಿಗೆ ಬೆಂಬಲ ಸಿಗುವುದು. ಹಾಗಾಗಿ ಮಾಡಬೇಕೆಂದಿರುವ ಎಲ್ಲಾ ಕೆಲಸಗಳು ಸುಗಮವಾಗುವುದು. ಅಂತೆಯೇ ಹಣಕಾಸಿನ ಪರಿಸ್ಥಿತಿಯು ಸುಧಾರಿಸುವುದು.

ಜೀವನದಲ್ಲಿನ ಏರು, ಪೇರುಗಳು ಮನುಷ್ಯನ ನಿಜಗುಣವನ್ನು ಹೊರ ಜಗತ್ತಿಗೆ ಪ್ರಕಟಿಸಲು ಸಹಕಾರಿಯಾಗುವುದು. ಹಾಗಾಗಿ ಕಷ್ಟ ಎಂದು ತಲೆಮೇಲೆ ಕೈಹೊತ್ತು ಕೂಡುವುದು ಸುಸಂಸ್ಕೃತರ ಕೆಲಸವಲ್ಲ. ನಿಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡಿ.

ಬಿರುಗಾಳಿಯೊಂದು ನಿರ್ಮಾಣವಾಗಿ ನಿಮ್ಮ ಆತ್ಮವಿಶ್ವಾಸವನ್ನು ಅಲುಗಾಡಿಸುವ ಸಂದರ್ಭ ಎದುರಾಗುತ್ತದೆ. ಬರಲಿರುವ ಅವಕಾಶಗಳನ್ನು ಕಳೆದುಕೊಳ್ಳಬೇಡಿ. ವಾಹನಗಳನ್ನು ಚಲಾಯಿಸುವಾಗ ಎಚ್ಚರವಿರಲಿ. ಕುಲದೇವತಾ ಪ್ರಾರ್ಥನೆ ಮಾಡಿ.

ನಡೆಯುವ ಮನುಜ ಎಡುವುವನು. ಅಂತೆಯೇ ಕೆಲವು ಕಾರ್ಯಗಳಲ್ಲಿ ತಪ್ಪು ನುಸುಳುವುದು ಸಹಜ. ಆದರೆ ಅದರ ಬಗ್ಗೆ ಹೆಚ್ಚು ಚಿಂತಿಸದೆ ಮುಂದಿನ ಕಾರ್ಯಗಳ ಬಗ್ಗೆ ಚಿಂತಿಸುವುದು ಒಳ್ಳೆಯದು.

 

ಇತ್ತೀಚಿನ ದಿನಗಳ ವೈಫಲ್ಯಗಳ ಬಗ್ಗೆ ಯೋಚನೆ ಹೆಚ್ಚಾಗಿದೆ. ಈ ಬಗ್ಗೆ ಯೋಚಿಸದೇ ಹೊಸ ಉತ್ಸಾಹದಿಂದ ಕಾರ್ಯ ಆರಂಭಿಸಿ. ಇದರಿಂದ ಹೆಚ್ಚಿನ ಹಣಕಾಸು ಬರುವುದು. ಮಾನಸಿಕ ನೆಮ್ಮದಿ ದೊರೆಯುವುದು.

 

ಶ್ರಮ ಪಡುವಂತಹ ವಿಚಾರಗಳು ನಿಮಗೆ ಹೊಸತೇನಲ್ಲ. ಧೈರ್ಯದಿಂದ ಮುನ್ನುಗ್ಗಿ. ಯಶಸ್ಸಿಗೆ ಅನೇಕ ದಾರಿಗಳಿವೆ. ನಿಮ್ಮ ಯಶಸ್ಸನ್ನು ಕಂಡು ಇತರರಿಗೆ ಅಸೂಯೆ ಉಂಟಾಗುವುದು. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಕೈಬಿಗಿ ಹಿಡಿಯುವುದು ಒಳ್ಳೆಯದು.

 

ಇರುವುದನ್ನು ಬಿಟ್ಟು ಇಲ್ಲದಿರುವುದರತ್ತ ಗಮನ ಹರಿಸಬೇಡಿ. ನೂರೆಂಟು ಕಡೆ ಗುಂಡಿ ಅಗೆಯುವುದಕ್ಕಿಂತ ಒಂದೇ ಕಡೆ ಆಳವಾದ ಗುಂಡಿ ತೆಗೆದಲ್ಲಿ ನೀರು ದೊರೆಯಲು ಸಾಧ್ಯವಾಗುತ್ತದೆ. ಹಾಗಾಗಿ ಒಂದೇ ಕಡೆ ಗಮನವನ್ನು ಕೇಂದ್ರೀಕರಿಸಿ.

 

ನಿಮ್ಮ ದಾರಿ ಬಿಟ್ಟು ಅನ್ಯ ಮಾರ್ಗ ಹಿಡಿಯಲು ಹೋಗದಿರಿ. ಇದರಿಂದ ನೀವು ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ಗುರುವಿನ ಬೆಂಬಲ ನಿಮಗೆ ಇರುವುದರಿಂದ ಹೆಚ್ಚಿನ ತೊಂದರೆ ಆಗುವುದಿಲ್ಲ.

 

ಹಿರಿಯರನ್ನು ನಂಬಿ ಮನಬಿಚ್ಚಿ ಮಾತನಾಡಿ. ನಿಮ್ಮಲ್ಲಿರುವ ಒತ್ತಡಗಳಿಗೆ ಆ ಮೂಲಕ ಮುಕ್ತಿಯನ್ನು ನೀಡಿ ಮತ್ತು ನೀವು ನಿರಮ್ಮಳರಾಗಿ. ಇಂದಿನ ಕಾರ್ಯಗಳು ದೈವಕೃಪೆಯಿಂದ ಸುಲಭವಾಗಿ ಮುಕ್ತಾಯ ಹಂತ ತಲುಪುವುದು

ದಿನದ ಕೆಲಸಗಳು ಏಕತಾನತೆಯಿಂದ ಕೂಡಿರುವುದರಿಂದ ಮನಸ್ಸಿಗೆ ಬೇಸರವಾಗುವುದು. ನಿಮ್ಮ ಹಳೆಯ ಸ್ನೇಹಿತರಿಗೆ ದೂರವಾಣಿ ಮಾಡಿ ಯೋಗಕ್ಷೇಮವನ್ನು ವಿಚಾರಿಸಿ. ಅವರು ತಿಳಿಸುವ ವಿಷಯವು ನಿಮಗೆ ಹೊಸ ಚೈತನ್ಯವನ್ನು ತುಂಬುವುದು.

 

 

ದುಡಿದ ಹಣ ನೀರಿನಂತೆ ಖರ್ಚಾಗುತ್ತಿರುವುದರಿಂದ ಸಹಜವಾಗಿಯೇ ನಾಳಿನ ಚಿಂತೆ ಎದುರಾಗುವುದು. ಚಿಂತ್ಯಾಕ ಮಾಡುತೀ ಚಿನ್ಮಯನಿದ್ದಾನೆ. ಆಂಜನೇಯ ಸ್ತೋತ್ರ ಪಠಿಸಿ. ಹಿರಿಯರಿಗೆ ನಮಿಸಿ ಹೊರಗೆ ಕಾಲಿಡಿ.

ಜೀವನ ಎಂದರೆ ಕಲ್ಲು ಮುಳ್ಳಿನ ಹಾದಿ. ಆ ಹಾದಿಯಲ್ಲಿಯೇ ಅನಿವಾರ‍್ಯವಾಗಿ ಸಾಗಬೇಕಾಗಿರುವುದರಿಂದ ಕಲ್ಲು ಮುಳ್ಳುಗಳಿಂದ ರಕ್ಷಿಸಿಕೊಳ್ಳಲು ಪಾದರಕ್ಷೆ ಹಾಕಿಕೊಳ್ಳುವಂತೆ ಭಗವಂತನ ನಾಮಸ್ಮರಣೆಯು ಭವಸಾಗರವನ್ನು ದಾಟಿಸುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top