fbpx
ಭವಿಷ್ಯ

ಮಾರ್ಚ್ 24- ನಾಳೆಯ ಪಂಚಾಂಗ ಮತ್ತು ದಿನಭವಿಷ್ಯ.

ಸ್ಥಳ- ಬೆಂಗಳೂರು.
ಭಾನುವಾರ, 24 ಮಾರ್ಚ್ 2019
ಸೂರ್ಯೋದಯ : 6:22 am
ಸೂರ್ಯಾಸ್ತ: 6:30 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಫಾಲ್ಗುಣ
ಪಕ್ಷ : ಶುಕ್ಲಪಕ್ಷ
ತಿಥಿ :ಚತುರ್ಥೀ 20:51
ನಕ್ಷತ್ರ :ಸ್ವಾತಿ 07:42
ಯೋಗ :ಹರ್ಷನ 20:06
ಕರಣಂ:ಬಾವ 09:35 ಬಾಲವ 20:51

ಅಭಿಜಿತ್ ಮುಹುರ್ತ:12:01 pm – 12:50 pm
ಅಮೃತಕಾಲ :10:29 pm – 12:03 am

ರಾಹು ಕಾಲ:4:56 pm – 6:27 pm
ಗುಳಿಕ ಕಾಲ:3:26 pm – 4:56 pm
ಯಮಗಂಡ:12:26 pm – 1:56 pm

 

ನೀವಾಗಿಯೇ ಸೃಷ್ಟಿಸಿಕೊಂಡ ಗೊಂದಲಗಳಿಗೆ ನಿಮ್ಮಿಂದಲೇ ಪರಿಹಾರ ಸಾಧ್ಯ. ಮಾನಸಿಕ ತಳಮಳ ಮರೆಯಲು ಬೇರೆ ಕಾರ್ಯಗಳಲ್ಲಿ ತೊಡಗಿಕೊಳ್ಳಿರಿ. ಖರ್ಚಿನ ಬಾಬ್ತು ನಿಮ್ಮ ಕೈಮೀರಿ ಹೋಗಲಿವೆ. ಆರ್ಥಿಕ ಮೂಲಗಳಲ್ಲಿ ವ್ಯತ್ಯಾಸ ಕಂಡು ಬರುವುದು.

 

ನಿಮ್ಮ ಉನ್ನತ ಭಾವನೆಗಳನ್ನು ಬೇರೆಯವರು ಅಪಾರ್ಥ ಮಾಡಿಕೊಳ್ಳುವರು. ಆದರೆ ಅದರ ಬಗ್ಗೆ ಉದಾಸೀನದಿಂದಿರಿ. ಮಾಡುತ್ತಿರುವ ಪರೋಪಕಾರ ಸರಿಯಾದ ಹಾದಿಯಲ್ಲೇ ಸಾಗಲಿದೆ.

 

ಅನಿರೀಕ್ಷಿತ ಬದಲಾವಣೆ ಅನಿವಾರ್ಯವಾದರೂ ಅದನ್ನು ರೂಢಿಸಿಕೊಳ್ಳದೇ ವಿಧಿಯಿಲ್ಲ. ಅರ್ಥವಿಲ್ಲದ ಖರ್ಚಿಗೆ ನಿಮ್ಮ ಅರ್ಧ ಸಂಪಾದನೆ ಕರಗಿ ಹೋಗುವುದು.

 

ಪರರಿಗೆ ಉಪಕಾರ ಮಾಡಲು ಹೋಗಿ ನೀವು ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇರುವುದು. ಹಣಕಾಸಿನ ವಿಷಯದಲ್ಲಿ ಮಧ್ಯಸ್ಥಿಕೆ ಬೇಡ. ಶತ್ರು-ಮಿತ್ರತ್ವದ ಆರಿವಿಟ್ಟುಕೊಂಡು ವ್ಯವಹರಿಸಿರಿ. ಟೀಕೆ ಟಿಪ್ಪಣಿಗಳಿಗೆ ಕಿವಿಕೊಡದಿರಿ. ಪ್ರತಿಯೊಂದು ಕೆಲಸದಲ್ಲೂ ತಾಳ್ಮೆ ಸಮಾಧಾನ ಬಹಳ ಮುಖ್ಯ.

 

 

ಹೊಸ ಗೆಳೆತನ ಜೀವನಕ್ಕೊಂದು ಹೊಸ ತಿರುವು ತರಲಿದೆ,ಎಷ್ಟೇ ಒತ್ತಡವಿದ್ದರೂ ವಿವೇಚನೆ ಕಳೆದುಕೊಳ್ಳಬೇಡಿ. ಕ್ರಮೇಣ ಒತ್ತಡದಿಂದ ಮುಕ್ತರಾಗುವಿರಿ.

 

 

ಮಿತಿ ಇಲ್ಲದ ಯಾಂತ್ರಿಕ ಜೀವನದಿಂದಾಗಿ ಬೇಸರ ಮೂಡಬಹುದು. ಕೆಲವು ವಿಚಾರಗಳಲ್ಲಿ ಬದಲಾವಣೆಯನ್ನು ತಂದುಕೊಂಡರೆ ಒಳಿತಾಗುವುದು. ದಿಢೀರನೆ ತಪ್ಪು ನಿರ್ಣಯಗಳನ್ನು ತೆಗೆದುಕೊಳ್ಳದಿರಿ. ಸಮಾಧಾನದಿಂದ ವರ್ತಿಸಲು ಕಲಿಯಿರಿ. ನಿಮಗೆ ಬಂದಂತಹ ಕಷ್ಟಗಳು ಇತರೆಯವರಿಗೂ ಇದೆ.

 

 

ಮತ್ತೊಬ್ಬರೊಂದಿಗೆ ಮಾತನಾಡುವಾಗ ಮೈಮರೆಯದಿರುವುದು ಉತ್ತಮ. ನಿಷ್ಕಲ್ಮಶ ಮನಸ್ಸಿನಿಂದ ವರ್ತಿಸುವುದು ನಿಮ್ಮ ಘನತೆಗೆ ತಕ್ಕುದಾಗಿರುತ್ತದೆ.ಹಲವು ಚಿಂತೆಗಳು ನಿಮ್ಮನ್ನು ಕಾಡುವುದು.

 

 

ನಿಮ್ಮ ಬದುಕಿನ ಶೈಲಿಯನ್ನು ಬದಲಾಯಿಸಿ ಪರ್ವಕಾಲ ತರುವುದು. ಆದರೆ ಈ ಸಂದರ್ಭದಲ್ಲಿ ಮತ್ತೊಬ್ಬರು ಹೇಳುವ ಹಿತವಾದ ಮಾತು ನಿಮಗೆ ಕಹಿ ಎನಿಸುವುದು. ಸ್ವಂತ ಆಲೋಚನೆಯಿಂದ ವ್ಯವಹಾರಗಳನ್ನು ನಿಭಾಯಿಸಲು ಕಲಿಯಿರಿ.

ಸಮಯವನ್ನು ವ್ಯರ್ಥಗೊಳಿಸದೆ ಸಾರ್ಥಕಗೊಳಿಸಲು ಪ್ರಯತ್ನಿಸಿ. ಇದು ಕಾರ್ಯ ಸಿದ್ಧಿಗೆ ಅನುಕೂಲವಾಗುವುದು. ಸಮಾಜದ ಗಣ್ಯವ್ಯಕ್ತಿಗಳು ನಿಮ್ಮ ಸಂಪರ್ಕಕ್ಕೆ ಬರುವುದರಿಂದ ನಿಮ್ಮ ಘನತೆ ಪ್ರತಿಷ್ಠೆ ಹೆಚ್ಚಲಿದೆ.

 

 

ನೀವು ಬಹು ಶ್ರಮಪಟ್ಟು ಸಾಧಿಸಲು ಹೊರಟ ಕೆಲಸವು ಕೊನೆ ಘಳಿಗೆಯಲ್ಲಿ ಕುಂಠಿತಗೊಳ್ಳುವುದು. ತಡವಾದರೂ ಕೂಡಾ ಅಂತಿಮ ಜಯ ನಿಮ್ಮದೇ. ಬಂಧು ಬಳಗದವರಲ್ಲಿ ಪ್ರೀತಿ ವಿಶ್ವಾಸವನ್ನು ವ್ಯಕ್ತಪಡಿಸಿರಿ.

 

ಮಾತಿನಲ್ಲಿ ನಯ, ನಾಜೂಕನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಮತ್ತೊಬ್ಬರ ಮೇಲಿರುವ ಕೋಪ-ತಾಪಗಳು ಬಹಿರಂಗವಾಗದಿರಲಿ. ಕೆಲಸದಲ್ಲಿ ತೀವ್ರ ಉದ್ವಿಗ್ನತೆ ಕಂಡು ಬರುವುದು.

 

ಹಿತೈಷಿಗಳಂತೆ ನಟಿಸುವವರಿಂದ ನೀವು ದುಂದುವೆಚ್ಚಕ್ಕೆ ಕಾರಣರಾಗುವಿರಿ. ದುರಭ್ಯಾಸಗಳಿಂದ ದೂರ ಇರುವುದು ಒಳ್ಳೆಯದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುವುದು

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top