fbpx
ಸಮಾಚಾರ

ಲಿಂಗಾಯತ ಧರ್ಮ ವಿಚಾರವಾಗಿ ಸುಳ್ಳು ಸುದ್ದಿ ಹರಡಿಸಿದ ಆರೋಪ- ಪೋಸ್ಟ್​ಕಾರ್ಡ್​ ಸಂಪಾದಕನ ಬಂಧನ.

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಬರೆದಿದ್ದಾರೆ ಎಂದು ನಕಲಿ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ಸೈಬರ್ ಘಟಕದ ಪೊಲೀಸರು Postcard.comನ ಸಂಪಾದಕ ಮಹೇಶ್ ವಿಕ್ರಂ ಹೆಗ್ಡೆಯನ್ನು ಬಂಧಿಸಿದ್ದಾರೆ.

ಗೃಹ ಸಚಿವ ಎಂಬಿ ಪಾಟೀಲ್ ಲಿಂಗಾಯತ ಧರ್ಮದ ವಿಚಾರವಾಗಿ ಸೋನಿಯಾ ಗಾಂಧಿಗೆ ಪತ್ರ ಬರೆದ್ದಾರೆಂದು ನಕಲಿ ಪತ್ರವನ್ನು ಮಹೇಶ್​ ಹೆಗ್ಡೆ ಬಿಜೆಪಿ ಬೆಂಬಲಿತ ಫೇಸ್ಬುಕ್ ಪೇಜುಗಳ ಮೂಲಕ ವೈರಲ್ ಮಾಡಿದ್ದರು. ಬಳಿಕ ಈ ಪತ್ರವು ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿತ್ತು.

 

ಇದನ್ನು ಗಮನಿಸಿದ್ದ ಗೃಹ ಸಚಿವ ಎಂ.ಬಿ.ಪಾಟೀಲ ಅವರು ಈ ಪತ್ರವನ್ನು ನಾನು ಬರೆದಿಲ್ಲ. ಯಾರೋ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿ ಸಚಿವರು ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ದೂರು ಆಧರಿಸಿ, ಸಿಐಡಿ ಸೈಬರ್ ವಿಂಗ್‌ ಪೊಲೀಸರು ಆರೋಪಿ ಮಹೇಶ್​ ಹೆಗ್ಡೆನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

 

 

ಈ ಹಿಂದೆಯೂ ಜೈಲು ಸೇರಿದ್ದ ಮಹೇಶ್ ವಿಕ್ರಂ:
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿಸುವುದ್ರಲ್ಲಿ ಕುಖ್ಯಾತಿಯಾಗಿರುವ ಮಹೇಶ್​ ಹೆಗ್ಡೆ ಇಲ್ಲಿಯವರೆಗೆ ವಿವಿಧ ಪ್ರಕರಣಗಳ ಸಂಬಂಧ ನಾಲ್ಕು ಬಾರಿ ಬಂಧನಕ್ಕೆ ಒಳಗಾಗಿದ್ದಾರೆ. 2018ರ ಮಾರ್ಚ್​ 29ರಂದು ಕಾಂಗ್ರೆಸ್ ವಿರುದ್ಧ ಅವಹೇಳನಕಾರಿ ಸುಳ್ಳು ಸುದ್ದಿ ಪ್ರಕಟಿಸಿ ಜೈಲು ಸೇರಿದ್ದರು. ಜೈನ ಮುನಿ ಯೋರ್ವರ ಕುರಿತು ದೇಶಾದ್ಯಂತ ವೈರಲ್ ಆಗಿದ್ದ ಸುದ್ದಿಯೊಂದನ್ನು ತಿರುಚಿ ಕೋಮು ಗಲಭೆ ಸೃಷ್ಠಿಸುವ ಸುದ್ದಿ ಪ್ರಕಟ ಮಾಡಿದ್ದ ಆರೋಪದ ಮೇಲೆ ಮಹೇಶ್​ ಹೆಗ್ಡೆ ಒಮ್ಮೆ ಜೈಲಿಗೆ ಹೋಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top