fbpx
ಕ್ರಿಕೆಟ್

ಈ ವಿಶ್ವ ದಾಖಲೆ ಮಾಡಿದ 10ನೇ ಆಟಗಾರ ಎನಿಸಿಕೊಂಡ ಮೊಹಮದ್ ಶಮಿ.

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾರತದ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ, ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ವೇಗಿ ಭುವನೇಶ್ವರ್ ಕುಮಾರ್ ಬದಲಿಗೆ ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಆಡಿದ ಮೊಹಮ್ಮದ್ ಶಮಿ, ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

 

 

 

ಕೊನೆಯ ಓವರ್ ನಲ್ಲಿ ಅಫ್ಘಾನಿಸ್ತಾನ ಗೆಲ್ಲಲು 16 ರನ್ ಗಳ ಅವಶ್ಯಕತೆ ಇತ್ತು. ಈ ಸಂದರ್ಭದಲ್ಲಿ ಚಾಕಚಕ್ಯತೆಯಿಂದ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಶಮಿ, ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಮೂಲಕ ನಿರಾಸರಾಗಿದ್ದ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಸಂತಸವನ್ನುಂಟು ಮಾಡಿದರು. ಅಫ್ಘಾನಿಸ್ತಾನದ ನಬಿ, ಅಲಮ್ ಹಾಗೂ ಉರ್ ರೆಹಮಾನ್ ಅವರನ್ನು ಒಬ್ಬರಾದ ನಂತರ ಮತ್ತೊಬ್ಬರಂತೆ ಫೆವಿಲಿಯನ್ ಗೆ ಅಟ್ಟುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು.

ಭಾರತದ ಎರಡನೇ ಮತ್ತು ವಿಶ್ವದ ಹತ್ತನೇ ಆಟಗಾರ:
1987 ರಲ್ಲಿ ನಾಗಪುರದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶರ್ಮಾ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರ ಎಂಬ ಹೆಸರಿಗೆ ಪಾತ್ರರಾಗಿದ್ದರು. ಅವರ ನಂತರ ಮೊಹಮ್ಮದ್ ಶಮಿ ಇದೀಗ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಲ್ಲದೆ ಏಕದಿನ ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಮಾಡಿದ ಹತ್ತನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು.

ಏಕದಿನ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸರದಾರರು:
ಚೇತನ್ ಶರ್ಮಾ 1987, ನ್ಯೂಜಿಲೆಂಡ್ ವಿರುದ್ಧ,
ಸಕ್ಲೈನ್ ಮುಶ್ತಾಕ್, 1999, ಜಿಂಬಾಬ್ವೆ ವಿರುದ್ಧ,
ಚಾಮಿಂಡ ವಾಸ್, 2003, ಬಾಂಗ್ಲಾದೇಶ ವಿರುದ್ಧ,
ಬ್ರೆಟ್ ಲೀ, 2003, ಕೀನ್ಯಾ ವಿರುದ್ಧ,
ಲಸಿತ್ ಮಾಲಿಂಗ, 2007, ದ.ಆಫ್ರಿಕಾ ವಿರುದ್ಧ,
ಕೆಮರ್ ರೂಚ್, 2011, ಹಾಲೆಂಡ್ ವಿರುದ್ಧ,
ಲಸಿತ್ ಮಾಲಿಂಗ, 2011, ಕೀನ್ಯಾ ವಿರುದ್ಧ,
ಎಸ್ ಫಿನ್, 2015, ಆಸ್ಟ್ರೇಲಿಯಾ ವಿರುದ್ಧ,
ಜೆಪಿ ಡ್ಯುಮಿನಿ, 2015, ಶ್ರೀಲಂಕಾ ವಿರುದ್ಧ,
ಮೊಹಮ್ಮದ್ ಶಮಿ, 2019, ಅಫಘಾನಿಸ್ತಾನ ವಿರುದ್ಧ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top