fbpx
ಸಮಾಚಾರ

ಬೀಳುತ್ತಿಯೋ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಸಿ.ಪಿ.ಯೋಗೇಶ್ವರ್ ಬೆಂಬಲಿಗರು ಮಾಡಿರೋ ಈ ಕೆಲಸ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ

ಮೈತ್ರಿ ಸರ್ಕಾರದ ಉಬಯ ಪಕ್ಷಗಳ ನಾಯಕರ ನಡುವೆ ಆರಂಭದಿಂದಲೂ ಅಸಮಾಧಾನ ಹೊಗೆಯಾಡುತ್ತಲೇ ಇದೆ. ಇದೇ ಸಂದರ್ಭವನ್ನು ಬಳಸಿಕೊಂಡು ಸರ್ಕಾರ ಬೀಳಿಸಲು ಬಿಜೆಪಿ ಕಳೆದ ಒಂದು ವರ್ಷದಿಂದ ಸತತ ಪ್ರಯತ್ನ ನಡೆಸಿತ್ತಾದರೂ ಅದು ಯಶಸ್ವಿಯಾಗಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಅಪರೇಷನ್ ಕಮಲ ಯಶಸ್ವಿಯಾಗಿದೆ. ಸಮ್ಮಿಶ್ರ ಸರ್ಕಾರದ 13 ಶಾಸಕರು ಶನಿವಾರ ಮುಂಬೈಗೆ ಹಾರಿದ್ದಾರೆ.

ರಾಜ್ಯ ರಾಜಕೀಯದಲ್ಲಿನ ಇಂತಹ ಬೆಳವಣಿಗೆ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿರುವುದಂತೂ ನಿಜ ಹೀಗಿರುವಾಗ

ಕಾಂಗ್ರೆಸ್ – ಜೆಡಿಎಸ್ ಶಾಸಕರ ರಾಜೀನಾಮೆ ಹಿನ್ನೆಲೆ ಮೈತ್ರಿ ಸರ್ಕಾರ ಬೀಳುವ ಸಾಧ್ಯತೆ ಹೆಚ್ಚಿದ್ದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬೆಂಬಲಿಗರ ಆರ್ಭಟ ಫೇಸ್ ಬುಕ್ ನಲ್ಲಿ ಹೆಚ್ಚಿದೆ , ಅಜಾತ ಶತ್ರುಗಳಾಗಿರುವ ಸಿಎಂ ಕುಮಾರ್ ಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್‌ಗೆ ಟಾಂಗ್ ಕೊಡುವಲ್ಲಿ ಸಿ.ಪಿ.ಯೋಗೇಶ್ವರ್ ಬೆಂಬಲಿಗರು ಸಾಮಾಜಿಕ ಜಾಲ ತಾಣಗಳಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ, ಕಾಂಗ್ರೆಸ್ – ಜೆಡಿಎಸ್ ರಾಜೀನಾಮೆ ಹಿನ್ನೆಲೆ ಮೈತ್ರಿ ಸರ್ಕಾರ ಬೀಳುವಲ್ಲಿ ಸಿ.ಪಿ.ಯೋಗೇಶ್ವರ್ ಅವರ ಕಸರತ್ತು ಜೋರಾಗಿತ್ತು ಎಂದು ಹೇಳಲಾಗುತ್ತಿದೆ , ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸುವಾಗ ಅವರ ಜತೆಯಲ್ಲಿ ಯೋಗೇಶ್ವರ್ ಇದ್ದದ್ದನ್ನು ನಾವು ಗಮನಿಸಬಹುದು.

ಯಶ್ ಅಭಿನಯದ ಕೆಜಿ ಎಫ್ ಸಿನಿಮಾ ಟ್ರೈಲರ್ ಗೆ ಸಿ.ಪಿ.ಯೋಗೇಶ್ವರ್ ಫೋಟೋ ಹಾಕಿ ಸಿಎಂ ಎಚ್‌ಡಿಕೆ ಹಾಗೂ ಡಿಕೆಶಿಗೆ ಯೋಗೇಶ್ವರ್ ಸರಿಯಾಗಿ ಪಾಠಕಲಿಸಿದ್ದಾರೆ ಎಂದು ಹೇಳಿ ಫೇಸ್ಬುಕ್ ನಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಯೋಗೇಶ್ವರ್ ಬೆಂಬಲಿಗರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top