fbpx
ಕ್ರೀಡೆ

ಎದುರಾಳಿಗಳಿಗೆ ಭಯ ಹುಟ್ಟಿಸಿದ್ದ ದಾದಾ, ಭಾರತ ಕಂಡ ಆಕ್ರಮಣಕಾರಿ ಬ್ಯಾಟ್ಸಮನ್, ಅತುತ್ತಮ ಕ್ಯಾಪ್ಟನ್ ಸೌರವ್ ಗಂಗೂಲಿ ಹುಟ್ಟಿದ ಹಬ್ಬ

ಸೌರವ್ ಗಂಗೂಲಿ ಆಕ್ರಮಣಕಾರಿ ನಾಯಕ ಎಂದೇ ಗುರುತಿಸಿಕೊಂಡ ಕ್ರಿಕೆಟಿಗ . ವಿದೇಶಿ ತಂಡಗಳ ರೀತಿಯಲ್ಲೇ ಭಾರತವೂ ಆಕ್ರಮಣಕಾರಿ ಆಟಕ್ಕೆ ಬದಲಾಗಿದ್ದು ಇದೇ ಗಂಗೂಲಿ ನಾಯಕತ್ವದಲ್ಲಿ ಈಗ ಅದೇ ಆಕ್ರಮಣಕಾರಿ ರೀತಿಯ ಆಟವನ್ನು ನಾವು ವಿರಾಟ್ ಕೊಹ್ಲಿ ಅವರಲ್ಲಿ ಕಾಣಬಹುದು .ವಿದೇಶಿ ಆಟಗಾರರು ಸ್ಲೆಡ್ಜಿಂಗ್ (ಎದುರಾಳಿ ಆಟಗಾರನ್ನು ಬೈಯುತ್ತಾ ಅವರ ಕಾನ್ಫಿಡೆನ್ಸ್ ಕಡಿಮೆ ಮಾಡುವ ಕ್ರಿಯೆ ) ಮಾಡಿದರೆ ಸ್ಪಾಟ್ ನಲ್ಲಿಯೇ ಸರಿಯಾಗಿ ವಾಪಸ್ ಕೊಡುವ ಜಾಯಮಾನ ಗಂಗೂಲಿಯದ್ದು. ’ದಾದಾ’ ಎಂದೇ ಖ್ಯಾತರಾದ ಗಂಗೂಲಿ 500 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ ದಾಖಲೆ ಹೊಂದಿದ್ದಾರೆ. ಗಂಗೂಲಿಯ ಆಕ್ರಮಣಕಾರಿ ನಾಯಕತ್ವದಿಂದಲೇ ಎದುರಾಳಿಗಳ ಕಾನ್ಫಿಡೆನ್ಸ್ ಕಡಿಮೆಯಾಗುತ್ತಿತ್ತು.

 

 

ಇದು ಭಾರತದ ಗೆಲುವಿಗೆ ಪ್ರಮುಖ ಕಾರಣ ಎಂದರೆ ತಪ್ಪಾಗುವುದಿಲ್ಲ, ಭಾರತದಲ್ಲಿ ಇವತ್ತು ಧ್ರಮದಷ್ಟೇ ಸಂಭ್ರಮದಿಂದ ಕ್ರಿಕೆಟ್ ಅನ್ನು ಕಾಣುತ್ತಿದ್ದಾರೆ ಎಂದರೆ ಇದರ ಹಿಂದೆ ಗಂಗೂಲಿ ಅವರ ಕೈವಾಡ ಬಹಳವಾಗಿದೆ ದೊಡ್ಡ ಕ್ರಿಕೆಟ್‌ ಪ್ರೇಮಿ ರಾಷ್ಟ್ರವನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಅತ್ಯುತ್ತಮ ಬ್ಯಾಟ್ಸಮನ್ , ಉತ್ತಮ ನಾಯಕ, ಭಾರತ ಕ್ರಿಕೆಟ್ ಕಂಡ ಅದ್ಬುತ ಕ್ರಿಕೆಟಿಗ ಗಂಗೂಲಿ ಇಂದು ತಮ್ಮ 47 ನೇ ಹುಟ್ಟಿದ ಹಬ್ಬ ಆಚರಿಸುತ್ತಿದ್ದಾರೆ.

ಗಂಗೂಲಿ ಒಟ್ಟು 18,575ರನ್ ಗಳೊಡನೆ ಭಾರತ ಕ್ರಿಕೆಟಿಗರಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ ವಿಶ್ವಕಪ್ ನಲ್ಲಿ ಭಾರತ ಪರವಾಗಿ 183 ರನ್ ಗಳಿಸಿ ಅತ್ಯಂತ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎನ್ನುವ ದಾಖಲೆ ಹೊಂದಿದ್ದಾರೆ, ಆಟಗಾರರ ಬೆಂಬಲಕ್ಕೆ ನಿಲ್ಲುತ್ತಿದ್ದ ಗಂಗೂಲಿ ಆಟಗಾರರ ಫಾರ್ಮ್ ಕಳಪೆ ಇರಲಿ ಅಥವಾ ಎದುರಾಳಿ ತಂಡದ ಸ್ಲೆಡ್ಜಿಂಗ್ ಇರಲಿ ಎಲ್ಲ ವಿಷಯಗಳಲ್ಲೂ ತಂಡದ ಬೆನ್ನಿಗೆ ನಿಂತು ಹುರಿದುಂಬಿಸುತ್ತಿದ್ದರು ಇದು ನಾಯಕನಾಗಿ ಅವರಿಗೆ ಹೊಸ ಶೋಭೆಯನ್ನು ತಂದುಕೊಟ್ಟಿತ್ತು.

 

 

ಜಹೀರ್ ಖಾನ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್,ವಿರೇಂದ್ರ ಸೆಹ್ವಾಗ್, ಧೋನಿ ಇವರೆಲ್ಲ ಗಂಗೂಲಿ ಅಖಾಡದಲ್ಲಿ ಬೆಳೆದ ಹುಡುಗರು.

ತಂಡವನ್ನು ಬೆನ್ನಿಗೆ ಕಟ್ಟಿಕೊಂಡು ಒಳ್ಳೆಯ ರೀತಿಯಲ್ಲಿ ಇಂಡಿಯನ್ ಕ್ರಿಕೆಟ್ ನಡೆದು ಬರುತ್ತಿರುವಾಗಲೇ ಅದೊಂದು ಆಘಾತಕಾರಿ ವಿಷ್ಯ ಕ್ರಿಕೆಟ್ ಜಗತ್ತನೇ ತಲ್ಲಣಗೊಳಿಸಿತ್ತು, 2000ನೇ ಇಸವಿಯಲ್ಲಿ ಭಾರತದ ಕ್ರಿಕೆಟ್ ಆಟಗಾರರು ಮ್ಯಾಚ್ ಫಿಕ್ಸಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು ಆನಂತರ ತಂಡದ ಶ್ರೇಷ್ಠ ಬ್ಯಾಟ್ಸಮನ್ ಗಳು ಸ್ಟಾರ್ ಆಟಗಾರರು ಇದರಲ್ಲಿ ಭಾಗಿಯಾಗಿರುವುದು ಜಗತ್ ಜಾಹೀರಾಗಿತ್ತು, ಇದರಿಂದ ಅಭಿಮಾನಿಗಳು ಕ್ರಿಕೆಟ್ ನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದ್ದರು , ಅನುಮಾನ ಅವಮಾನಗಳ ಮಧ್ಯೆ ಮತ್ತೆ ತಂಡವನ್ನ ಕಟ್ಟಿ ಬೆಳೆಸಿದರು ಭಾರತ ತಂಡ ಹಲವಾರು ಸರಣಿಗಳನ್ನು ಗೆಲ್ಲುವ ಜತೆಗೆ 2003ರ ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.

ಗಂಗೂಲಿ ಕ್ರಿಕೆಟ್ ಅನ್ನು ಆಸ್ವಾದಿಸುತ್ತಿದ್ದರು , ಅವರು ಶರ್ಟ್ ಕಳಚಿ ಸಂಭ್ರಮಿಸಿದ ರೀತಿ ಇಂದಿಗೂ ಜನರ ಮಾನಸದಲ್ಲಿ ಉಳಿದುಕೊಂಡಿದೆ.

 

 

ಸದ್ಯಕ್ಕೆ ವಿಶ್ವಕಪ್ ಕ್ರಿಕೆಟ್ ಅಂಗವಾಗಿ ಭಾರತದ ಮೂವರನ್ನು ಐಸಿಸಿ ವೀಕ್ಷಕ ವಿವರಣೆಗಾರರನ್ನಾಗಿ ನೇಮಕ ಮಾಡಿದೆ. ಹರ್ಷ ಭೋಗ್ಲೆ, ಸಂಜಯ್ ಮಂಜ್ರೇಕರ್‌, ಸೌರವ್ ಗಂಗೂಲಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 23 ಮಂದಿ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಐಸಿಸಿ ಗುರುವಾರ ಪ್ರಕಟಿಸಿದೆ. ಇದರಲ್ಲಿ ಇಂಗ್ಲೆಂಡಿನ 4, ಭಾರತ ಮತ್ತು ನ್ಯೂಜಿಲೆಂಡಿನ 3, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಪಾಕಿಸ್ತಾನ ಪರ ಇಬ್ಬರು ಹಾಗೂ ಬಾಂಗ್ಲಾದೇಶ, ಶ್ರೀಲಂಕಾ, ಜಿಂಬಾಬ್ವೆಯಿಂದ ತಲಾ ಒಬ್ಬರನ್ನು ಆಯ್ಕೆ ಮಾಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top