fbpx
ಭವಿಷ್ಯ

ಜುಲೈ 17- ನಾಳೆಯ ಪಂಚಾಂಗ ಮತ್ತು ದಿನಭವಿಷ್ಯ.

ಸ್ಥಳ- ಬೆಂಗಳೂರು.
ಭಾನುವಾರ, ಜುಲೈ 14 2019
ಸೂರ್ಯೋದಯ : 6:01 am
ಸೂರ್ಯಾಸ್ತ: 6:49 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಆಷಾಡ
ಪಕ್ಷ : ಕೃಷ್ಣಪಕ್ಷ
ತಿಥಿ : ಪ್ರತಿಪತ್ 28:51
ನಕ್ಷತ್ರ: Uttaraashadha 22:59
ಯೋಗ :ವಿಷ್ಕಂಭ 27:47
ಕರಣ:ಬಾಲವ 15:56 ಕುಲವ 28:51

ಅಭಿಜಿತ್ ಮುಹುರ್ತ: Nil
ಅಮೃತಕಾಲ :3:59 pm – 5:44 pm

ರಾಹುಕಾಲ-12:25 pm – 2:00 pm
ಯಮಗಂಡ ಕಾಲ- 7:40 am – 9:15 am
ಗುಳಿಕ ಕಾಲ-10:50 am – 12:25 pm

 

 

 

ಮೇಷ (Mesha)

 

ನಿಮ್ಮ ಪ್ರಾಮಾಣಿಕ ಪ್ರಯತ್ನಗಳೇ ನಿಮ್ಮ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಆದರೆ ಶುದ್ಧ ಬಂಗಾರದಿಂದ ಒಡವೆಗಳನ್ನು ಮಾಡಲಾಗುವುದಿಲ್ಲ. ಅದಕ್ಕೆ ಸ್ವಲ್ಪವಾದರೂ ತಾಮ್ರದ ಲೇಪ ಬೇಕಾಗುತ್ತದೆ. ಅಂತೆಯೆ ನಿಮ್ಮ ಪ್ರಾಮಾಣಿಕತನಕ್ಕೆ ಸ್ವಲ್ಪ ಅಸತ್ಯದ ಕೊರತೆ ಇದೆ.

 

ವೃಷಭ (Vrushabha)

ಧೈರ್ಯಶಾಲಿಯಾದ ನಿಮಗೆ ಗುರುವಿನ ಶ್ರೀರಕ್ಷೆ ಇರಲು ಬಾಳಿನಲ್ಲಿ ಆನಂದ ಸಂತೋಷ ಹೊಂದುವಿರಿ. ಕೌಟುಂಬಿಕ ಜೀವನದಲ್ಲೂ ಸಂತಸ ಕಂಡುಬರುವುದು. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿರಿ.

 

ಮಿಥುನ (Mithuna)

ನಿಮ್ಮ ಸ್ನೇಹಿತರು ಸಕಾಲದಲ್ಲಿ ಸಹಾಯ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುವುದು. ಕಚೇರಿಯಲ್ಲಿ ಹೊಸತಂತ್ರದ ಪ್ರಯೋಗ ಮಾಡುವಿರಿ. ಮತ್ತು ಅದರಲ್ಲಿ ಯಶಸ್ಸನ್ನು ಹೊಂದುವಿರಿ.

 

ಕರ್ಕ (Karka)

ನಿಮ್ಮನ್ನು ರಕ್ಷಿಸುವ ಗ್ರಹಗಳು ಉತ್ತಮ ಸ್ಥಿತಿಯಲ್ಲಿರುವುದರಿಂದ ಈ ದಿನ ನಿಮ್ಮ ಮನೋಕಾಮನೆಗಳು ಪೂರ್ಣವಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

 

ಸಿಂಹ (Simha)

ವಿನಾಕಾರಣ ಆಪಾದನೆಗಳನ್ನು ಎದುರಿಸುವ ವಿಚಾರ ಬರಬಹುದು. ಅದಕ್ಕೆ ನೀವು ಕಾರಣರಲ್ಲದಿದ್ದರೂ ಗ್ರಹಗಳು ಅಶುಭ ಸ್ಥಿತಿಯಲ್ಲಿ ಸಂಚರಿಸುವ ಮೂಲಕ ನಿಮ್ಮ ಗೌರವ-ಘನತೆಗೆ ಕುಂದುಂಟು ಮಾಡುವವು. ನವಗ್ರಹ ಸ್ತೋತ್ರ ಪಠಿಸಿರಿ.

 

ಕನ್ಯಾರಾಶಿ (Kanya)

 ನಿಮ್ಮ ಇಚ್ಛಾಶಕ್ತಿಗೆ ಹೆಚ್ಚಿನ ಬಲವಿದೆ. ಅನೇಕ ಉತ್ತಮ ಕೆಲಸ ಕಾರ್ಯಗಳಲ್ಲಿ ಗೆಲುವನ್ನು ಸಾಧಿಸುವಿರಿ. ವಿರೋಧಿಗಳು ಸಹಾ ನಿಮ್ಮ ಕರ್ತೃತ್ವ ಶಕ್ತಿಯನ್ನು ಕಂಡು ಬೆರಗಾಗುವರು. ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುವುದು.

 

ತುಲಾ (Tula)

ಅತ್ಯಮೂಲ್ಯವಾದ ದಾಖಲೆ ಪತ್ರಗಳನ್ನು ಜತನದಿಂದ ಕಾಪಾಡುವುದು ಉತ್ತಮ. ಪ್ರವಾಸ ಸಮಯದಲ್ಲಿ ಅವುಗಳಿಗೆ ಸೂಕ್ತ ಭದ್ರತೆಯನ್ನು ಕಾಯ್ದುಕೊಳ್ಳಿರಿ. ಈ ದಿನ ಮಹತ್ತರ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಚ್ಚರಿಕೆ.

 

ವೃಶ್ಚಿಕ (Vrushchika)

ಸಂಕಷ್ಟದ ದಿನಗಳಿಂದ ಹೇಗೆ ಪಾರಾಗಬಹುದೆಂಬುದು ನಿಮ್ಮ ಅನುಭವ ತಿಳಿಸುತ್ತದೆ. ಈ ದಿನದ ಕ್ಲಿಷ್ಟಕರ ಸನ್ನಿವೇಶವನ್ನೂ ಸಹ ಭಗವಂತನ ದಯೆಯಿಂದ ಎದುರಿಸಿ ಯಶಸ್ಸನ್ನು ಹೊಂದುವಿರಿ.

 

ಧನು ರಾಶಿ (Dhanu)

ನಿಮ್ಮ ಕ್ರಿಯಾಶೀಲ ಮತ್ತು ಯೋಜನಾಬದ್ಧ ಪ್ರಾವೀಣ್ಯತೆಯು ಗೌರವ ಆದರಗಳನ್ನು ತಂದು ಕೊಡುವುದು. ಹಿತಶತ್ರುಗಳ ಬಗ್ಗೆ ಎಚ್ಚರದಿಂದ ಇರಿ.

 

ಮಕರ (Makara)

ಮನೆಯ ವಿಚಾರಗಳಲ್ಲಿ ಕಾಳಜಿ ವಹಿಸಲು ಮುಂದಾಗುವಿರಿ. ಇದು ನಿಮ್ಮ ಸಂಗಾತಿಯ ಹರ್ಷಕ್ಕೆ ಕಾರಣವಾಗುವುದು. ಅನೇಕ ದಿನಗಳಿಂದ ನಿಶ್ಚಯಿಸಿದ್ದ ಕಾರ‍್ಯಗಳಿಗೆ ಚಾಲನೆ ದೊರೆಯುವುದು.

 

ಕುಂಭರಾಶಿ (Kumbha)

ಈದಿನ ಬರುವ ಅಡೆ-ತಡೆಗಳನ್ನು ಧೈರ್ಯವಾಗಿ ಎದುರಿಸುವಿರಿ. ಗುರುವು ನಿಮ್ಮ ಬೆಂಗಾವಲಿಗೆ ನಿಲ್ಲುವರು. ಹಲವು ಬದಲಾವಣೆಗಳಿಗೆ ಇಂದು ಸಾಕ್ಷಿಯಾಗುವ ಸಂಭವ. ಆಂಜನೇಯ ಸ್ತೋತ್ರವನ್ನು ಪಠಿಸಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಮೀನರಾಶಿ (Meena)

ಉತ್ಸಾಹ ಹಾಗೂ ಸಮರ್ಪಕ ನಡೆ-ನುಡಿಗಳಿಂದಲೇ ಜನರನ್ನು ಆಕರ್ಷಿಸುವಿರಿ. ಪ್ರಶಂಸೆಗಳ ಸುರಿಮಳೆಯಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಕೌಟುಂಬಿಕ ಜೀವನದಲ್ಲಿ ಮಾನಸಿಕ ನೆಮ್ಮದಿ ದೊರೆಯುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top