fbpx
ಭವಿಷ್ಯ

ಜುಲೈ 20- ನಾಳೆಯ ಪಂಚಾಂಗ ಮತ್ತು ದಿನಭವಿಷ್ಯ.

ಸ್ಥಳ- ಬೆಂಗಳೂರು.
ಶನಿವಾರ, ಜುಲೈ 20 2019
ಸೂರ್ಯೋದಯ : 6:02 am
ಸೂರ್ಯಾಸ್ತ: 6:49 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಆಷಾಡ
ಪಕ್ಷ : ಕೃಷ್ಣಪಕ್ಷ
ತಿಥಿ : ತೃತೀಯಾ 09:13
ನಕ್ಷತ್ರ: ಶತಭಿಷ ಪೂರ್ಣ ರಾತ್ರಿ
ಯೋಗ :ಸೌಭಾಗ್ಯ ಪೂರ್ಣ ರಾತ್ರಿ
ಕರಣ:ವಿಷ್ಟಿ 09:13 ಬಾವ 22:26

ಅಭಿಜಿತ್ ಮುಹುರ್ತ: 12:00 pm – 12:51 pm
ಅಮೃತಕಾಲ :11:19 pm – 1:07 am

ರಾಹುಕಾಲ- 9:15 am – 10:50 am
ಯಮಗಂಡ ಕಾಲ- 2:00 pm – 3:35 pm
ಗುಳಿಕ ಕಾಲ- 6:05 am – 7:40 am

 

 

ಮೇಷ (Mesha)

 

ಹಣಕಾಸಿನ ವಿಚಾರದಲ್ಲಿ ಅಲ್ಪ ಅಡೆ ತಡೆ ಉಂಟಾಗುವುದು. ಆದಾಗ್ಯೂ ಗುರು ಕೃಪೆಯಿಂದ ಖರ್ಚಿಗೆ ತಕ್ಕಷ್ಟು ಹಣ ಒದಗಿ ಬರುವುದು. ಆದರೆ ಉಳಿತಾಯ ಮಾಡಲು ಆಗುವುದಿಲ್ಲ. ಶನಿ ಮತ್ತು ಆಂಜನೇಯ ಸ್ತೋತ್ರವನ್ನು ಪಠಿಸಿರಿ.

 

ವೃಷಭ (Vrushabh)


ಸಕಲವನ್ನು ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗುವ ನಿಮ್ಮ ಜಾಣ್ಮೆಯು ಎಲ್ಲೆಡೆಯೂ ಪ್ರಶಂಸೆಗೆ ಒಳಗಾಗುವುದು. ಕಚೇರಿಯ ಕೆಲಸಗಳ ವಿಷಯವಾಗಿ ಯಾರಾರ‍ಯರನ್ನು ನಂಬಿ ಮೋಸ ಹೋಗದಿರಿ. ಗುರು ಸ್ತೋತ್ರ ಪಠಿಸಿರಿ.

ಮಿಥುನ (Mithuna)


ಈದಿನ ಒತ್ತಡಗಳಿಂದ ದೂರ ಬರುವುದು ಒಳ್ಳೆಯದು. ಮಹತ್ವದ ನಿರ್ಧಾರವನ್ನು ಮುಂದೂಡುವುದು ಒಳ್ಳೆಯದು. ಗುರು-ಹಿರಿಯರ ಆಶೀರ್ವಾದ ಪಡೆಯಿರಿ. ಸಂಜೆ ಶನೇಶ್ಚರ ದೇವಾಲಯಕ್ಕೆ ಹೋಗಿಬನ್ನಿರಿ.

ಕರ್ಕ (Karka)


ಕೆಲಸ ಕಾರ್ಯದಲ್ಲಿ ಉತ್ಸಾಹ ಕಡಿಮೆ ಆಗುವುದು. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ. ಆದಷ್ಟು ಈದಿನ ತಾಳ್ಮೆಯಿಂದ ಇರಿ.ಹಣಕಾಸು ಕೂಡ ಒದಗಿ ಬರುವುದು. ಸ್ನೇಹಿತರು ನಿಮ್ಮ ಸಹಾಯಕ್ಕೆ ಬರುವರು. ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ.

ಸಿಂಹ (Simha)


ಸಾಂಸಾರಿಕವಾಗಿ ಸದಸ್ಯರ ಬಗ್ಗೆ ಕಾಳಜಿ ಇರಬೇಕು. ಮನೆಯವರ ಸಹಕಾರದಿಂದ ಕಾರ್ಯಸಿದ್ಧಿಯಾಗಲಿದೆ. ದಾಂಪತ್ಯದಲ್ಲಿ ಸಹನೆ ಇರಲಿ. ದೇಹಾಯಾಸದಿಂದ ಕೋಪತಾಪಗಳು ಗೋಚರಕ್ಕೆ ಬಂದಾವು. ದಿನಾಂತ್ಯ ಅತಿಥಿಗಳ ಆಗಮನ ಇದೆ.

ಕನ್ಯಾರಾಶಿ (Kanya)


ಅನಿರೀಕ್ಷಿತ ರೂಪದಲ್ಲಿ ನಾನಾ ರೀತಿಯಲ್ಲಿ ಕಾರ್ಯಸಾಧನೆಯಾದೀತು. ವೈವಾಹಿಕ ಸಂಬಂಧ ಗಳು ಗಟ್ಟಿಯಾಗುವಂತೆ ಹೊಂದಾಣಿಕೆ ಇರಲಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಒದಗಿ ಬರುತ್ತದೆ. ಸದುಪಯೋಗಿಸಿರಿ.

ತುಲಾ (Tula)


ಆರ್ಥಿಕವಾಗಿ ಖರ್ಚುವೆಚ್ಚಗಳಿದ್ದರೂ ಧನಾಗಮನಕ್ಕೆ ಸಮಸ್ಯೆ ಇರದು. ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಫ‌ಲಿತಾಂಶ ತೋರಿ ಬಂದು ಸಂತಸ ವಿರುತ್ತದೆ.ದೇಹಾರೋಗ್ಯ ಆಗಾಗ ಏರುಪೇರಾಗುತ್ತದೆ. ವ್ಯಾಪಾರಿಗಳಿಗೆ ಅಧಿಕ ಲಾಭ ತರಲಿದೆ.

ವೃಶ್ಚಿಕ (Vrushchika)


ಯಾರಿಗೆ ಏನೂ ಸಲಹೆ ನೀಡಬೇಡಿ, ಯಾರಿಂದಲೂ ಏನೂ ನಿರೀಕ್ಷಿಸಬೇಡಿ. ಅತಿಯಾದ ಉತ್ಸಾಹ ತೋರಿಸುವುದಂತೂ ಬೇಡವೇಬೇಡ. ನಿಮ್ಮ ಸಕಾರಾತ್ಮಕ ದೃಷ್ಟಿಕೋನ ನಿಮ್ಮ ಸುತ್ತಲಿನವರನ್ನು ಆಕರ್ಷಿಸಬಹುದು.

ಧನು ರಾಶಿ (Dhanu)


ನಿಮ್ಮ ಅಸಭ್ಯ ವರ್ತನೆ ನಿಮ್ಮ ಹೆಂಡತಿಯ ಮನಸ್ಸನ್ನು ಹಾಳು ಮಾಡುತ್ತದೆ. ಧೀರ್ಘಕಾಲೀನ ಕಾಯಿಲೆಗಳನ್ನು ನಿರ್ಲಕ್ಷಿಸಬಾರದು ಅವುಗಳು ಕೆಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಹಣಕಾಸಿನಲ್ಲಿ ಸುಧಾರಣೆ ನೀವು ಅಗತ್ಯ ವಸ್ತುಗಳನ್ನು ಖರೀದಿಸುವುದನ್ನು ಅನುಕೂಲಕರವಾಗಿಸುತ್ತದೆ.

ಮಕರ (Makara)


ಅಸಡ್ಡೆಯಿಂದ ಕಾಣುವವರನ್ನು ದ್ವೇಷಿಸಬೇಡಿ. ಅವರಿಂದಲೂ ಕೆಲವೊಮ್ಮೆ ಮಹತ್ತರ ಕೆಲಸಗಳು ಆಗುತ್ತವೆ. ಸಹೋದರರ ಸಂಗಡ ಮನಸ್ತಾಪ ಬೇಡ. ಆಂಜನೇಯ ಮಂತ್ರವನ್ನು ಪಠಿಸಿರಿ. ಆಸ್ತಿಗೆ ಸಂಬಂಧಪಟ್ಟಂತೆ ನಿರ್ಧಾರವನ್ನು ಮುಂದೂಡುವುದು ಒಳ್ಳೆಯದು.

ಕುಂಭರಾಶಿ (Kumbha)


ಸಮಾಜದಲ್ಲಿ ಬಹುಮುಖ್ಯ ವ್ಯಕ್ತಿತ್ವವನ್ನು ಪುನಃ ಸ್ಥಾಪಿಸಲು ಸದಾವಕಾಶಗಳು ಇಂದು ಹೇರಳವಾಗಿ ದೊರೆಯುವುದು. ಅವನ್ನು ತಡಮಾಡದೆ ಬಾಚಿಕೊಂಡು ಅದರ ಅನುಷ್ಠಾನವನ್ನು ಕಾರ್ಯರೂಪಕ್ಕೆ ತನ್ನಿರಿ. ಇದರಿಂದ ನಿಮ್ಮ ಮೇಲಿದ್ದ ಅನುಮಾನಗಳು ದೂರವಾಗುವುದು.

ಮೀನರಾಶಿ (Meena)


ಇಂದು ನಿಮಗೆ ಸಂಭ್ರಮದ ದಿನವಾಗಿ ಹೊಸ ಪರಿವರ್ತನೆಯ ಬಾಗಿಲು ತೆರೆಯಲಿದೆ. ಬರುವ ಅವಕಾಶಗಳನ್ನು ಪೂರ್ಣವಾಗಿ ಬಳಸಿಕೊಳ್ಳಿರಿ. ಗುರು-ಹಿರಿಯರ ಆಶೀರ್ವಾದವು ಇಂದು ನಿಮ್ಮ ಮೇಲಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top