fbpx
ಸಿನಿಮಾ

ಈ ಕಾರಣಕ್ಕೆ ದೀಪಿಕಾ ಪಡುಕೋಣೆ ಮೇಲೆ ಕೋಪ ಮಾಡ್ಕೊಂಡ್ಬಿಟ್ರ ಅಭಿಮಾನಿಗಳು

ಶುಕ್ರವಾರ ರಾತ್ರಿ ಮಾಜಿ ಗೆಳೆಯ ರಣಬೀರ್ ಕಪೂರ್ ಅವರೊಂದಿಗೆ ಚಲನಚಿತ್ರ ನಿರ್ಮಾಪಕ ಲವ್ ರಂಜನ್ ಅವರ ಮನೆಯಲ್ಲಿ ದೀಪಿಕಾ ಪಡುಕೋಣೆ ಅವರು ಕಾಣಿಸಿಕೊಂಡ ನಂತರ, #NotMyDeepika ಎಂಬ ಹ್ಯಾಷ್ ಟ್ಯಾಗ್ ಆನ್‌ಲೈನ್‌ನಲ್ಲಿ ಟ್ರೆಂಡಿಂಗ್ ಮಾಡಲು ಪ್ರಾರಂಭಿಸಿತು. ಸೋನು ಕಿ ಟಿಟು ಕಿ ಸ್ವೀಟಿ ಚಿತ್ರ ನಿರ್ದೇಶಕರೊಂದಿಗೆ ಈ ಇಬ್ಬರು ನಟರು ಮಾತುಕತೆ ನಡೆಸುತ್ತಿದ್ದಾರೆ ಎಂಬ ಗುಸುಗುಸು ಶುರುವಾಗಿದೆ. ನಟಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದ ಚಲನಚಿತ್ರ ನಿರ್ದೇಶಕನನ್ನು #MeToo ನಲ್ಲಿ ಹೆಸರಿಸಲಾದವನ ಜೊತೆ ದೀಪಿಕಾ ಕೆಲಸ ಮಾಡುವುದು ಅಭಿಮಾನಿಗಳಿಗೆ ಇಷ್ಟವಿಲ್ಲ.

 

 

ನಟರಾದ ದೀಪಿಕಾ ಮತ್ತು ರಣಬೀರ್ ಅವರ ಫೋಟೋ ಶುಕ್ರವಾರ ವೈರಲ್ ಆದ ಕೂಡಲೇ, #NotMyDeepika ಆನ್‌ಲೈನ್‌ನಲ್ಲಿ ಟ್ರೆಂಡಿಂಗ್ ಪ್ರಾರಂಭಿಸಿತು. #MeToo ಆರೋಪಿಯೊಂದಿಗೆ ಚಿತ್ರಕ್ಕೆ ಸಹಿ ಹಾಕಿದ್ದರಿಂದ ದೀಪಿಕಾ ಅವರ ಅಭಿಮಾನಿಗಳು ಸಂತೋಷವಾಗಿಲ್ಲ ಎಂದು ತಿಳಿದುಬಂದಿದೆ .

 

 

ಬಹಳಷ್ಟು ಮಂದಿಗೆ ರೋಲ್ ಮಾಡೆಲ್ ಆಗಿರುವ ದೀಪಿಕಾ ಅವರು ರಂಜನ್ ಜತೆಗೆ ಕೆಲಸ ಮಾಡುವುದು ಬೇಡ ಎಂದು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ .

2007ರಲ್ಲಿ ರಣಬೀರ್ ಕಪೂರ್​ ಹಾಗೂ ದೀಪಿಕಾ ಪಡುಕೋಣೆ ಒಬ್ಬರನ್ನೊಬ್ಬರು ಪ್ರೀತಿಸಿದ್ದು ಆನಂತರ 2009ರಲ್ಲಿ ಪರಸ್ಪರ ದೂರವಾಗಿದ್ದರು , ಬ್ರೇಕ್ ಅಪ್ ನಂತರವೂ ‘ಯೇ ಜವಾನಿ ಹೇ ದಿವಾನಿ’, ಮತ್ತು ‘ತಮಾಷಾ’ ಚಿತ್ರಗಳಲ್ಲಿ ಇಬ್ಬರು ಒಟ್ಟಿಗೆ ನಟನೆ ಮಾಡಿದ್ದರು , ದೀಪಿಕಾ ಮುಂದೇನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top