fbpx
ಭವಿಷ್ಯ

ಜುಲೈ 23- ನಾಳೆಯ ಪಂಚಾಂಗ ಮತ್ತು ದಿನಭವಿಷ್ಯ.

ಸ್ಥಳ- ಬೆಂಗಳೂರು.
ಮಂಗಳವಾರ, ಜುಲೈ 23 2019
ಸೂರ್ಯೋದಯ : 6:03 am
ಸೂರ್ಯಾಸ್ತ: 6:49 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಆಷಾಡ
ಪಕ್ಷ : ಕೃಷ್ಣಪಕ್ಷ
ತಿಥಿ :ಷಷ್ಠೀ 16:16
ನಕ್ಷತ್ರ: ಉತ್ತರಾಭಾದ್ರಪದ 13:14
ಯೋಗ :ಅತಿಗಂಡ 08:11
ಕರಣ:ವಿಷ್ಟಿ 09:13 ಬಾವ 22:26

ಅಭಿಜಿತ್ ಮುಹುರ್ತ:12:00 pm – 12:51 pm
ಅಮೃತಕಾಲ :7:52 am – 9:40 am

ರಾಹುಕಾಲ- 3:35 pm – 5:10 pm
ಯಮಗಂಡ ಕಾಲ- 9:16 am – 10:51 am
ಗುಳಿಕ ಕಾಲ- 12:26 pm – 2:00 pm

 

 

 

ಮೇಷ (Mesha)

 

ಲಾಭಸ್ಥಾನದ ಗುರುವಿನಿಂದ ಹೆಚ್ಚಿನ ಕೆಲಸಕಾರ್ಯಗಳು ಅನಿರೀಕ್ಷಿತ ರೀತಿಯಲ್ಲಿ ಯಶಸ್ಸು ತಂದುಕೊಡಲಿದೆ. ಆತ್ಮವಿಶ್ವಾಸ ಹಾಗೂ ಪ್ರಯತ್ನಬಲ ನಿಮಗೆ ಪೂರಕವಾಗಿ ನಿಲ್ಲಲಿದೆ. ಹೊಸ ವ್ಯಾಪಾರ, ವ್ಯವಹಾರ ಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಬೇಕಾಗುವುದಾದರೂ ಸ್ವಲ್ಪ ಪರಿಸ್ಥಿತಿಯನ್ನು ನೋಡಿಕೊಂಡು ಹೋಗುವುದು ಉತ್ತಮ.

 

ವೃಷಭ (Vrushabha)

ವೈಯಕ್ತಿಕ ಸಮಸ್ಯೆಗಳನ್ನು ದಿಟ್ಟ ನಿರ್ಧಾರಗಳಿಂದ ಎದುರಿಸಬೇಕಾಗುತ್ತದೆ. ಮುಂದೂಡಿದ ವೈವಾಹಿಕ ಮಾತುಕತೆಗಳು ಪುನಃ ಚಾಲನೆಗೆ ಬರುತ್ತವೆ. ಧಾರ್ಮಿಕ ಕಾರ್ಯಗಳು ಆಸಕ್ತಿಯಿಂದ ನೆರವೇರುತ್ತವೆ. ಮಂಗಲ ಕಾರ್ಯಗಳನ್ನು ನಡೆಸಲು ಇದು ಸಕಾಲ.

 

ಮಿಥುನ (Mithuna)

ಸುಖದ ಬಿಂದಿಗೆಯಲ್ಲಿ ಹುಳಿ ಹಿಂಡುವ ಕಾರ್ಯ ಸಾಂಸಾರಿಕವಾಗಿ ಅನುಭವಕ್ಕೆ ಬಂದೀತು. ಅವಿವಾಹಿತರಿಗೆ, ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲ ಸಂತಸ ತಂದೀತು. ಉತ್ತಮ ಹಿತೈಷಿಗಳ, ಮಿತ್ರವರ್ಗದವರ ಸಹಕಾರದಿಂದ ಕಾರ್ಯಸಾಧನೆಗೆ ಅನುಕೂಲ.

 

ಕರ್ಕ (Karka)

ಸಮಯ ಪೂರಕವಾಗಿರುವುದರಿಂದ ಕೆಲಸಕಾರ್ಯಗಳಲ್ಲಿ ಪ್ರಗತಿ ಸಾಧಿಸುವಿರಿ. ಬದುಕು ಉಲ್ಲಾಸದಿಂದ ಕೂಡಿರುತ್ತದೆ. ಆದರೂ ಅನಗತ್ಯ ದುಂದು ವೆಚ್ಚ ಬೇಡ. ಹಿರಿಯರ ಸಲಹೆಗಳು ನಿಮಗೆ ಮಾರ್ಗವನ್ನು ಕಲ್ಪಿಸುವುದು. ಹಾಗೇ ಪೋಷಕರಲ್ಲಿ ಗೌರವ ಹೆಚ್ಚಾಗಲಿದೆ.

 

ಸಿಂಹ (Simha)

ನಿಮ್ಮ ಕೆಲಸಗಳನ್ನು ಬಿಟ್ಟು ಪರರ ಕಾರ್ಯಗಳಲ್ಲಿ ನಿರತರಾಗುವುದನ್ನು ತಪ್ಪಿಸಿರಿ. ಯೋಗ್ಯ ಸಂಬಂಧಗಳು ಒದಗಿಬಂದರೂ ಕಂಕಣಬಲಕ್ಕೆ ಪೂರಕವಾಗದು. ನ್ಯಾಯಾಲಯದ ವಿಚಾರದಲ್ಲಿ ಅನಾವಶ್ಯಕ ರೀತಿಯಲ್ಲಿ ಅವಮಾನ ಮತ್ತು ಧನವ್ಯಯ ಅನುಭವಿಸುವಂತಾದೀತು.

 

ಕನ್ಯಾರಾಶಿ (Kanya)

ನಿಮ್ಮ ವ್ಯಕ್ತಿತ್ವಕ್ಕೆ ಹಾನಿ ಮಾಡುತ್ತದೆ. ಆದಾಗ್ಯೂ, ನೀವು ಜೀವನದ ಸವಾಲುಗಳನ್ನು ವೇಗವಾಗಿ ಎದುರಿಸಬೇಕಿದೆ. ಆರೋಗ್ಯ ಸಮಸ್ಯೆಯ ಸಾಧ್ಯತೆಯಿದೆ.

 

ತುಲಾ (Tula)

ನಿರಾಶಾ ಮನೋಭಾವವನ್ನು ದೂರಮಾಡಿ ಆರ್ಥಿಕವಾಗಿ ಚೇತರಿಕೆ ಕಂಡರೂ ಹಿಡಿತ ಬಿಗಿಗೊಳಿಸಿರಿ. ದಾಂಪತ್ಯ ಜೀವನದಲ್ಲಿ ಮುಖ್ಯ ವಾಗಿ ಸಂಯಮವಿರಲಿ. ಕಾರ್ಯಕ್ಷೇತ್ರದಲ್ಲಿ ಆತ್ಮವಿಶ್ವಾಸಬಲ ನಿಮಗೆ ಶ್ರೀರಕ್ಷೆಯಾದೀತು. ವ್ಯವಹಾರದಲ್ಲಿ ಬುದ್ಧಿವಂತಿಕೆ ಇದ್ದರೂ ಎಚ್ಚರಿಕೆಯಿಂದ ವ್ಯವಹ ರಿಸಬೇಕಾಗುತ್ತದೆ.

 

ವೃಶ್ಚಿಕ (Vrushchika)

ನಿಮ್ಮ ಮಾತುಗಳು ಘರ್ಷಣೆಗೆ ಕಾರಣವಾಗಬಹುದಾದ್ದರಿಂದ, ನಿಮ್ಮ ಮಾತುಗಳ ಮೇಲೆ ಗಮನವಿರಲಿ. ನಿಮ್ಮ ವ್ಯಕ್ತಿತ್ವಕ್ಕೆ ಹಾನಿ ಮಾಡುತ್ತದೆ. ಆದಾಗ್ಯೂ, ನೀವು ಜೀವನದ ಸವಾಲುಗಳನ್ನು ವೇಗವಾಗಿ ಎದುರಿಸಬೇಕಿದೆ.

 

ಧನು ರಾಶಿ (Dhanu)

ನಿಮ್ಮನ್ನು ನಿಮ್ಮ ಪ್ರೀತಿ ಪಾತ್ರರಿಂದ ಒಮ್ಮೆ ದೂರವಿಡಬಹುದು. ಹೀಗಾಗಿ, ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಸಮತೋಲನ ಅಗತ್ಯವಿದೆ.  ಪ್ರಯತ್ನಿಸುವ ಕೆಲಸಕಾರ್ಯಗಳಿಗೆ ಅಡೆತಡೆಗಳಿದ್ದರೂ ನಿಮ್ಮ ಪ್ರಯತ್ನಬಲಕ್ಕೆ ಕಾರ್ಯಸಾಧನೆಯಾಗುತ್ತದೆ

 

ಮಕರ (Makara)

ಸಾಂಸಾರಿಕ ಸಾಮರಸ್ಯ ನಿಮಗೆ ಸುಖ, ಸಂತೋಷ ನೆಮ್ಮದಿಯನ್ನು ತಂದುಕೊಡಲಿದೆ. ವೃತ್ತಿರಂಗದಲ್ಲಿ ಬೇರೆಯವರ ವಿಚಾರದಲ್ಲಿ ಮಧ್ಯಸ್ಥಿಕೆ ಬೇಡ. ಒಳ್ಳೆಯ ಫ‌ಲಗಳಿದ್ದರೂ ಆಗಾಗ ನಿರುತ್ಸಾಹಿಯಾಗಿಯೇ ಇರುವ ಸಾಧ್ಯತೆ ತಂದೀತು.

 

ಕುಂಭರಾಶಿ (Kumbha)

ನಿಮ್ಮ ಹಿಂದಿನ ಕಠಿಣ ಪರಿಶ್ರಮವು ನಿಮ್ಮ ವೃತ್ತಿಜೀವನದ ಯಶಸ್ಸಿಗೆ ಅಡಿಪಾಯವಾಗುತ್ತದೆ. ನಿಮ್ಮ ಮಿತಿ ಮೀರಿದ ಆಲೋಚನೆಗಳು ನಿಮ್ಮ ಕೆಲಸ ಕಾರ್ಯದಲ್ಲಿ ಅಪಯಶಸ್ಸು ತಂದುಕೊಡುವ ಸಾಧ್ಯತೆ ಇದೆ. ಹಾಗಾಗಿ ವಸ್ತುಸ್ಥಿತಿಯ ಬಗ್ಗೆ ಚಿಂತಿಸುವುದು ಒಳ್ಳೆಯದು. ಗುರುವಿನ ಅನುಗ್ರಹ ಪಡೆಯುವುದು ಅನಿವಾರ್ಯವಾಗುವುದು.

 

ಮೀನರಾಶಿ (Meena)

ಕೆಲವು ವಿಷಯಗಳಲ್ಲಿ ಅತಿ ಬುದ್ಧಿವಂತಿಕೆ ತೋರದೆ ಸಹಜ ಸ್ಥಿತಿಯೊಂದಿಗೆ ಹೊಂದಿಕೊಂಡು ಹೋಗುವುದು ಬುದ್ಧಿವಂತರ ಲಕ್ಷ ಣ. ಬರಲಿರುವ ಉತ್ತಮ ಅವಕಾಶಗಳನ್ನು ನಿಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳವುದನ್ನು ಕಲಿಯಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top