ಕಿವಿ ಹಣ್ಣಿನ ಉಪಯೋಗಗಳು
ಕಿವಿ ಹಣ್ಣಿನಲ್ಲಿ 2.5 ಗ್ರಾಂ ನಷ್ಟು ನಾರಿನ ಅಂಶ ಇದ್ದು ಮಲಬದ್ಧತೆ, ಅಜೀರ್ಣತೆ ಸಮಸ್ಯೆ ನಿವಾರಣೆಯಾಗುವುದು. ಅಲ್ಲದೆ ನಾರಿನಂಶ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
ಇದನ್ನು ತಿಂದರೆ ಬೇಗನೆ ಹೊಟ್ಟೆ ತುಂಬುವುದರಿಂದ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ತಿಂದರೆ ಸಾಕು. ಇದರಿಂದಾಗಿ ತೂಕ ಇಳಿಕೆಗೆ ಸಹಕಾರಿಯಾಗುವುದು.
ಕಿವಿ ಹಣ್ಣು ವಿಟಮಿನ್ ಇ ಮತ್ತು ಸಿ ಈ ಪೋಷಕಾಂಶಗಳನ್ನ ಹೊಂದಿದೆ. ಕಿವಿಹಣ್ಣಿನಲ್ಲಿ ಕಿತ್ತಳೆ ಹಣ್ಣಿನಲ್ಲಿರುವುದಕ್ಕಿಂತ ಅಧಿಕ ಪಟ್ಟು ವಿಟಮಿನ್ ಸಿ ಹೊಂದಿದೆ. ವಿಟಮಿನ್ ಸಿ ಅಸ್ತಮಾದಂತಹ ಕಾಯಿಲೆಗಳು ತಡೆಗಟ್ಟಲುಸಹಾಯ ಮಾಡುತ್ತದೆ. ಮಕ್ಕಳು ವಾರದಲ್ಲಿ 5-6 ಕಿವಿ ಹಣ್ಣು ತಿಂದರೆ ಅವರಿಗೆ ಅಸ್ತಮಾ, ಉಸಿರಾಟದ ತೊಂದರೆಗಳು ಬರದಂತೆ ತಡೆಯುತ್ತದೆ.
ಪ್ಲೇಟ್ ಲೇಟ್ ಸಂಖ್ಯೆ ವೃದ್ಧಿಸಲು
ಸೂರ್ಯನ ಕಿರಣಗಳಿಂದ ಚರ್ಮವನ್ನ ರಕ್ಷಿಸುವ ಅಮೈನೊ ಆಮ್ಲಗಳನ್ನ ಕಿವಿ ಹಣ್ಣು ಹೊಂದಿದೆ.
ಬಹುತೇಕ ತಡೆಗಟ್ಟಿ ಕೂದಲ ಬೆಳವಣಿಗೆಯನ್ನ ಸುಧಾರಿಸುತ್ತದೆ. ಕೂದಲು ಬುಡದಿಂದಲೇ ಚೆನ್ನಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಸುಲಭ ಜೀರ್ಣಕ್ರಿಯೆ, ಅಧಿಕ ತೂಕ ನಿವಾರಣೆ, ಅಸ್ತಮಾ, ಮಧುಮೇಹ, ಕಣ್ಣಿನ ಕಾಯಿಲೆ ತಡೆಹಟ್ಟುವುದು, ಗರ್ಭಿಣಿಯರಿಗೂ ಕೂಡ ಈ ಹಣ್ಣು ತುಂಬಾ ಉಪಯುಕ್ತ.
ಬಾಳೆ ಹಣ್ಣಿನಲ್ಲಿರುವ ಪೊಟ್ಯಾಷಿಯಂ ಅಂಶದಷ್ಟು ಕಿವಿ ಹಣ್ಣಿನಲ್ಲಿದೆ. ಇದರಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ಆರೋಗ್ಯದ ಸ್ವಾಸ್ಥ್ಯಕ್ಕೆ ಒಳ್ಳೆಯದು.
ಸೋಡಿಯಂ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಾಯಮಾಡುತ್ತದೆ.
ಸಾಮಾನ್ಯವಾಗಿ ವಿಟಮಿನ್ ಇ ಇರುವ ಆಹಾರದಲ್ಲಿ ಕೊಬ್ಬಿನಂಶವಿರುತ್ತದೆ. ಆದರೆ ಕಿವಿ ಹಣ್ಣಿನಲ್ಲಿ ಕೊಬ್ಬಿನಂಶ ತುಂಬಾ ಕಡಿಮೆ ಇದ್ದು ವಿಟಮಿನ್ ಇ ಇರುವುದರಿಂದ ತ್ವಚೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ಕಿವಿ ಹಣ್ಣಿನಲ್ಲಿ ಇತರ ಹಣ್ಣಿನಲ್ಲಿರುವುದಕ್ಕಿಂತ ಅಧಿಕ ಪ್ರಮಾಣದಲ್ಲಿ ಫಾಲಿಕ್ ಆಸಿಡ್ ಇರುವುದರಿಂದ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ಇದನ್ನು ತಿನ್ನುವುದು ಒಳ್ಳೆಯದು.
ಕಿವಿ ಹಣ್ಣಿನಲ್ಲಿರುವ ಸತು ಪುರುಷರಲ್ಲಿರುವ ಹಾರ್ಮೋನ್ ಟೆಸ್ಟೋಸ್ಟಿರೋನ್(testosterone) ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ, ತ್ವಚೆ, ಕೂದಲು ಮತ್ತು ಉಗುರಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
