fbpx
ಸಿನಿಮಾ

ಬಾಲಿವುಡ್ ನಲ್ಲಿ ಮೂಡಿಬರಲಿದೆ ಹೆಮ್ಮೆಯ ಕನ್ನಡಿಗರಾದ ನಾರಾಯಣ ಮೂರ್ತಿ-ಸುಧಾ ಮೂರ್ತಿ ದಂಪತಿಗಳ ಕಥೆ

ನಾರಾಯಣ ಮೂರ್ತಿ ದಂಪತಿಗಳು ಆಕಾಶಕ್ಕೆ ಏರಿದರು ಎಷ್ಟು ಸಿಂಪಲ್ ಆಗಿ ಇರಬೇಕು, ಎಷ್ಟು ಆತ್ಮೀಯವಾಗಿ ಇರಬೇಕು, ಸಮಾಜದಲ್ಲಿ ಆಕೆಯ ಪಾತ್ರ ಹೇಗಿರ ಬೇಕು ಇವೆಲ್ಲವುಗಳಿಗೆ ಒಂದು ಬೆಸ್ಟ್ ಎಕ್ಸಾಮ್ ಪಲ್….!!

ಜ್ಞಾನದ ಹಿಂದೆ ಓಡುವವನಿಗೆ ಯಶಸ್ಸು ತಾನಾಗಿಯೇ ದೊರೆಯುತ್ತದೆ ಎಂಬುದನ್ನು ಅರಿತು ಜೀವನದಲ್ಲಿ ಶ್ರದ್ಧೆ, ಶಿಸ್ತು ರೂಢಿಸಿಕೊಂಡು ಮುನ್ನಡೆಯುವಂತಹ ವ್ಯಕ್ತಿಗಳ ಸಾಲನ್ನು ಎಣಿಸುವುದಾದರೆ ಮೊದಲು ನೆನಪಿಗೆ ಬರುವುದು ಸುಧಾ ಮೂರ್ತಿ. ಪರಿಶ್ರಮಕ್ಕೆ ಸರಿಯಾದ ವ್ಯಕ್ತಿ. ಕೋಟಿಗಟ್ಟಲೆ ಆಸ್ತಿ, VVIP ಸ್ಟೇಟಸ್, ಇಂಟರ್ ನ್ಯಾಷನಲ್ ಬ್ರಾಂಡ್ ಕಂಪನಿ, ಪ್ರಪಂಚದಾದ್ಯಂತ ಬ್ರಾಂಚ್ ಗಳು. ಎಲ್ಲಾ ಇದ್ರೂ ಕೂಡ ಇವರ ಬದುಕು ಎಷ್ಟು ಸರಳ ಅಂದರೆ, ಮುಡಿಗೆ ಮಲ್ಲಿಗೆಯ ಹೊರತು ಮತ್ಯಾವುದೇ ಆಭರಣವಿಲ್ಲ. “ಹೊಟ್ಟೆಗೆ ಹಿಟ್ಟಿಲ್ಲ ಅಂದ್ರು ಜುಟ್ಟಿಗೆ ಮಲ್ಲಿಗೆ” ಎಂಬ ಗಾದೆ ಮಾತಿನಂತೆ ಬಾಳುವ ಕೆಲ ಹೆಣ್ಮಕ್ಕಳು ಸುಧಾ ಮೂರ್ತಿಯವರನ್ನು ನೋಡಿ ಕಲಿಯಬೇಕು.

ಅನಂತರ ಬೆಂಗಳೂರಿನ ಇನ್ಪೋಸಿಸ್ ಸಂಸ್ಥೆಯ ಸ್ಥಾಪಕ ನಾರಾಯಣ ಮೂರ್ತಿ ಯವರನ್ನು ಪ್ರೇಮಿಸಿ ವಿವಾಹವಾಗುತ್ತಾರೆ. ಇವರು ಮದುವೆಗೆ ಖರ್ಚಾಗಿದ್ದು ಕೇವಲ ‘ನಾಲ್ಕು ನೂರು’ ರೂಪಾಯಿಗಳಂತೆ.

 

 

ಅಂದು ಕೇವಲ ನಾಲ್ಕು ನೂರು ರೂಪಾಯಲ್ಲಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟ ಮೂರ್ತಿ ದಂಪತಿಗಳು ಇಂದು ಲಕ್ಷಾಂತರ ಜೋಡಿಗೆ ಮದುವೆ ಮಾಡಿಸುತಿದ್ದಾರೆ, ಸುಮಾರು ಟ್ರಸ್ಟ್ ಗಳ ಮೂಲಕ ಲಕ್ಷಾಂತರ ಅನಾಥರು, ವೃದ್ಧರಿಗೆ ದಾರಿ ದೀಪವಾಗಿದ್ದಾರೆ….! ಇವರ ಸರಳತೆಯ ಜೀವನ ಇಲ್ಲೇ ಗೊತ್ತಾಗುತ್ತದೆ. ಮದುವೆಯ ನಂತರ ಅಡಿಗೆ ಮನೆಗೆ ಸೀಮಿತವಾಗದೆ, ತನ್ನ ಪತಿಯೊಂದಿಗೆ ಇನ್ಫೋಸಿಸ್ ಸಂಸ್ಥೆಯನ್ನು ಕಟ್ಟಿ ಅದನ್ನ ಬೆಳಸುವಲ್ಲಿ ಅವರೊಂದಿಗೆ ಸರಿಸಮಾನವಾಗಿ ನಿಂತು, ಎಲ್ಲ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಇದಷ್ಟೇ ಮಾತ್ರವಲ್ಲದೆ, ಇಂದು ಅದೆಷ್ಟೆಷ್ಟೋ ಊರುಗಳಲ್ಲಿ ಗ್ರಂಥಾಲಯಗಳು, ಶಾಲೆಯಲ್ಲಿನ ಕಲಿಕೆಯ ವ್ಯವಸ್ಥೆಗಳು, ನೈಸರ್ಗಿಕ ಸ್ವಚ್ಛತೆಯ ಸೌಲಭ್ಯಗಳು ಹೀಗೆ ಹಲವಾರು ಸಮಾಜಾಭಿವೃದ್ದಿ ಕಾರ್ಯಗಳನ್ನು ಇನ್ಫೋಸಿಸ್ ಫೌಂಡೇಷನ್ ಮೂಲಕ ಸಂಚಲನಗೊಳ್ಳಲು ನೀಡಿರುವ ಕೊಡುಗೆ ಮಹೋನ್ನತವಾದದ್ದು. ಅಷ್ಟೇ ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ನಿರಂತರವಾಗಿ ತೊಡಗಿಸಿ ಹಲವಾರು ಲೇಖನಗಳನ್ನು ನೀಡಿದ್ದಾರೆ. ಡಾ.ಸುಧಾ ಎನ್ ಮೂರ್ತಿಯವರು ಇಂಗ್ಲಿಷ್ ಮತ್ತು ಕನ್ನಡ ಎರಡು ಭಾಷೆಯಲ್ಲೂ ಕೃತಿಗಳ ರಚನೆಯನ್ನು ಮಾಡಿದ್ದಾರೆ. ಅದರಲ್ಲೂ ಕನ್ನಡ ಸಾಹಿತ್ಯವೆಂದರೆ ಅಪಾರ ಒಲವು ಗೌರವ. ಹೀಗಾಗಿ ತನ್ನ ಕೈಲಾದಷ್ಟು ಕನ್ನಡ ರಚನಾ ಕಾರ್ಯದಲ್ಲಿ ತೊಡಗಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಸುಮಾರು 16ಕ್ಕಿಂತ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಕೆಲವು ಕೃತಿಗಳು ಕನ್ನಡ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಕೂಡ ಪ್ರಕಟವಾಗಿವೆ.

 

ಪ್ರತಿಯೊಬ್ಬ ಗಂಡಿನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದು ಮೂರ್ತಿ ದಂಪತಿಗಳನ್ನ ನೋಡಿ ಹೇಳಿರಬೇಕು ಎಂದು ಅನಿಸುತ್ತದೆ….!! ಕೋಟಿಗಟ್ಟಲೆ ಹಣವಿದ್ದರೂ, ಸಮಾಜದಲ್ಲಿ ಒಳ್ಳೆಯ ಹೆಸರಿದ್ದರೂ ಒಂಚೂರು ಆಡಂಭರವಿಲ್ಲದೆ, ಸಮಾಜದ ಏಳಿಗೆಗಾಗಿ ಸರಳವಾಗಿ ಬಾಳುತಿರುವ ಇವರು ಎಲ್ಲರಿಗೂ ಆದರ್ಶ.ಇವರ ಬಗ್ಗೆ ಬರೆದಷ್ಟು ಕಡಿಮೆ ಎನಿಸುತ್ತದೆ.

‘ಬರೇ ಲಿ ಕಿ ಬರ್ಫಿ’ ಹೆಸರಿನ ಸುಂದರ ಚಿತ್ರ ಮಾಡಿದ್ದ ಅಶ್ವಿನಿ ಅಯ್ಯರ್​ ತಿವಾರಿ ಈ ದಂಪತಿಯ ಕಥೆಯನ್ನು ದೇಶದ ಎದುರು ಸಿನಿಮಾ ಮೂಲಕ ತೆರೆದಿಡಲಿದ್ದಾರಂತೆ.ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಚಿತ್ರದ ಇನ್ನಿತರ ಮಾಹಿತಿಗಳನ್ನು ತಿಳಿಯಲು ಕಾದುನೋಡಬೇಕಿದೆ.

 

 

aralikatte ತಂಡ ಇವರ ಸಾಧನೆಗೆ ಅಭಿನಂದಿಸುತ್ತೇವೆ. ಸುಧಾ ಮೂರ್ತಿಯವರು ಸದಾ ಹೀಗೆ ನಗು-ನಗುತಾ ನೂರು ಕಾಲ ಬಾಳಲಿ, ಅವರ ಬಾಳು ಎಂದೆಂದೂ ಹಸಿರಾಗೆ ಇರಲಿ ಎಂದು ಹಾರೈಸುತ್ತೇವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top