ಸತತವಾಗಿಅಬ್ಬರಿಸುತ್ತಿರುವ ಮಳೆರಾಯ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಸಿ ಮರಣ ಮೃದಂಗ ಬಾರಿಸುತ್ತಿದ್ದಾನೆ.ಉತ್ತರ ಕರ್ನಾಟಕ , ಕೊಡಗು ಸೇರಿದಂತೆ ರಾಜ್ಯದ ವಿವಿದೆಡೆ ಧಾರಾಕಾರ ಮಳೆ ಮುಂದುವರಿದಿದ್ದು ಮಹಾಮಳೆಗೆ ಇಡೀ ಜನರ ಜೀವನ ಅಕ್ಷರಶಃ ಕೊಚ್ಚಿಹೋಗಿದೆ.. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ರಾಜ್ಯ ಸರ್ಕಾರ, ರಾಜ್ಯದ ಜನತೆ, ಚಿತ್ರರಂಗ, ಸ್ಟಾರ್ ನಟರ ಅಭಿಮಾನಿ ಸಂಘಗಳು ಸೇರಿದಂತೆ ಅನೇಕರು ಸ್ಪಂದಿಸಿದ್ದಾರೆ
ಕಾಫಿ ನಾಡಿನಲ್ಲಿ ಮಳೆಯ ರುದ್ರ ನರ್ತನ ಮುಂದುವರೆದಿದೆ. ಮನೆ ಮತ್ತು ತೋಟದ ಮೇಲೆ ಬೃಹತ್ ಗುಡ್ಡಗಳು ಕುಸಿದ ಘಟನೆ, ಚಿಕ್ಕಮಗಳೂರಿನ ಸಿರಿವಾಸೆ ಸಮೀಪದ ಅಡಲುಗದ್ದೆ ಗ್ರಾಮದಲ್ಲಿ ನಡೆದಿದೆ.ಭಾರಿ ಮಳೆಯಿಂದಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಮತ್ತು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ 80 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ.
List of flood-affected thaluks in the state.#KarnatakaFloods2019 pic.twitter.com/pWLT4YqvGK
— Karnataka Varthe (@KarnatakaVarthe) August 10, 2019
ಮುಖ್ಯಮಂತ್ರಿಗಳ ನೈಸರ್ಗಿಕ ವಿಪತ್ತು ಪರಿಹಾರ ನಿಧಿಗೆ ಉದಾರವಾಗಿ ಕೊಡುಗೆ ನೀಡುವ ಮೂಲಕ ರಾಜ್ಯದಲ್ಲಿ ಪ್ರವಾಹದಿಂದಾಗಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ನೀಡಿ
ಶಾಖೆ : ವಿಧಾನಸೌಧ ಖಾತೆ ಸಂಖ್ಯೆ : 37887098605
ಐ.ಎಫ್.ಎಸ್.ಸಿ. ಕೋಡ್ : SBIN0040277
ಎಂ.ಐ.ಸಿ.ಆರ್. ಸಂಖ್ಯೆ : 560002419
PAN No. : AAAGC1692P ಅಥವಾ GGGGG0000G
ಜಿಲ್ಲೆಗಳಲ್ಲಿ ಕಂಟ್ರೋಲ್ ರೂಮ್ ಗಳನ್ನು ಸ್ಥಾಪಿಸಿಲಾಗಿದೆ, ಕಂಟ್ರೋಲ್ ರೂಮ್ ಸಂಖ್ಯೆಗಳು ಈ ರೀತಿ ಇದೆ
ಯಶೋಮಾರ್ಗ ಫೌಂಡೇಶನ್
ನಟ ಯಶ್ ಅವರ ಮುಂದಾಳತ್ವದ ಯಶೋಮಾರ್ಗ ಫೌಂಡೇಶನ್ ಮೂಲಕ ನಿರಾಶ್ರಿತರಿಗೆ ಮೂಲಭೂತ ಸೌಲಭ್ಯ ಒದಗಿಸಲಾಗುತ್ತಿದೆ. ಯಶೋಮಾರ್ಗ ತಂಡವು ವಸ್ತುಗಳನ್ನ ಟ್ರಕ್ನಲ್ಲಿ ತುಂಬಿಸಿಕೊಂಡು ಕೊಡಗಿನತ್ತ ಹೊರಟಿದ್ದು ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ನೆರವು ನೀಡಿದೆ. ಪ್ರವಾಹದಲ್ಲಿ ಸಿಲುಕಿರುವ ಸಂತ್ರಸ್ತರಿಗಾಗಿ ಕುಡಿಯುವ ನೀರು, ಬ್ರೆಡ್ಡು, ಬಿಸ್ಕೆಟ್, ಸಿದ್ದ ಆಹಾರಗಳು, ಔಷಧ ಸೇರಿದಂತೆ ಅಗತ್ಯ ಸಂಗ್ರಹಿಸಿ ನಿರಾಶ್ರಿತರಿಗೆ ತಲುಪಿಸಿದ್ದಾರೆ.
Email Us : YashoMarga@gmail.com
Facebook : fb.com/yashomarga
Tweet Us : twitter.com/yashomarga
ರಕ್ಷಿತ್ ಶೆಟ್ಟಿ ತಮ್ಮ ಪರಂವ ಸ್ಟುಡಿಯೋ ವತಿಯಿಂದ ಸಂತಸ್ತರ ನೆರವಿಗೆ ಮುಂದಾಗಿದ್ದಾರೆ
ಕರ್ನಾಟಕ ಪ್ರದೇಶ ಕಾಂಗ್ರೆಸ್
ರಾಜ್ಯದ 18 ಜಿಲ್ಲೆಗಳ 80 ತಾಲ್ಲೋಕುಗಳು ಪ್ರವಾಹ ಪೀಡಿತವಾಗಿವೆ, ಪ್ರವಾಹಕ್ಕೆ ಈಡಾದವರಿಗೆ ದೊಡ್ಡ ಪ್ರಮಾಣದ ನೆರವಿನ ಅಗತ್ಯವಿದೆ,ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು ಪರಿಹಾರ ನಿಧಿಗೆ ಹೆಚ್ಚಿನ ನೆರವು ನೀಡಬೇಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ವಿನಂತಿ ಮಾಡಿದೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
