fbpx
ಸಿನಿಮಾ

ಸ್ಯಾಂಡಲ್‍ವುಡ್ ಸ್ಟಾರ್ ಗಳ ವರಮಹಾಲಕ್ಷ್ಮಿ ಹಬ್ಬದ ಕಾರ್ಬಾರು ಹೆಚ್ಚಿಸಿದ ಸ್ಟಾರ್ ಪುತ್ರಿಯರು

ಸ್ಯಾಂಡಲ್‍ವುಡ್ ಸ್ಟಾರ್ ಗಳ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಜೋರಾಗಿ ನಡೆದಿದೆ , ಈ ಬಾರಿ ಸ್ಟಾರ್ ಪುತ್ರಿಯರದೇ ಕಾರುಬಾರು , ತಮ್ಮ ಪುಟ್ಟ ಸ್ಟಾರ್ ಗಳನ್ನೂ ಅಲಂಕರಿಸಿ ಹಬ್ಬಕ್ಕೆ ಮತ್ತಷ್ಟು ಮೆರುಗು ತಂದಿದ್ದಾರೆ ಸ್ಟಾರ್ ಗಳು

ಯಶ್‌ ಮನೆ ಪುಟ್ಟ ವರಮಹಾಲಕ್ಷ್ಮಿ

ತೆರೆ ಮೇಲಿರಲಿ ಅಥವಾ ತೆರೆ ಹಿಂದಿರಲಿ ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾಗೆ ಮೊದಲ ಸ್ಥಾನ ಮೀಸಲಿದೆ , ಈಗ ಒಂದು ಮುದ್ದಾದ ಹೆಣ್ಣು ಮಗುವಿಗೆ ತಂದೆತಾಯಿಯಾಗಿರುವ ಯಶ್ ದಂಪತಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ನಟ ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ರಾಧಿಕಾ ದಂಪತಿ, ತಮ್ಮ ಮಗಳಿಗೆ ಯಾವ ಹೆಸರಿಡುತ್ತಾರೋ ಎಂಬ ಕುತೂಹಲ ಅಭಿಮಾನಿಗಳಿಗೆ ಇತ್ತು. ಸ್ವತಃ ಅಭಿಮಾನಿಗಳೇ ಸಾಕಷ್ಟು ಹೆಸರುಗಳನ್ನು ಸೂಚಿಸಿದ್ದರು.ಯಶ್‌ ದಂಪತಿ ಮಗಳಿಗೆ ನಾಮಕರಣ ಮಾಡಿದ್ದು, ತಮ್ಮ ಮುದ್ದಾದ ಮಗುವಿಗೆ “ಐರಾ’ ಎಂದು ಹೆಸರಿಟ್ಟಿದ್ದಾರೆ. ಐರಾ ಎಂದರೆ ಗೌರವಾನ್ವಿತ ಎಂದು ಅರ್ಥವಿದೆ. ವಿಭಿನ್ನ ಹೆಸರು ಇರಿಸುವ ಮೂಲಕ ಯಶ್‌ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

 

 

View this post on Instagram

 

Nam putta Lakshmi… Magal Gomman ♥️ #radhikapandit #nimmaRP

A post shared by Radhika Pandit (@iamradhikapandit) on

ವರಮಹಾಲಕ್ಷ್ಮಿ ಹಬ್ಬದ ದಿನ ತಮ್ಮ ಮುದ್ದು ಮಗಳನ್ನು ಪುಟ್ಟ ಲಕ್ಷ್ಮಿಯಂತೆ ಅಲಂಕರಿಸಿ ಫೋಟೋ ಹಂಚಿಕೊಂಡಿದ್ದರು ನಟಿ ರಾಧಿಕಾ
ಫೋಟೋದಲ್ಲಿ ಐರಾ ಮುದ್ದಾಗಿ ನಕ್ಕಿದ್ದಾಳೆ ಲಂಗ, ಬ್ಲೌಸ್‍ಗೆ ದಾವಣಿಯನ್ನು ತೊಡಿಸಿದ್ದಾರೆ. ಮಗಳ ಫೋಟೋವನ್ನು ರಾಧಿಕಾ ಅವರು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ‘ನಮ್ಮ ಪುಟ್ಟ ಲಕ್ಷ್ಮಿ’ ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ.

ಶುಕ್ರವಾರ ಯಶ್, ರಾಧಿಕಾ ಮಗಳ ಜೊತೆಗಿರುವ ಫೋಟೋ ಹಾಕಿ, “ನಮ್ಮ ಮನೆಯ ಪುಟ್ಟ ಲಕ್ಷ್ಮಿ ಕಡೆಯಿಂದ ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರು ಸಹಜ ಸ್ಥಿತಿಯತ್ತ ಬರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡೋಣ” ಎಂದು ಹಬ್ಬಕ್ಕೆ ಶುಭ ಕೋರಿದ್ದರು.

ಒಟ್ಟಿನಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದ ಬಣ್ಣದ ಜಗತ್ತಿನಲ್ಲಿಕೊಂಡೆ ವರ್ಷಾಂತರಗಳ ಕಾಲ ಪ್ರೀತಿಯನ್ನ ಕಾಪಿಟ್ಟುಕೊಂಡು ಮದುವೆಯಾಗಿ ಈಗ ಮಗುವನ್ನು ಪಡೆದ ಈ ಜೋಡಿ ನೂರ್ಕಾಲ ಸುಖವಾಗಿ ಬಾಳಲಿ, ಬದುಕು ಬಂಗಾರವಾಗಿರಲಿ

ಅಜೇಯ್ ರಾವ್ ಮನೆ ಪುಟ್ಟ ವರಮಹಾಲಕ್ಷ್ಮಿ

ಕೃಷ್ಣಾ ಖ್ಯಾತಿಯ ನಟ ಅಜೇಯ್ ರಾವ್ ಇದೀಗ ಸಂತಸದಲ್ಲಿ ತೇಲಾಡುತ್ತಿದ್ದಾರೆ.. ನವೆಂಬರ್23 ರಂದು ಅಜಯ್ ರಾವ್ ಪತ್ನಿ ಸ್ವಪ್ನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅಜಯ್​​ ಮುದ್ದು ಮಗಳಾದ ಚೆರಿಶ್ಮಳಿಗೆ 6 ತಿಂಗಳಾದ ನಂತರ ತಮ್ಮ ಮಗಳ ಫೋಟೋವನ್ನು ಅಜಯ್ ರಾವ್ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದರು.

ವರಮಹಾಲಕ್ಷ್ಮಿ ಹಬ್ಬದಂದು ತಮ್ಮ ಮಗಳಿಗೆ ಸಾಂಪ್ರದಾಯಿಕ ಉಡುಪು ಹಾಕಿದ್ದಾರೆ. ಅಲ್ಲದೆ ಬ್ಯಾಕ್‍ಗ್ರೌಂಡ್‍ನಲ್ಲಿ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡು ಹಾಕಿ ಚರಿಷ್ಮಾ ನಡೆದುಕೊಂಡು ಬರುತ್ತಿರುವ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ

ಸ್ವಪ್ನ ಅವರು ಚರಿಷ್ಮಾ ವಿಡಿಯೋ ಜೊತೆ ಆಕೆಯ ಫೋಟೋ ಹಾಗೂ ಫ್ಯಾಮಿಲಿ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, “ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

ನಟ ಅಜಯ್ ರಾವ್ ಅವರ ಪತ್ನಿ ಸ್ವಪ್ನ ರಾವ್ ತಮ್ಮ ಮಗಳಿಗೆ ಬಸವಣ್ಣನಂತೆ ಉಡುಪು ಹಾಕಿ ಫೋಟೋ ಕ್ಲಿಕ್ಕಿಸಿದ್ದಾರೆ. ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮಗಳು ಚರಿಷ್ಮಾಳ ಫೋಟೋ ಹಂಚಿಕೊಂಡಿರುವ ಅಜೇಯ್ ರಾವ್ ಅದಕ್ಕೆ, “ನಮ್ಮನೆ ಪುಟ್ಟ ಬಸವಣ್ಣ” ಎಂದು ಬರೆದುಕೊಂಡಿದ್ದರು. ಸ್ವಪ್ನ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಫಿದಾ ಆಗಿದ್ದು ವೈರಲ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಂದಹಾಗೆ, ಅಜಯ್ ಹಾಗೂ ಸ್ವಪ್ನ ದಂಪತಿಯ ವಿವಾಹ 2014ರ ಡಿಸೆಂಬರ್ 18 ರಂದು ಕೊಪ್ಪಳದ ದೇವಸ್ಥಾನದಲ್ಲಿ ನಡೆದಿತ್ತು. ಸ್ವಪ್ನ ಕೂಡ ಅಜಯ್ ಅವರ ಹುಟ್ಟೂರಾದ ಹೊಸಪೇಟೆಯವರೇ ಆಗಿದ್ದಾರೆ. ಇಬ್ಬರೂ ಪ್ರೀತಿ ನಂತರ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು.

ಶ್ವೇತಾ ಶ್ರೀವತ್ಸವ ಮನೆ ಪುಟ್ಟ ವರಮಹಾಲಕ್ಷ್ಮಿ

ಸಿಂಪಲ್ಲಾಗ್ ಒಂದು ಲವ್ ಸ್ಟೋರಿ’ ಖ್ಯಾತಿಯ ನಟಿ ಶ್ವೇತಾ ಶ್ರೀವಾತ್ಸವ್ ಅವರು ಕೆಲವು ತಿಂಗಳ ಹಿಂದೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಚಿತ್ರರಂಗದಿಂದ ಸ್ವಲ್ಪ ಕಾಲ ದೂರ ಉಳಿದಿರುವ ತಮ್ಮ ಮುದ್ದು ಮಗಳ ಜೊತೆ ಕಾಲ ಕಳೆಯುತ್ತಿದ್ದಾರೆ.

ನಟಿ ಶ್ವೇತಾ ಶ್ರೀವತ್ಸವ ತಮ್ಮ ಮಗಳಿಗೆ ತನ್ನ (ಶ್ವೇತಾ) ಮತ್ತು ತಮ್ಮ ಪತಿಯ(ಅಮಿತ್) ಅವರ ಹೆಸರನ್ನು ಜೋಡಿಸಿ ಸುಂದರವಾದ ಹೆಸರನ್ನು ಇಟ್ಟಿದ್ದಾರೆ. ತಮ್ಮ ಮುದ್ದು ಮಗಳಿಗೆ ‘ಅಶ್ಮಿತಾ’ ಎಂದು ನಾಮಕರಣ ಮಾಡಿದ್ದಾರೆ. ಅಶ್ಮಿತಾ ಜೊತೆ ಊರು ಸುತ್ತಾಡುತ್ತಿರುವ ಶ್ವೇತಾ ಶ್ರೀವತ್ಸವ ತಮ್ಮ ತಾಯ್ತನದ ಘಳಿಗೆಯನ್ನು ಎಂಜಾಯ್ ಮಾಡ್ತಿದ್ದು ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.

 

ವರಮಹಾಲಕ್ಷ್ಮಿ ಹಬ್ಬದಂದು ತಮ್ಮ ಮಗಳಿಗೆ ಸಾಂಪ್ರದಾಯಿಕ ಉಡುಪು ಹಾಕಿದ್ದಾರೆ. ಮಗಳ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, “ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top