fbpx
ಭವಿಷ್ಯ

ಆಗಸ್ಟ್ 18- ಇಂದಿನ ಪಂಚಾಂಗ ಮತ್ತು ದಿನಭವಿಷ್ಯ.

ಸ್ಥಳ- ಬೆಂಗಳೂರು.
ಭಾನುವಾರ, ಆಗಸ್ಟ್ 18 2019
ಸೂರ್ಯೋದಯ: 6:07 am
ಸೂರ್ಯಾಸ್ತ: 6:39 pm
ಶಕ ಸಂವತ: 1941 ವಿಲಂಬಿ

ಅಮಂತ ತಿಂಗಳು :ಶ್ರಾವಣ
ಪಕ್ಷ : ಕೃಷ್ಣ ಪಕ್ಷ
ತಿಥಿ :ತೃತೀಯಾ 25:13
ನಕ್ಷತ್ರ: PurvaBhadrapada 16:55
ಯೋಗ : ಸುಕರ್ಮ 14:51
ಕರಣ: ವಾಣಿಜ 12:01 ವಿಷ್ಟಿ 25:13

ಅಭಿಜಿತ್ ಮುಹುರ್ತ:11:58 am – 12:48 pm
ಅಮೃತಕಾಲ :7:55 am – 9:43 am

ರಾಹುಕಾಲ- 5:02 pm – 6:35 pm
ಯಮಗಂಡ ಕಾಲ- 12:23 pm – 1:56 pm
ಗುಳಿಕ ಕಾಲ- 3:29 pm – 5:02 pm

 

 

 

ಮೇಷ (Mesha)

 

ಮನಸ್ಸಿನ ಜಡತ್ವ ತೊರೆದು ಕಾರ್ಯ ಪ್ರವೃತ್ತರಾಗಿರಿ. ಇದರಿಂದ ಆಗಬೇಕಾದ ಕೆಲಸಗಳು ಅರ್ಧದಷ್ಟಾದರೂ ಆಗುವ ಸಾಧ್ಯತೆ. ಸ್ನೇಹಿತರು ನಿಮಗೆ ಸಹಕಾರ ನೀಡುವರು. ಕೌಟುಂಬಿಕವಾಗಿ ನಿಮಗೆ ಬೆಂಬಲ ವ್ಯಕ್ತವಾಗುವುದು.

ವೃಷಭ (Vrushabh)


ಶುಭ ಸಮಾರಂಭಗಳಲ್ಲಿ ಭಾಗವಹಿಸಲು ದೂರ ಪ್ರಯಾಣ ಬೆಳೆಸುವಿರಿ. ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ದೊರೆಯುವುದು. ಕಾರ್ಯಸಿದ್ಧಿ ಆಗುವುದು. ಹಣವು ಮಾತ್ರ ನೀರಿನಂತೆ ಖರ್ಚಾಗುವುದು.

ಮಿಥುನ (Mithuna)


ವಿವಿಧ ಮೂಲಗಳಿಂದ ಹಣಕಾಸು ಹರಿದು ಬರುವುದು. ಕೌಟುಂಬಿಕವಾಗಿ ನೆಮ್ಮದಿಯ ದಿನ. ಬಂಧುಗಳ ಭೇಟಿಯಾಗುವುದು. ವ್ಯಾಪಾರ ವ್ಯವಹಾರಗಳಲ್ಲಿ ದೈವಾನುಕೂಲತೆಯಿಂದ ಜನಾನುಕೂಲತೆಯು ಸೇರಿ ಅಧಿಕ ಲಾಭಾಂಶ ಬರುವುದು.

ಕರ್ಕ (Karka)


ಕೆಲವೊಮ್ಮೆ ನೀವೇ ತೀರ್ಮಾನ ಮಾಡಿಕೊಂಡಂತೆ ಕೆಲಸ ಕಾರ್ಯಗಳು ನಡೆಯುವುದಾದರೂ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಸಾಮಾಜಿಕವಾಗಿ ಎಲ್ಲರೊಡನೆ ಬೆರೆಯುವುದನ್ನು ಕಲಿತುಕೊಳ್ಳಿರಿ. ಮಾನಸಿಕ ತುಮುಲ ಕಡಿಮೆ ಆಗುವುದು.

ಸಿಂಹ (Simha)


ಆಲೋಚಿಸಿದ ಕಾರ್ಯಗಳು ಶೀಘ್ರದಲ್ಲಿ ನೆರವೇರುವುದು. ವಾದ ಸ್ಪರ್ಧೆಯಲ್ಲಿ ಜಯ, ವಿದ್ಯಾಬುದ್ಧಿಯಲ್ಲಿ ಯಶಸ್ಸು ಸಿಗುವುದು. ಗುರುಹಿರಿಯರ ಆಶೀರ್ವಾದ ಪಡೆಯಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕನ್ಯಾರಾಶಿ (Kanya)


ಕೆಲಸ ಕಾರ್ಯಗಳಲ್ಲಿ ಅನುಕೂಲ ತೋರಿಬರಲಿದೆ. ವ್ಯಾಪಾರ-ವ್ಯವಹಾರಗಳಲ್ಲಿ ಎಂದಿಗಿಂತ ತುಸು ಲಾಭಾಂಶ ಹೆಚ್ಚಾಗಲಿದೆ. ನೂತನ ಕಾರ್ಯವನ್ನು ಕೈಗೆತ್ತಿಕೊಳ್ಳುವಿರಿ. ಸಂಗಾತಿಯ ಸಕಾಲಿಕ ಎಚ್ಚರಿಕೆ ಮಾತು ಒಳಿತಾಗುವುದು.

ತುಲಾ (Tula)


ಹಣಕಾಸಿನ ವಿಷಯದಲ್ಲಿ ಇಂದು ಪ್ರಗತಿಯನ್ನು ಸಾಧಿಸುವಿರಿ. ಕೃಷಿ ಕೈಗಾರಿಕಾ ಕ್ಷೇತ್ರದಲ್ಲಿ ಲಾಭಾಂಶವಿದೆ. ರಾಜಕೀಯವಾಗಿ ನಿಮಗೆ ಸೂಕ್ತ ಸ್ಥಾನಮಾನ ದೊರೆಯುವುದು. ಸಾಮಾಜಿಕ ರಂಗದಲ್ಲಿ ಮಾನ ಸನ್ಮಾನಗಳು ಆಗುವುದು.

ವೃಶ್ಚಿಕ (Vrushchika)


ಮನೋಕಾಮನೆಗಳು ಪೂರ್ಣಗೊಳ್ಳುವುದು. ವಿವಿಧ ಮೂಲಗಳಿಂದ ಹಣವು ಹರಿದು ಬರುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಆರೋಗ್ಯ ಉತ್ತಮವಿರುವುದು.

ಧನು ರಾಶಿ (Dhanu)


ದೂರದಿಂದ ಬರುವ ಗೆಳೆಯನಿಂದ ಸಾಕಷ್ಟು ವಿಷಯಗಳನ್ನು ತಿಳಿಯುವಿರಿ. ನೀವು ಕಲಿಯಬೇಕಾದ್ದು ಬಹಳವಿದೆ ಎನಿಸುವುದು. ನಿಜ ಜಿಜ್ಞಾಸುವಿಗೆ ಇರುವ ಗುಣವೇ ನಿಮ್ಮಲ್ಲಿರುವುದರಿಂದ ಈ ದಿನ ಉತ್ತಮ ಪಾಠವನ್ನು ಕಲಿಯುವಿರಿ.

ಮಕರ (Makara)


ಪರರ ಜಗಳವನ್ನು ತೀರಿಸುವಲ್ಲಿ ಮಧ್ಯಸ್ಥಿಕೆ ವಹಿಸದಿರಿ. ಇದರಿಂದ ನಿಮಗೆ ತೊಂದರೆ ಆಗುವುದು. ನೀವು ನಿಮ್ಮ ಗಮನವನ್ನು ನಿಮ್ಮ ಕೆಲಸದ ಕಡೆ ಕೊಡಿರಿ. ನೆಮ್ಮದಿಯ ಜೀವನವನ್ನು ಕಂಡುಕೊಳ್ಳುವಿರಿ.

ಕುಂಭರಾಶಿ (Kumbha)


ಈ ದಿನ ಘಟಿಸುವ ಕೆಲವು ಘಟನೆಗಳಿಗೆ ನೀವೇ ಜವಾಬ್ದಾರರಾಗುತ್ತೀರಿ. ತಪ್ಪನ್ನು ಒಪ್ಪಿಕೊಳ್ಳುವ ಮೂಲಕ ದೊಡ್ಡತನ ಮೆರೆಯಿರಿ, ಬಂಧುಮಿತ್ರರ ದರ್ಶನ ಆಗುವುದು, ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುವುದು. ವಿದ್ಯಾರ್ಥಿಗಳಿಗೆ ಉತ್ತಮ ಕಾಲ. ನೌಕರರಿಗೆ ಮುಂಬಡ್ತಿಯ ಸಾಧ್ಯತೆಯಿದೆ.

ಮೀನರಾಶಿ (Meena)


ಆಲೋಚಿಸಿದ ಕೆಲಸಗಳು ಶೀಘ್ರಗತಿಯಲ್ಲಿ ಆಗುವುದು. ಗುರು ಹಿರಿಯರ ಆಶೀರ್ವಾದ ದೊರೆಯುವುದು. ಮನೋವ್ಯಾಕುಲತೆ ದೂರವಾಗುವುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ, ನಕಾರಾತ್ಮಕ ಚಿಂತನೆಯಿಂದ ಮಾಡುವ ಕೆಲಸಗಳು ನಿಮಗೆ ಗೌರವ ತೋರುವುದು. ಪ್ರಯಾಣದಲ್ಲಿ ಎಚ್ಚರ ಅಗತ್ಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top