fbpx
ಸಿನಿಮಾ

ಸೈಮಾ ಅವಾರ್ಡ್ಸ್ ಕೆಜಿಎಫ್ ಗೆ 8 ಪ್ರಶಸ್ತಿ, ಅನಿವಾರ್ಯತೆಗೆ ಪ್ರಶಸ್ತಿಗಳನ್ನ ಕೊಡೋದು ವ್ಯವಹಾರ ಎಂದು ರಘುರಾಮ್ ಹೇಳಿದ್ದು ಏಕೆ

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಐತಿಹಾಸಿಕ ದಾಖಲೆ ಬರೆದಿದ್ದು 200 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ, 10 ದಿನದಲ್ಲಿ 150 ಕೋಟಿ ರೂಪಾಯಿಯನ್ನು ಗಳಿಸಿತ್ತು. 19ನೇ ದಿನಕ್ಕೆ ಬರೋಬ್ಬರಿ 200 ಕೋಟಿ ರೂ.ಗಳಿಕೆ ಕಂಡಿದೆ. ಅದರಲ್ಲೂ ಕರ್ನಾಟಕದಲ್ಲೇ 120 ಕೋಟಿ ಕಲೆಕ್ಷನ್ ಮಾಡಿರುವುದು ವಿಶೇಷವಾಗಿದೆ.

ಏನದು ಹೊಸ ದಾಖಲೆ.

ದಾಖಲೆಗಳ ಮೇಲೆ ದಾಖಲೆಗಳ ಸಲರಮಾಲೆಯನ್ನೇ ಮುರಿಯುತ್ತಿರುವ ಕೆಜಿಎಫ್ ಸಿನಿಮಾ ಇದೀಗ ಮತ್ತೊಂದು ದೊಡ್ಡ ದಾಖಲೆ ನಿರ್ಮಿಸಿದೆ., ಬುಕ್​ ಮೈ ಶೋ ಆಪ್​ನಲ್ಲಿ 4 ಲಕ್ಷಕ್ಕೂ ಅಧಿಕ ವೋಟ್​ ಗಳನ್ನ ಕೆಜಿಎಫ್ ಸಿನಿಮಾ ಪಡೆದುಕೊಂಡಿದೆ. ಈ ಸಾಧನೆ ಮಾಡಿದ ಏಕೈಕ ಕನ್ನಡ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಕೆಜಿಎಫ್​ ಸಿನಿಮಾ ಪಾತ್ರವಾಗಿದೆ. ಇಷ್ಟೆ ಅಲ್ಲದೆ, ದಕ್ಷಿಣ ಭಾರತದಲ್ಲಿ ಇಷ್ಟೊಂದು ವೋಟ್​ ಪಡೆದ ಮೂರನೇ ಸಿನಿಮಾ ಇದಾಗಿದೆದ್ದು ಬಾಹುಬಲಿ 2 ಮತ್ತು ರೋಬೋ 2 ಮೊದಲೆರಡು ಸ್ಥಾನದಲ್ಲಿದ್ರೆ, ಕೆಜಿಎಫ್​ ಮೂರನೇ ಸ್ಥಾನದಲ್ಲಿದೆ.

 

 

ಪ್ರಶಾಂತ್ ನೀಲ್ ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್’ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಐದು ಭಾಷೆಗಳಲ್ಲಿ ಕ್ರಿಸ್​ಮಸ್​ ಪ್ರಯುಕ್ತ ಡಿ.21ರಂದು ಚಿತ್ರ ತೆರೆಕಂಡಿತ್ತು. ಘಟಾನುಘಟಿ ನಟರ ಸಿನಿಮಾಗಳ ಮಧ್ಯೆಯೇ ತೆರೆಕಂಡು ಗೆಲುವಿನ ನಗೆ ಬೀರಿತ್ತು. ಈಗ ಬಿಡುಗಡೆಯಾದ 18 ದಿನಗಳಲ್ಲಿ 200 ರೂ. ಸೇರಿದೆ. ಈ ಮೂಲಕ ಗಳಿಕೆಯಲ್ಲಿ ದ್ವಿಶತಕ ಗಳಿಕೆ ಮಾಡಿದ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಕೆಜಿಎಫ್’ ಪಾತ್ರವಾಗಿದೆ​.

 

 

ಕಳೆದ ವಾರ ಪ್ರಕಟವಾಗಿದ್ದ ನ್ಯಾಷನಲ್​ ಅವಾರ್ಡ್​ನಲ್ಲಿ ‘ಕೆಜಿಎಫ್’​ ಚಿತ್ರ 2 ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಇದೀಗ ಸೈಮಾದಲ್ಲೂ ಪ್ರಶಸ್ತಿ ಮೆಟ್ಟಿಲೇರಿದ
ಕೆಜಿಎಫ್ ಚಿತ್ರ ಒಟ್ಟು 8 ಸೈಮಾ ಅವಾರ್ಡ್ ಗಳನ್ನೂ ತನ್ನ ತೆಕ್ಕೆಗೆ ಹಾಕಿಕೊಂಡಿದೆ,ಅತ್ಯುತ್ತಮ ನಟ ಅವಾರ್ಡ್​ ಯಶ್ ಪಡೆದರೆ, ಅತ್ಯುತ್ತಮ ನಿರ್ದೇಶಕನ ಪ್ರಶಸ್ತಿ ಪ್ರಶಾಂತ್ ನೀಲ್​ ಪಡೆದರು. ತಾಯಿಯ ಪಾತ್ರ ಮಾಡಿದ ಅರ್ಚನಾ ಜೋಯಿಸ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದರು, ಅತ್ಯುತ್ತಮ ಛಾಯಾಗ್ರಾಹಕನ ಪ್ರಶಸ್ತಿ ‘ಕೆಜಿಎಫ್’ ಚಿತ್ರದ ಭುವನ್ ಗೌಡರಿಗೆ ಲಭಿಸಿತು, ಅತ್ಯುತ್ತಮ ಪೋಷಕ ನಟ ಅಚ್ಯುತ್ ಕುಮಾರ್ ಮತ್ತು ಹಿನ್ನಲೆ ಗಾಯಕ ಪ್ರಶಸ್ತಿ ಪಡೆದುಕೊಂಡಿತು.

ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಸಿನಿಮಾ 3 ಪ್ರಶಸ್ತಿಯನ್ನು ತೆಕ್ಕೆಗೆ ಹಾಕಿಕೊಂಡಿದೆ, ಟಗರು ಚಿತ್ರ 3 ಪ್ರಶಸ್ತಿಗಳನ್ನೂ ತೆಕ್ಕೆಗೆ ಹಾಕಿಕೊಂಡಿದೆ ಇದರ ಬಗ್ಗೆ ನಟ ಮತ್ತು ನಿರ್ದೇಶಕ ರಾಘುರಾಮ್ ಬೇಸರಗೊಂಡಿದ್ದಾರೆ, “ಪಡೆದುಕೊಳ್ಳೋದು ಸಂಸ್ಕಾರ ಕೆಲವರ ಅವಶ್ಯಕತೆಗೆ ಮಿಕ್ಕವರ ಅನಿವಾರ್ಯತೆಗೆ ಪ್ರಶಸ್ತಿಗಳನ್ನು ಕೊಡೋದು ವ್ಯವಹಾರ. ವಿಶ್ವಾದ್ಯಂತ ಜನಪ್ರಿಯವಾಗಿರೋ ಟಗರು ಚಿತ್ರಕ್ಕೆ ,ಹಾಡಿಗೆ, ಹಾಡುಗಾರನಿಗೆ, ಸಂಗೀತ ನಿರ್ದೇಶಕನಿಗೆ, ಚಿತ್ರಕಥೆಗೆ, ಗುರುತು ಗೌರವ ಸಿಗದೇ ಇರೋದು ಸೈಮಾ ಅವರ ಪಕ್ಷಪಾತದ ನಿರ್ಧಾರ” ಎಂದು ತಮ್ಮ ಆವೇಶವನ್ನು ಹೊರಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top