fbpx
ಸಮಾಚಾರ

ಕನ್ನಡಪರ ಹೋರಾಟಗಾರರ ಬಂಧನ ಪ್ರಕರಣ ಹಾಸ್ಯ ನಟ ಜಗ್ಗೇಶ್ ಕೊಟ್ಟ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ

ಜೈನ ದೇವಾಲಯಗಳಲ್ಲಿ ಧ್ವನಿವರ್ಧಕದಲ್ಲಿ ಹೆಚ್ಚಾಗಿ ಹಿಂದಿ ಭಾಷೆಯಲ್ಲಿ ಘೋಷಣೆ ಮಾಡಲಾಗುತ್ತಿದೆ. ಕನ್ನಡ ಬಳಕೆ ಹಿಂದಿಗಿಂತ ಕಡಿಮೆಯಾಗಿದೆ. ರಾಜಸ್ತಾನ, ಗುಜರಾತ್ ಮೂಲದ ಹಿಂದಿಗರಿಗಾಗಿ ಕನ್ನಡ ಕಡೆಗಣಿಸಿ ಹಿಂದಿಗೆ ಪ್ರಾಧ್ಯಾನ್ಯತೆ ಕೊಡುವುದು ಎಷ್ಟು ಸರಿ ಎಂಬ ಅಸಮಾಧಾನ ಕೆಲವೆಡೆ ಕೇಳಿ ಬರುತ್ತಿದೆ. ಕನ್ನಡದಲ್ಲಿ ಅಪಾರವಾಗಿ ಜೈನ ಭಕ್ತಿ ಗೀತೆಗಳು ಲಭ್ಯವಿದ್ದರೂ ಹೆಚ್ಚಾಗಿ ಹಿಂದಿ ಭಕ್ತಿ ಗೀತೆಗಳನ್ನು ಬಳಸುವುದು ಎಷ್ಟು ಸರಿ, ನಾಮಫಲಕಗಳು ಹಾಗೆಯೇ ಬಸ್ತಿಯ ಎಲ್ಲ ಕಡೆ ಹಿಂದಿ ಇರುವುದು ಮೂಲ ಕನ್ನಡಿಗ ಜೈನರ ಅಸಮಾಧಾನಕ್ಕೆ ಕಾರಣವಾಗಿದೆ.

ಕನ್ನಡ ಹಾಗು ಜೈನ ಧರ್ಮದ ನಂಟು ಇಂದು ನಿನ್ನೆಯದಲ್ಲ. ಶ್ರವಣಬೆಳಗೊಳದಲ್ಲಿ ಅಲ್ಲಿಂದ ಇಲ್ಲಿವರೆಗೂ ಇಲ್ಲಿ ಕನ್ನಡಕ್ಕೆ ಮೊದಲನೇ ಪ್ರಾಮುಖ್ಯತೆ ಕೊಡಲಾಗುತ್ತಿತ್ತು ಆದರೆ ಈಗ ಹಿಂದಿಗೆ ಪ್ರಾಮುಖ್ಯತೆ ಕೊಡುತ್ತಿರುವುದು ನೋವಿನ ಸಂಗತಿಯಾಗಿದೆ. ಇನ್ನು ದರ್ಶನದ ವಿಚಾರಕ್ಕೆ ಬಂದರೆ ಅನ್ಯ ರಾಜ್ಯದ ಹಿಂದಿಗರಿಗೆ ಸುಲಭವಾಗಿ ಪಾಸ್ ಸಿಗುತ್ತಿವೆ. ಸ್ಥಳೀಯರಿಗೆ ಪಾಸ್ ಸಿಗದೇ ಮಧ್ಯಾಹ್ನದ ನಂತರ ಮಸ್ತಕಾಭಿಷೇಕ ಮುಗಿದ ಬಳಿಕ ದರ್ಶನ ಪಡೆಯಬೇಕಾದ ಸಂಧರ್ಬ ಎದುರಾಗುತ್ತಿದೆ.

ಇನ್ನು ಇತ್ತೀಚಿಗೆ ಸಂಸದನಾದ ಹಿಂದಿ ಪ್ರಿಯ ತೇಜಸ್ವಿ ಸೂರ್ಯ ಜೈನ ದೇವಾಲದಯಲ್ಲಿ ಹಿಂದಿ ಬ್ಯಾನರ್ ಇದ್ದದ್ದನ್ನು ಕಂಡು ಜೈನ ಸಹೋದರರ ಮೇಲೆ ಹಲ್ಲೆ ನಡೆಸಿದ ರೌಡಿಗಳು ಎಂಬಂತೆ ಟ್ವೀಟ್ ಮಾಡಿದ್ದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ, ನಮ್ಮ ರಾಜ್ಯದಲ್ಲಿ ನಮ್ಮ ಭಾಷೆಯನ್ನು ಕೇಳಿದರೆ ತಪ್ಪೇ ಎಂದು ಟ್ವೀಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

 

ಪ್ರತಿರೋಧ ಹೆಚ್ಚಾಗುತ್ತಿದ್ದಂತೆ ತನ್ನ ತಪ್ಪನ್ನು ಅರಿತ ತೇಜಸ್ವಿ ಮತ್ತೊಂದು ಟ್ವಿಟ್ ಮಾಡಿ ಪಂಪ,ರನ್ನ,ಪೊನ್ನ ತ್ರಿವಳಿ ರತ್ನತ್ರಯರು ಕನ್ನಡಿಗರು. ಜೈನ ಧರ್ಮಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಬಹಳ ಮಹತ್ವವಾದದ್ದು ಅದರಿಂದ ಕನ್ನಡ ಭಾಷೆ ಹಾಗು ಇತಿಹಾಸ ತಿಳಿದು ದಿನ ನಿತ್ಯದಲ್ಲಿ ಕನ್ನಡ ಬಳಸಿ ಎಂದು ತಮ್ಮ ರೂಟ್ ಬದಲಿಸಿದ್ದಾರೆ.

ಬೆಂಗಳೂರಿನ ಜೈನ ಧಾರ್ಮಿಕ ಕೇಂದ್ರದ ಮುಂದೆ ಹಾಕಿದ್ದ ಹಿಂದಿ ಭಾಷೆಯನಾಮ ಫಲಕ ಕಿತ್ತು ಹಾಕಿದ ಘಟನೆಗೆ ತಾಯ್ನಾಡು, ಧರ್ಮದ, ಆತ್ಮಾಭಿಮಾನ, ರಾಜಕೀಯ, ಕಾನೂನಿನ ಆಯಾಮಗಳು ಸಿಕ್ಕಿವೆ. ಹಿಂದಿ ಬ್ಯಾನರ್‌ ಕಿತ್ತಿದ್ದಕ್ಕೆ ಜೈನ ಸಮುದಾಯದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದ್ದರೆ ಕನ್ನಡ ಕಾರ್ಯಕರ್ತರನ್ನು ಬಂಧಿಸಿದ್ದಕ್ಕೆ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಸಂಘಟನೆಗಳು ಸಾಮಾಜಿಕ ತಾಣಗಳ ಮೂಲಕ ಆಕ್ರೋಶ ಹೊರಹಾಕಿದ್ದಾರೆ

ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯಲ್ಲಿರುವ ಜೈನ ದೇವಾಲಯದ ಪ್ರವೇಶ ದ್ವಾರದಲ್ಲಿ ಹಾಕಿದ್ದ ಹಿಂದಿ ಬ್ಯಾನರ್ ಅನ್ನು ಕನ್ನಡ ಪರ ಕಾರ್ಯಕರ್ತರು ಕಿತ್ತುಹಾಕಿದ್ದರು. ಘಟನೆಯ ಸಂಬಂಧ ಆರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಕಾರ್ಯಕರ್ತರ ಬಂಧನವಾಗುತ್ತಲೇ ಸಾಮಾಜಿಕ ತಾಣಗಳಲ್ಲಿ ಕನ್ನಡದ ಚರ್ಚೆ ಆರಂಭವಾಗಿವೆ.

ಧರ್ಮಕ್ಕೆ ಅಪಚಾರ?
ಈ ನಡುವೆ ಕನ್ನಡ ಹೋರಾಟಗಾರರು ಕನ್ನಡದ ರಕ್ಷಣೆಯ ಹೆಸರಿನಲ್ಲಿ ಜೈನ ಧರ್ಮಕ್ಕೆ ಅಪಚಾರ ಮಾಡಿದ್ದಾರೆ ಎನ್ನುವ ಆರೋಪವೊಂದು ಕೇಳಿಬರುತ್ತಿದೆ. ಹಿಂದಿ ಬ್ಯಾನರ್ ಅನ್ನು ಕಿತ್ತುಹಾಕುವ ವೇಳೆ ಕನ್ನಡ ಪರ ಹೋರಾಟಗರು ‘ಜೈನ ಧರ್ಮನ ಪವಿತ್ರ ನಮೋಕಾರ ಮಂತ್ರವನ್ನು ಕಾಲಿನಿಂದ ತುಳಿದು ಧರ್ಮ ನಿಂದನೆ ಮಾಡಿದ್ದಾರೆ.. ಕನ್ನಡ ಪರ ಕಾರ್ಯಕರ್ತರ ಈ ನಡೆಯಿಂದ ಜೈನ ಧರ್ಮೀಯರ ಧಾರ್ಮಿಕ ನಂಬಿಕೆಗೆ ಧಕ್ಕೆಯುಂಟಾಗಿದೆ, ಕನ್ನಡ ಪರ ಕಾರ್ಯಕರ್ತರು ಕನ್ನಡ ಉಳಿಸುವ ಸಲುವಾಗಿ ಈ ರೀತಿ ಧರ್ಮಕ್ಕೆ ಅಪಚಾರ ಮಾಡಿರುವುದು ತಪ್ಪು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಇನ್ನು ಜೈನ ದೇವಾಲಯಗಳಲ್ಲಿ ಧ್ವನಿವರ್ಧಕದಲ್ಲಿ ಹೆಚ್ಚಾಗಿ ಹಿಂದಿ ಭಾಷೆಯಲ್ಲಿ ಘೋಷಣೆ ಮಾಡಲಾಗುತ್ತಿದೆ. ಕನ್ನಡ ಬಳಕೆ ಹಿಂದಿಗಿಂತ ಕಡಿಮೆಯಾಗಿದೆ. ರಾಜಸ್ತಾನ, ಗುಜರಾತ್ ಮೂಲದ ಹಿಂದಿ ಜೈನಗರಿಗಾಗಿ ಕನ್ನಡಿಗ ಜೈನರನ್ನು ಕಡೆಗಣಿಸಿ ಹಿಂದಿಗೆ ಪ್ರಾಧ್ಯಾನ್ಯತೆ ಕೊಡುವುದು ಎಷ್ಟು ಸರಿ? ಎಂಬ ಅಸಮಾಧಾನ ಕೆಲವೆಡೆ ಕೇಳಿ ಬರುತ್ತಿದೆ. ಕನ್ನಡದಲ್ಲಿ ಅಪಾರವಾಗಿ ಜೈನ ಭಕ್ತಿ ಗೀತೆಗಳು ಲಭ್ಯವಿದ್ದರೂ ಹೆಚ್ಚಾಗಿ ಹಿಂದಿ ಭಕ್ತಿ ಗೀತೆಗಳನ್ನು ಬಳಸುವುದು ಎಷ್ಟು ಸರಿ, ನಾಮಫಲಕಗಳು ಹಾಗೆಯೇ ಬಸ್ತಿಯ ಎಲ್ಲ ಕಡೆ ಹಿಂದಿ ಇರುವುದು ಮೂಲ ಕನ್ನಡಿಗ ಜೈನರ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನು ನವರಸನಾಯಕ ಜಗ್ಗೇಶ್ ಸದಾ ಆನ್ಲೈನ್ ನಲ್ಲಿ ಸಕ್ರಿಯರಾಗಿರುತ್ತಾರೆ, ಇವರು ಸಹ
‘ಕರ್ನಾಟಕದಲ್ಲಿ ಕನ್ನಡವೆ ಧರ್ಮ!
ಅಂದಮೇಲೆ ಯಾರೆಆದರು ಇಲ್ಲಿ ಬಂದಮೇಲೆ ಕನ್ನಡಧರ್ಮಗೌರವಿಸಿ!
ಕನ್ನಡನೆಲಕ್ಕೆ ಬಂದ ಎಲ್ಲಾಜಾತಿಧರ್ಮ
ನನ್ನವರು ಎಂದು ಅಪ್ಪುತ್ತದೆ ಕನ್ನಡನಾಡು! ಅಂದಮೇಲೆ
ಅನ್ಯರು ಯಾರೆಬಂದರು ಕನ್ನಡವನ್ನ ಅಪ್ಪಬೇಕು ಅದೆನಿಜಧರ್ಮ!
ಅನ್ನನೀರು ನೀಡುವನೆಲ ತಾಯಿಮಡಿಲಂತೆ!
ಇಲ್ಲಿಇರಲು ಬಂದವರು ಇಲ್ಲಿಯವರಾಗಿ!
ಸಿರಿಗನ್ನಡಂಗೆಲ್ಗೆ’ ಎಂದಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top