ಚಂದ್ರನ ಮೇಲೆ ಮಾನವ ಕಾಲಿಟ್ಟು ಬಂದಿದ್ದು ಇತಿಹಾಸ.. ಇದೀಗ ಬೆಂಗಳೂರಿನ ಮಾನವ ಸಹ ಚಂದ್ರನ ಮೇಲೆ ಇದ್ದಾನೆ. ಹೌದು, ಬೆಂಗಳೂರಿನ ನಾಗರಿಕರು ಪ್ರತಿದಿನ ಚಂದ್ರನ ಮೇಲೆ ಓಡಾಡುತ್ತಿದ್ದಾರೆ. ಇಂಥದೊಂದು ಶುಭ ಯೋಗವನ್ನು ಆಡಳಿತ ಮಾಡಿಕೊಟ್ಟಿದೆ! ಕನ್ಫ್ಯೂಸ್ ಆಗ್ಬೇಡಿ, ಬೆಂಗಳೂರಿನ ಹೆರೋಹಳ್ಳಿ ರಸ್ತೆಯ ಸ್ಥಿತಿ ಚಂದ್ರನ ಮೇಲ್ಮೈನಂತೆ ಗುಂಡಿಗಳ ಆಗವಾಗಿದ್ದು ಕಲಾವಿದ ಬಾದಲ್ ನಂಜುಂಡ ಸ್ವಾಮಿ ಇದನ್ನು ಅಣಕಿಸಿದ್ದಾರೆ. ಅವರು ಬೆಂಗಳೂರಿನಲ್ಲಿಯೇ ಚಂದ್ರಯಾನ ಮಾಡಿದ್ದು ಸರ್ಕಾರ ಮತ್ತು ಆಡಳಿತವನ್ನು ತಮ್ಮ ವಿಡಂಬನಾತ್ಮಕ ಕಲೆಯಿಂದಲೇ ತರಾಟೆಗೆ ತೆಗೆದುಕೊಂಡಿದ್ದಾರೆ.
Low cost moon walking training @ #herohalli #NammaBengaluru . Booking open pic.twitter.com/Ob1hvkRWxK
— ಅರಳಿ ಕಟ್ಟೆ (@aralikattez) September 2, 2019
ನಗರದ ರಸ್ತೆಗಳ ದುಸ್ಥಿತಿ ಕಂಡು ಚಿತ್ರಕಲಾವಿದ ಬಾದಲ್ ನಂಜುಂಡಸ್ವಾಮಿ ಕೈಗೊಂಡಿರುವ ಅಭಿಯಾನವಿದು. ನಡೆಯಲಿಕ್ಕೂ ಯೋಗ್ಯವಿಲ್ಲದ ಈ ರಸ್ತೆಗಳಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ವಾರ್ಡಿನ ತುಂಗಾನಗರ, ವಿಶ್ವನೀಡಂ ಸೇರಿದಂತೆ ಅನೇಕ ಬಡಾವಣೆಯ ರಸ್ತೆಗಳು ಹಾಳಾಗಿ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ. ಈ ರಸ್ತೆಗುಂಡಿಗಳನ್ನುಟ್ಟಿಕೊಂಡು ಕಲಾವಿದ ಬಾದಲ್ ನಂಜುಂಡಸ್ವಾಮಿ ಚಂದ್ರಯಾನ 2 ಮಾದರಿಯಲ್ಲಿ ದೃಶ್ಯರೂಪಕ ನಿರ್ಮಿಸಿದ್ದಾರೆ.
ಚಂದ್ರಯಾನ ಟ್ರೆಂಡಿಂಗ್ ನಲ್ಲಿರುವುದರಿಂದ ಈ ಬಾರಿ ಗಗನಯಾತ್ರಿಯ ದಿರಿಸನ್ನು ತೊಟ್ಟ ವ್ಯಕ್ತಿಯೊಬ್ಬ ಚಂದ್ರನ ಮೇಲ್ಮೈನಂತೆ ಕಾಣುವ ನಗರದ ರಸ್ತೆಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಹೆಜ್ಜೆ ಹಾಕುವುದನ್ನು ಚಿತ್ರಿಸಿ ಹಂಚಿಕೊಂಡಿದ್ದು, ಸದ್ಯ ಫೇಸ್ಬುಕ್, ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿದೆ. ತುಂಗಾನಗರದ ಮುಖ್ಯರಸ್ತೆಯಲ್ಲಿ ಚಿತ್ರೀಕರಿಸಿದ್ದು, ಮೂನ್ ವಾಕ್ ವಿಡಿಯೋ ನೀವು ನೋಡಿ..
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
