fbpx
ಸಮಾಚಾರ

ಕಿಚ್ಚ ಸುದೀಪ್ ಮುಂದಿನ ಚಿತ್ರದಲ್ಲಿ ಹಾಡಲು ಅವಕಾಶ ಪಡೆದ ವೈರಲ್ ಸಿಂಗರ್ ರಾಣು ಮಂಡಲ್.

ಇದು ಆನ್‌ಲೈನ್ ಯುಗದ ಅಸಲೀ ಚಮತ್ಕಾರ, ಪಶ್ಚಿಮ ಬಂಗಾಳದ ರಾಣಾಘಾಟ್‌ ರೈಲ್ವೆ ಸ್ಟೇಷನ್‌ನಲ್ಲಿ ಹಾಡು ಹಾಡುತ್ತಾ ಹೊಟ್ಟೆ ತುಂಬಿಸುತ್ತಿದ್ದ ಮಹಿಳೆಯೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಫುಲ್ ಫೇಮಸ್ ಆಗಿಬಿಟ್ಟಿದ್ದಾರೆ. ಆಕೆ ಹಾಡಿದ ‘ಏಕ್‌ ಪ್ಯಾರ್‌ ಕ ನಗ್ಮಾ ಹೈ’ ಹಾಡು ಸಕತ್ ವೈರಲ್ ಆಗಿತ್ತು. ಹಾಡಿನ ಮೂಲಕವೇ ತನ್ನದೇ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ರಾಣು ಒಂದು ಹಗಲು ಒಂದು ರಾತ್ರಿ ಕಳೆಯುವಷ್ಟರಲ್ಲಿ ಸ್ಟಾರ್ ಆಗ ಪರಿಣಮಿಸಿದ್ದರು..

 

 

ಲತಾ ಮಂಗೇಶ್ಕರ್ ಅವರ ‘ಏಕ್ ಪ್ಯಾರ್ ಕಾ ನಗ್ಮಾ ಹೈ’.. ಹಾಡಿನ ಒಂದು ವಿಡಿಯೋ ರಾನು ಜೀವನವನ್ನೇ ಬದಲಿಸಿದೆ. ಬಾಲಿವುಡ್​ ಚಿತ್ರಗಳಿಗೆ ಹಾಡುವ ಅವಕಾಶಗಳು ಅರಸಿ ಬರುತ್ತಿವೆ. ಅದರಲ್ಲೂ ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೇಶ್ಮಿಯಾ ಅವರ ‘ಹ್ಯಾಪಿ ಹಾರ್ಡಿ ಮತ್ತು ಹೀರ್’ ಚಿತ್ರದ ತೇರಿ ಮೇರಿ ಕಹಾನಿ ಗೀತೆಗೆ ತಮ್ಮ ಮಧುರ ಕಂಠ ನೀಡಿದ್ದಾರೆ.

ಈ ನಡುವೆ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಮತ್ತು ಕನ್ನಡ ನಟ ಕಿಚ್ಚ ಸುದೀಪ್ ಅವರು ಜೊತೆಯಾಗಿ ನಟಿಸುತ್ತಿರುವ ದಬಾಂಗ್ 3 ಚಿತ್ರದಲ್ಲೂ ಕೂಡ ಒಂದು ಹಾಡನ್ನು ಹಾಡಲು ರಾಣು ಅವರಿಗೆ ಅವಕಾಶ ನೀಡಲಾಗಿದೆಯಂತೆ. ಈ ಬಗ್ಗೆ ಬಾಲಿವುಡ್ ಮೀಡಿಯಾಗಳು ವರದಿ ಮಾಡಿದ್ದು ರಾಣು ಕೈಯಲ್ಲಿ ಹಾಡನ್ನು ಹಾಡಿಸುವಂತೆ ಸ್ವತಃ ಸಲ್ಮಾನ್ ಖಾನ್ ಅವರೇ ಸಂಗೀತ ನಿರ್ದೇಶಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಯಾರು ಈ ರಾಣು:
ಕೆಲವು ದಿನಗಳ ಹಿಂದೆ ರಾಣು ಮಂಡಲ್‌ ರೈಲ್ವೆ ನಿಲ್ದಾಣದಲ್ಲಿ ‘ಏಕ್‌ ಪ್ಯಾರ್‌ ಕಾ ನಗಮಾ ಹೈ..’ ಹಾಡು ಹೇಳುತ್ತಿದ್ದುದನ್ನು ಯಾರೋ ವಿಡಿಯೊ ಮಾಡಿ ಅದನ್ನು ಟ್ವಿಟರ್‌ ಹಾಗೂ ವ್ಯಾಟ್ಸ್‌ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಅದು ಬಳಿಕ ವಿವಿಧ ಸೋಷಿಯಲ್‌ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಹರಿದಾಡಿತ್ತು. ಒಂದೇ ದಿನದಲ್ಲಿ ರಾಣು ಆನ್ ಲೈನ್ ಸ್ಟಾರ್ ಆಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top