ಸ್ಥಳ- ಬೆಂಗಳೂರು.
ಸೋಮವಾರ, ಸೆಪ್ಟೆಂಬರ್ 24 2019
ಸೂರ್ಯೋದಯ : 6:08 am
ಸೂರ್ಯಾಸ್ತ: 6:14 pm
ಶಕ ಸಂವತ : 1941 ವಿಲಂಬಿ
ಅಮಂತ ತಿಂಗಳು :ಭಾದ್ರಪದ
ಪಕ್ಷ :ಕೃಷ್ಣಪಕ್ಷ
ತಿಥಿ :ದಶಮೀ 16:42
ನಕ್ಷತ್ರ:ಪುನರ್ವಸು 10:31
ಯೋಗ : ಪರಿಘ 15:43
ಕರಣ: ವಿಷ್ಟಿ 16:42 ಬಾವ 27:30
ಅಭಿಜಿತ್ ಮುಹುರ್ತ:11:47 am – 12:35 pm
ಅಮೃತಕಾಲ : 8:13 am – 9:45 am
ರಾಹುಕಾಲ- 3:11 pm – 4:41 pm
ಯಮಗಂಡ ಕಾಲ- 9:11 am – 10:41 am
ಗುಳಿಕ ಕಾಲ- 12:11 pm – 1:41 pm
ಕೆಲವು ಸಮಸ್ಯೆಗಳು ಎದುರಾಗಲಿವೆಯಾದರೂ ಎದುರಿಸುವ ಶಕ್ತಿಯನ್ನು ತೋರುವಿರಿ. ಜನರೊಡನೆ ಬೆರೆಯುವಾಗ ತಾಳ್ಮೆಯನ್ನು ರೂಢಿಸಿಕೊಳ್ಳಿ. ಅನವಶ್ಯಕ ಪ್ರಶ್ನೆಗಳನ್ನು ಕೇಳಿ ನಿಮಗೆ ಕೋಪ ಬರುವ ಸಾಧ್ಯತೆ ಇರುತ್ತದೆ.
ಎಷ್ಟೇ ಕೂಗಾಡಿದರೂ ಕೋಪ ಅನರ್ಥಕ್ಕೆ ಕಾರಣವಾಗುವುದೇ ಹೊರತು ಅದರಿಂದ ಯಾವ ಕೆಲಸ ಕಾರ್ಯವೂ ಕೈಗೂಡುವುದಿಲ್ಲ. ಕುಟುಂಬ ಸದಸ್ಯರ ಭಾವನೆಗಳಿಗೂ ಬೆಲೆ ಕೊಡಿ ಮತ್ತು ತಾಳ್ಮೆಯಿಂದ ಇರಿ.
ಕೆಲವು ಪ್ರಮುಖ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಆಗುವುದಿಲ್ಲ. ಅಂತೆಯೇ ಬಹು ಮುಖ್ಯವಾದ ಕಡತವೊಂದನ್ನು ಹುಡುಕಿಕೊಡಲೇ ಬೇಕೆಂದು ನಿಮ್ಮ ಮೇಲಧಿಕಾರಿಗಳು ಆದೇಶ ಹೊರಡಿಸುವರು. ದೇವರನ್ನು ಸ್ಮರಿಸಿ ಕಾರ್ಯ ಪ್ರವೃತ್ತರಾಗಿ.
ನಿಮ್ಮ ಮನಸ್ಸಿಗೆ ಸಂತೋಷ ಎನಿಸುವ ಕಾರ್ಯವು ಪೂರ್ಣಗೊಳ್ಳುವುದು. ಮಕ್ಕಳ ವಿದ್ಯಾಕಲಿಕೆಯಲ್ಲಿ ಪ್ರಗತಿ ತೋರಿ ನಿಮಗೆ ಹರ್ಷವನ್ನುಂಟು ಮಾಡುವರು. ನಿಮಗಾಗಿ ಹಿರಿಯರ ಆಶೀರ್ವಾದವು ಬೇಗನೆ ದೊರೆಯುವುದು.
ದೈಹಿಕ ಬಲದ ಜತೆಗೆ ಬುದ್ಧಿಯ ತೇಜಸ್ಸು ಹರಿತವಾದ್ದರಿಂದ ನಿಮ್ಮ ಊಹೆ ತರ್ಕಗಳು ಸರಿ ಎನಿಸುವುದು. ಇದರಿಂದ ನಿಮ್ಮ ಆಪ್ತರಿಂದ ಮೆಚ್ಚುಗೆಯನ್ನು ಪಡೆಯುವಿರಿ. ಆದರೆ ಕುಟುಂಬದ ಸದಸ್ಯರಿಂದ ಮೂದಲಿಕೆಗೆ ಗುರಿ ಆಗುವಿರಿ.
ಹೊಸ ಜನರ ಪರಿಚಯದೊಂದಿಗೆ ಹೊಸದಾದ ಜವಾಬ್ದಾರಿ ನಿಮ್ಮ ಹೆಗಲೇರುವ ಸಾಧ್ಯತೆ ಇದೆ. ರಾಜಕೀಯ ಇಲ್ಲವೆ ಸಮಾಜದಲ್ಲಿನ ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆತು ಅದರಿಂದ ನಿಮ್ಮ ವ್ಯಾಪಾರ, ವ್ಯವಹಾರಗಳಿಗೆ ಹೆಚ್ಚಿನ ಅನುಕೂಲವಾಗುವುದು.
ನಿಮಗೆ ನೀವೇ ಗುರುವಾಗಿ ನಿಮ್ಮ ಇತಿಮಿತಿಯ ಬಗ್ಗೆ ತಿಳಿಯಿರಿ. ಇದರಿಂದ ಸಮಾಜದಲ್ಲಿ ನಿಮಗೆ ಗೌರವ ದೊರೆಯುವುದು. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ. ಹಾಗಾಗಿ ಹಣ ಖರ್ಚಿನ ಬಗ್ಗೆ ಹಿಡಿತವಿರಲಿ.
ನೆರೆಹೊರೆಯ ಜನರ ಜತೆ ಎಷ್ಟು ಸೌಹಾರ್ದತೆಯಿಂದ ಇದ್ದರೂ ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿಕೊಂಡು ಜಗಳ ತೆಗೆಯುವ ಸಾಧ್ಯತೆ ಇರುತ್ತದೆ. ಸದ್ಯದ ಗ್ರಹಸ್ಥಿತಿ ಸರಿ ಇಲ್ಲದ ಕಾರಣ ಕೆಲವನ್ನು ಕಂಡರೂ ಕಾಣದಂತೆ ಇರಬೇಕಾಗುವುದು.
ವಿಶಿಷ್ಟವಾದ ಮತ್ತು ನಿಗೂಢವಾದ ಅನುಭವವೊಂದು ನಿಮ್ಮ ಪಾಲಿಗೆ ಲಭ್ಯವಾಗಲಿದೆ. ಅದರಿಂದ ಅಧ್ಯಾತ್ಮದ ಹರಿವು ಹೆಚ್ಚಾಗುವುದು. ಅಂತರ್‌ಮುಖಿಗಳಾಗಿ ದೇವತಾ ಆರಾಧನೆ ಮಾಡುವಿರಿ.
ಆರ್ಥಿಕ ಅಭಿವೃದ್ಧಿ ನಿಧಾನವಾದರೂ ಸಂತೃಪ್ತಿ ಬದುಕು, ಹೊಸ ಆಲೋಚನೆಗಳು ನಿಮ್ಮನ್ನು ಕಾಡುತ್ತವೆ. ಕೌಟುಂಬಿಕವಾಗಿ ನೆಮ್ಮದಿಯ ದಿನ. ಆರೋಗ್ಯ ಉತ್ತಮವಾಗಿರುವುದು.
ಗುರಿ ಸಾಧಿಸುವುದರಲ್ಲಿ ಸಫಲರಾಗುತ್ತೀರಿ. ಹಳೆಯ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ. ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಕೂಡದು. ಮಡದಿ, ಮಕ್ಕಳ ಜತೆ ಸಂತೋಷಕೂಟದಲ್ಲಿ ಭಾಗವಹಿಸುವಿರಿ.
ಮ್ಮಿಕೊಂಡ ಕೆಲಸ ಕಾರ್ಯಗಳು ಪೂರ್ಣಗೊಳ್ಳುವವು. ಕೆಲ ಗ್ರಹಗಳ ಶುಭದೃಷ್ಟಿಯಿಂದ ನೂತನ ಗೆಳೆಯರ ಪರಿಚಯವಾಗುವುದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
