fbpx
ಸಮಾಚಾರ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಎತ್ತಂಗಡಿಗೆ ಅಸಲಿ ಕಾರಣವೇನು ಗೊತ್ತಾ?

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ರಾಜ್ಯಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಇದೇ ತಿಂಗಳು ರೋಹಿಣಿ ಸಿಂಧೂರಿ ಅವರನ್ನು ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಅಧಿಕಾರ ವಹಿಸಿಕೊಂಡ ನಂತರ ಮಂಡಳಿಯಲ್ಲಿ ಬದಲಾವಣೆ ತರಲು ಇಚ್ಛಿಸಿದ್ದ ರೋಹಿಣಿ ಕೆಲವು ಹೊಸ ನಿಯಮಗಳನ್ನು ಅಳವಡಿಸಲು ಮುಂದಾಗಿದ್ದರು.. ಆದರೆ ಅವರ ಕೆಲವು ಹೊಸ ನಿಯಮಗಳು ಕೂಲಿ ಕಾರ್ಮಿಕರಿಗೆ ಮಾರಕಾವಾಗಿದ್ದವು ಎನ್ನಲಾಗಿದೆ.

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಹೊಸದಾಗಿ ನೋಂದಣಿ ಮಾಡಿಕೊಳ್ಳಬೇಕಾಗದ ಹೊಸ ಕೂಲಿ ಕಾರ್ಮಿಕರು ಕಡ್ಡಾಯವಾಗಿ ಮೊಬೈಲ್ ‘ಒಟಿಪಿ’ ನೀಡಬೇಕು ಎಂಬ ನಿಯಮವನ್ನು ಅಳವಡಿಸಲು ರೋಹಿಣಿ ಸಿಂಧೂರಿ ಮುಂದಾಗಿದ್ದರು. ಆದರೆ ಸಾಮಾನ್ಯವಾಗಿ ಬಹುತೇಕ ದಿನಗೂಲಿ ಕಾರ್ಮಿಕರು ಮೊಬೈಲ್ ಫೋನ್ ಗಳನ್ನು ಬಳಸದ ಕಾರಣ ಈ ನಿಯಮ ಕಾರ್ಮಿಕರಿಗೆ ಮಾರಕವಾಗಿತ್ತು. ನೋಂದಣಿ ಮಾಡಿಕೊಳ್ಳಲು ಮೊಬೈಲ್ ನೀಡಲು ಎಲ್ಲಾ ಕಾರ್ಮಿಕರಿಗೂ ಸಾಧ್ಯವಾಗುತ್ತಿರಲಿಲ್ಲ.ಕಾರ್ಮಿಕರ ಒಕ್ಕೂಟ ಈ ನಿಲುವುಗಳನ್ನು ಸಡಿಲಿಸುವಂತೆ ಬರೆದಿದ್ದ ಮನವಿ ಪತ್ರ ಅರಳೀಕಟ್ಟೆಗೆ ಲಭ್ಯವಾಗಿದೆ.

ಕಾರ್ಮಿಕರ ಒಕ್ಕೂಟ ಈ ಎಲ್ಲ ಕಟು ನಿಲುವುಗಳಿಂದ ಮನನೊಂದು ಮುಖ್ಯಮಂತ್ರಿಗಳ ಬಳಿ ತಮ್ಮ ಅಹವಾಲನ್ನು ತೋಡಿಕೊಂಡಿದ್ದಾರೆ, ಅನೇಕ ಬಾರಿ ಈ ಕ್ರಿಯೆ ಮುಂದುವರೆದಿದ್ದು ಕಾರ್ಮಿಕ ಒಕ್ಕೂಟಗಳ ಒತ್ತಡಕ್ಕೆ ಮಣಿದು ಇದೆ ಕಾರಣಕ್ಕೆ ಮುಖ್ಯಮಂತ್ರಿಗಳು ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಿರಬಹುದು ಎನ್ನುತ್ತಿವೆ ಬಲ್ಲ ಮೂಲಗಳು.ರೋಹಿಣಿ ಸಿಂಧೂರಿ ಅವರು ರಾಜ್ಯಸರ್ಕಾರದ ಮೇಲೆ ಅಸಮಾಧಾನ ಗೊಂಡಿದ್ದಾರೆ ಎನ್ನಲಾಗಿದೆ.

ಇನ್ನು ರೋಹಿಣಿ ಸಿಂಧೂರಿ ಅವರು ಈ ರೀತಿ ರಾಜ್ಯಸರ್ಕಾರದ ವಿರುದ್ಧ ಅಸಮಾಧಾನಗೊಳ್ಳುತ್ತಿರುವುದು ಇದೆ ಮೊದಲೇನಲ್ಲಾ, ಈ ಹಿಂದೆ ಕೂಡ ಅನೇಕ ಭಾರಿ ರಾಜ್ಯಸರ್ಕಾರದ ವಿರುದ್ಧ ಬೇಸರಗೊಂಡಿದ್ದರು ಎಂದು ಹೇಳಲಾಗುತ್ತಿದೆ.

ಅಂದಹಾಗೆ ನೆನ್ನೆಯಷ್ಟೇ ಸರ್ಕಾರವು ರೋಹಿಣಿ ಸಿಂಧೂರಿ ಅವರನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆಗೊಳಿಸಿ, ಅವರ ಜಾಗಕ್ಕೆ ಕಾರ್ಮಿಕ ಇಲಾಖೆ ಆಯುಕ್ತರಾದ ಕೆ.ಜಿ.ಶಾಂತರಾಂ ಅವರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ.

 

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top