fbpx
ಸಮಾಚಾರ

ರಾಕಿಂಗ್ ಸ್ಟಾರ್ ಅಭಿಮಾನಿಗಳಿಂದ ಸಂಗೀತ ಭಟ್ ಅಶ್ಲೀಲ ಸಂದೇಶ: ಯಶ್‍ಗೆ ಎರಡು ಆಪ್ಷನ್ ನೀಡಿದ ನಟಿ.

ಎರಡು ವರ್ಷದ ಹಿಂದೆ ಸುದರ್ಶನ್ ಒಂದು ಕಾಮಿಡಿ ವಿಡಿಯೋ ಮಾಡಿದ್ದರು. ಅಲ್ಲಿ ಯಶ್ ಅವರ ಡೈಲಾಗ್ ಬಳಸಿ ಕಾಮಿಡಿ ಮಾಡಿದ್ದರು. ”ನಾವು ಸೆಕೆಂಡ್ ಪಿಯುಸಿ ಇದ್ದಾಗ ಮನೆಯವರು, ಸಂಬಂಧಿಗಳು ಬರೀ ‘ಬಿಲ್ಡಪ್ ಡೈಲಾಗ್’ ಹೊಡೆಯುತ್ತಿದ್ದರು. ಅದೇ ನಮ್ ರಾಕಿಂಗ್ ಸ್ಟಾರ್ ಯಶ್ ತರ” ಎಂದು ಸುದರ್ಶನ್ ರಂಗಪ್ರಸಾದ್ ಹೇಳಿದ್ದಾರೆ. ಜೊತೆಗೆ ಇದೇ ವಿಡಿಯೋದಲ್ಲಿ ‘ಅಣ್ತಾಮ್ಮ’, ‘ಹವಾ’ ಎಂದು ಯಶ್ ಡೈಲಾಗ್ ಅನ್ನು ಇಮಿಟೇಟ್ ಮಾಡಿದ್ದರು.

 

 

View this post on Instagram

 

ನಾನು ಸಾಧಾರಣವಾಗಿ ಈರೀತಿ ವಿಷಯಗಳನ್ನು ಕುರಿತು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ, ಆದರೇ ಇದು ಮಿತಿ ಮೀರುತ್ತಿದೆ, ಈ ಪೋಸ್ಟ್ಗಳು ನಿಮಗೆ ಹೇಳುತ್ತದೆ, ನಾನು ಹೆಚ್ಚು ಏನು ಹೇಳಲು ಇಚ್ಛಿಸುವುದಿಲ್ಲ, ಇದು ಯಶ್ ಅವರು ನೋಡಿ ಇನ್ನೂ ಇದರ ಬಗ್ಗೆ ಸುಮ್ಮನಿರಬೇಕು ಅಥವಾ ಅವರನ್ನು ಹುಚ್ಚಾಗಿ ಮೆಚ್ಚುವ ಅಭಿಮಾನಿಗಳಿಗೆ ಬುದ್ಧಿವಾದ ಹೇಳಬೇಕ ಯೋಚಿಸಲಿ. I usually don’t bother for such comments or posts because as far as i have worked for the film industry i have only concentrated on giving my best. But this has gone out of hand, people are reaching an all time low, these posts are just a few examples, i hope and wish that Yash would look into this and put an end to this. @thenameisyash @iamradhikapandit

A post shared by Sangeetha Bhat Sudarshan (@sangeetha_bhat) on

 

ಈ ಕಾಮಿಡಿ ವಿಡಿಯೋವನ್ನು ಸಹಿಸದ ಯಶ್ ಅಭಿಮಾನಿಗಳು ಬಾಯಿಗೆ ಬಂದ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ, ಈ ಬಗ್ಗೆ ಮೂರ್ನಾಲ್ಕು ದಿನಗಳ ಹಿಂದೆ ಸುದರ್ಶನ್ ಫೇಸ್‌ಬುಕ್ ಪೋಸ್ಟ್ ಹಾಕಿದ್ದರು, ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮೆಸೇಜ್ ಮಾಡಿರುವ ಸ್ಕ್ರೀನ್​ಶಾಟ್​ಗಳನ್ನು ಫೇಸ್​ಬುಕ್​ನಲ್ಲಿ ಹಾಕಿದ್ದರು. ಅಷ್ಟೇ ಅಲ್ಲದೆ ಸೈಬರ್ ಕ್ರೈಮ್‌ಗೂ ಈ ಬಗ್ಗೆ ದೂರು ಸಹ ನೀಡಿದ್ದರು. “ಆದಾಗ್ಯೂ ಸುಮ್ಮನಾಗದ ಯಶ್ ಅಭಿಮಾನಿಗಳು ತಮ್ಮ ವಿರುದ್ಧ ವಯಕ್ತಿಕವಾಗಿ ಅಶ್ಲೀಲ ಕಾಮೆಂಟ್ ಮಾಡುತ್ತಿದ್ದಾರೆ” ಎಂದು ನಟಿ ಸಂಗೀತ ಆರೋಪಿಸಿದ್ದಾರೆ.

 

 

ಯಶ್‌ಗೆ ಎರಡು ಆಪ್ಶನ್ ಕೊಟ್ಟ ಸಂಗೀತಾ:
” ನಾನು ಸಾಧಾರಣವಾಗಿ ಈರೀತಿ ವಿಷಯಗಳನ್ನು ಕುರಿತು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ, ಆದರೇ ಇದು ಮಿತಿ ಮೀರುತ್ತಿದೆ, ಈ ಪೋಸ್ಟ್ಗಳು ನಿಮಗೆ ಹೇಳುತ್ತದೆ, ನಾನು ಹೆಚ್ಚು ಏನು ಹೇಳಲು ಇಚ್ಛಿಸುವುದಿಲ್ಲ, ಇದು ಯಶ್ ಅವರು ನೋಡಿ ಇನ್ನೂ ಇದರ ಬಗ್ಗೆ ಸುಮ್ಮನಿರಬೇಕು ಅಥವಾ ಅವರನ್ನು ಹುಚ್ಚಾಗಿ ಮೆಚ್ಚುವ ಅಭಿಮಾನಿಗಳಿಗೆ ಬುದ್ಧಿವಾದ ಹೇಳಬೇಕ ಯೋಚಿಸಲಿ” ಎಂದು ಸಂಗೀತಾ ಭಟ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಯಶ್ ಮತ್ತು ರಾಧಿಕಾ ಅವರನ್ನು ಟ್ಯಾಗ್ ಮಾಡಿದ್ದಾರೆ.

ಸುದರ್ಶನ್ ಹೇಳಿದ್ದೇನು?
” ಈ ಎರಡು ವರ್ಷದ ಹಳೇ ವಿಡಿಯೋದಲ್ಲಿ ನಾನು ಯಶ್ ಅವರ ಡೈಲಾಗ್ ಉಪಯೋಗಿಸಿ ನಮ್ಮ ಕಾಲೇಜ್ ಹಾಗೂ ಕುಟುಂಬದವರು ಯಾವ ರೀತಿ ಮಾತಾಡ್ತಾರೆ ಅನ್ನೋ ಬಗ್ಗೆ ಹಾಸ್ಯ ನಾಟಕ ಮಾಡಿದ್ದೇನೆ ವಿನಃ ಯಶ್ ಅವರನ್ನು ಟೀಕೆ ಮಾಡುವ ಯಾವ ಉದ್ದೇಶವೂ ನನಗೂ ಹಾಗೂ ಲೋಲ್‌ಬಾಗ್‌ಗೂ ಇಲ್ಲ. ನಾನು ಸಹ ಯಶ್ ಅವರ ಜೊತೆ ನಟಿಸಿದ್ದೀನಿ ನಾನು ಅವರ ಅಭಿಮಾನಿ ಕೂಡ.

ಈ ವೀಡಿಯೋವನ್ನು ಅಪಾರ್ಥ ಮಾಡಿಕೊಂಡು ಅದನ್ನು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ, ಇದರಲ್ಲಿ ನನ್ನ ತಪ್ಪಿಲ್ಲ. ಹಾಸ್ಯವನ್ನು ಹಾಸ್ಯವಾಗಿ ತೆಗೆದುಕೊಳ್ಳಿ ಎಂದು ವಿನಂತಿಸುತ್ತೇನೆ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಕೇಳಿಕೊಳ್ಳುತ್ತೇನೆ. ಯಶ್ ಫ್ಯಾನ್ಸ್ ಕಡೆಯಿಂದ ನನಗೆ ಹಾಗೂ ನನ್ನ ಕುಟುಂಬದವರಿಗೆ ಕೆಟ್ಟ ರೀತಿಯಲ್ಲಿ ಎಸ್‌ಎಂಎಸ್‌ ಹಾಗೂ ಜೀವ ಬೆದರಿಕೆಗಳು ಬರುತ್ತಿವೆ. ಖಂಡಿತವಾಗಿಯು ಯಶ್ ಸಹ ಅವರ ಅಭಿಮಾನಿಗಳಿಂದ ಇಂಥ ನಡುವಳಿಕೆಗಳನ್ನು ಮೆಚ್ಚುವುದಿಲ್ಲ” ಎಂದು ಸುದರ್ಶನ್ ಫೇಸ್‌ಬುಕ್ ಪೋಸ್ಟ್ ಹಾಕಿಸಿದ್ದಾರೆ.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top