fbpx
ಸಮಾಚಾರ

ರಶ್ಮಿಕಾ ಬೆಂಬಲಕ್ಕೆ ನಿಂತ ರಚಿತಾ ರಾಮ್: ಟ್ರೋಲಿಗರ ವಿರುದ್ಧ ಗುಡುಗಿದ ಡಿಂಪಲ್ ಕ್ವೀನ್!

ಸಿನಿಮಾ ನಟಿಯರ ಹಾವಭಾವ ಮತ್ತು ಅವರು ಮಾಡೋ ಕಮೆಂಟುಗಳನ್ನಿಟ್ಟುಕೊಂಡು ಟ್ರೋಲ್ ಮಾಡುವವರ ಹಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತಕ್ಕಿಟ್ಟುಕೊಂಡಿದೆ. ಅದರಲ್ಲಿಯೂ ಕೆಲ ಮಂದಿ ಎಗ್ಗುಸಿಗ್ಗಿಲ್ಲದೆ ಕೊಳಕು ಟ್ರಾಲ್ ಮಾಡೋ ಮೂಲಕ ನಟಿಯರನ್ನು ಮಾನಸಿಕ ಹಿಂಸೆಗೀಡು ಮಾಡೋದೂ ಇದೆ.. ಇದರಿಂದ ಹಲವು ಸಂದರ್ಭಗಳಲ್ಲಿ ನಟ ನಟಿಯರು ಸಂಕಟಕ್ಕೀಡಾಗಬೇಕಾಗಿ ಬಂದ ಪ್ರಸಂಗಗಳೂ ಹೆಚ್ಚಾಗಿಯೇ ಇವೆ. ಇದೀಗ ಕಿರಿಕ್ ಹುಡುಗಿ ರಶ್ಮಿಕಾ ಮಾದಣ್ಣ ಕೂಡಾ ಇಂಥಾದ್ದೇ ಕಿರಿಕಿರಿಗೀಡಾಗಿದ್ದಾರೇ.

ಸಾಮಾಜಿಕ ಜಾಲತಾಣಗಳಲ್ಲಿ ಚಿಕ್ಕ ಪುಟ್ಟ ವಿಷಯಗಳಿಗೂ ರಶ್ಮಿಕಾರನ್ನು ಟ್ರಾಲ್​ ಮಾಡಲಾಗುತ್ತಿದೆ. ಒಂದಲ್ಲಾ ಒಂದು ವಿಚಾರಕ್ಕೆ ರಶ್ಮಿಕರನ್ನು ನಿರಂತರವಾಗಿ ಟ್ರೊಲ್ ಮಾಲಾಗುತ್ತಿದೆ. ತಮ್ಮ ಮೇಲೆ ನಡೆಯುತ್ತಿರುವ ತೀರಾ ಕೆಳಮಟ್ಟದ ಟ್ರೊಲ್ ವಿರುದ್ಧ ಇತ್ತೀಚಿಗೆ ಸ್ವತಃ ರಶ್ಮಿಕಾ ಅವರೇ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಅನೇಕ ನಟ ನಟಿಯರು ರಶ್ಮಿಕಾ ಪರವಾಗಿ ಬ್ಯಾಟ್ ಬೀಸಿದ್ದರು. ಇದೀಗ ರಶ್ಮಿಕಾ ಬೆಂಬಲಕ್ಕೆ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ನಿಂತಿದ್ದು ಟ್ರಾಲಿಗರ ವಿರುದ್ಧ ಗುಡುಗಿದ್ದಾರೆ.

ಟ್ರೋಲ್ ಮಾಡುವುದು ತಪ್ಪಲ್ಲ. ಆದರೆ ಪಾಸಿಟಿವ್ ಆಗಿ ಟ್ರೋಲ್ ಮಾಡಿ. ಈ ಸ್ಥಾನಕ್ಕೆ ಬರಲು ನಾವು ತುಂಬಾ ಕಷ್ಟಪಟ್ಟಿರುತ್ತೇವೆ. ನಾನು ನಮ್ಮ ಸ್ಥಾನಕ್ಕೆ ಗೌರವ ಕೊಡುತ್ತೇವೆ. ಹಾಗೆಯೇ ನೀವು ಬೇರೆಯವರಿಗೆ ಗೌರವ ಕೊಡಿ. ಬೇರೆಯವರ ವೈಯಕ್ತಿಕ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ನಿಲ್ಲಿಸಿ. ನೆಗೆಟಿವ್ ಟ್ರೋಲ್ ಗಳಿಂದ ಯಾರ ಗೌರವಕ್ಕೂ ಧಕ್ಕೆ ತರಬೇಡಿ. ನಾವೆಲ್ಲ ಈ ಸ್ಥಾನಕ್ಕೆ ಬರಲು ತುಂಬಾ ಕಷ್ಟಪಟ್ಟಿದ್ದೇವೆ. ಕನ್ನಡಿಗರ ಪ್ರೋತ್ಸಾಹ, ಅಭಿಮಾನ, ಸಹಕಾರದಿಂದಾಗಿ ನಾವು ಬೆಳೆದಿದ್ದೇವೆ. ಈ ರೀತಿಯ ಕೆಟ್ಟ ಟ್ರೋಲ್ ಗಳು ಮನಸ್ಸಿಗೆ ತುಂಬಾ ಬೇಸರ ತರಿಸುತ್ತೆ” ಎಂದಿದ್ದಾರೆ ರಚಿತಾ ರಾಮ್.

“ರಶ್ಮಿಕಾ ಅವರು ಕನ್ನಡ ಚಿತ್ರರಂಗದಿಂದ ಬೇರೆ ಭಾಷೆಗಳಿಗೆ ಹೋದವರು. ಅವರು ಬೇರೆ ಭಾಷೆಯಲ್ಲಿ ದೊಡ್ಡಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಕನ್ನಡದವರಾಗಿ ರಶ್ಮಿಕಾ ಸಾಧನೆ ಬಗ್ಗೆ ಖುಷಿಪಡೋಣ. ಎಲ್ಲರೂ ತಪ್ಪು ಮಾಡ್ತಾರೆ. ಆದರೆ ಯಾವುದೋ ಹೇಳಿಕೆ ಇಟ್ಟುಕೊಂಡು ಅದನ್ನು ಟ್ರೋಲ್ ಮಾಡುವುದು ತಪ್ಪು.” ಎಂದು ರಚಿತಾ ರಾಮ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top