fbpx
ಸಮಾಚಾರ

ಪ್ರಿಯಾ ವಾರಿಯರ್ ಕುರಿತು ಜಗ್ಗೇಶ್ ಅಸಮಾಧಾನದ ಟ್ವೀಟ್: ವೇದಿಕೆಯಲ್ಲಿದ್ದ ಸಾಯಿ ಪ್ರಕಾಶ್ ಪ್ರತಿಕ್ರಿಯೆ!

ಕಣ್ಸನ್ನೆ ಬೆಡಗಿ ಪ್ರಿಯ ವಾರಿಯರ್ ವಿರುದ್ಧ ನವರಸ ನಾಯಕ ಜಗ್ಗೇಶ್ ಹಾಕಿದ್ದ ಪೋಸ್ಟ್ ಬಗ್ಗೆ ನಿರ್ದೇಶಕ ಸಾಯಿ ಪ್ರಕಾಶ್ ಪ್ರತಿಕ್ರಿಯೆ ನೀಡಿದ್ದು “ಸಿನಿಮಾದ ಯುವ ಕಲಾವಿದರು ಎಂದರೆ ಯುವ ಪ್ರೇಕ್ಷಕರಿಗೆ ಆಕರ್ಷಣೆ ಸಹಜ.ಇದನ್ನು ಅರ್ಥ ಮಾಡಿಕೊಳ್ಳದೆ ಜಗ್ಗೇಶ್ ಇಷ್ಟು ಕಾಲ ಚಿತ್ರೋದ್ಯಮದಲ್ಲಿದ್ದಾರ ಎನ್ನುವುದು ಅಚ್ಚರಿ ಮೂಡಿಸುವಂತಿದೆ. ” ಎಂದು ಜಗ್ಗೇಶ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಇತ್ತೀಚಿಗೆ ಜಗ್ಗೇಶ್ ಒಕ್ಕಲಿಗರ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ನಟಿ ಪ್ರಿಯಾ ವಾರಿಯರ್ ಕೂಡ ಅತಿಥಿಯಾಗಿ ವೇದಿಕೆ ಮೇಲಿದ್ದರು. ವೇದಿಕೆ ಮೇಲೆ ಗಣ್ಯರ ಜೊತೆ ಕೂತಿದ್ದ ಪ್ರಿಯಾ ಹಾಜರಿ ಜಗ್ಗೇಶ್ ಗೆ ಬೇಸರ ತರಿಸಿದೆ. ಈ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರು. ಕಣ್ಣು ಹೊಡೆದು ರಾತ್ರೋ ರಾತ್ರಿ ಸ್ಟಾರ್ ಆದ ಕೇರಳದ ಪ್ರಿಯಾ ಪ್ರಕಾಶ್ ವಾರಿಯರ್ ಜೊತೆಗೆ ವೇದಿಕೆ ಹಂಚಿಕೊಂಡ ಬಗ್ಗೆ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದರು. ಈ ಬಗ್ಗೆ ನಿರ್ದೇಶಕ ಸಾಯಿ ಪ್ರಕಾಶ್ ಪ್ರತಿಕ್ರಿಯೆ ನೀಡಿದ್ದಾರೆ..

ಸಾಯಿ ಪ್ರಕಾಶ್ ಪ್ರತಿಕ್ರಿಯೆ:
“ಸಿನಿಮಾದ ಯುವ ಕಲಾವಿದರು ಎಂದರೆ ಯುವಕರಿಗೆ ಆಕರ್ಷಣೆ ಸಹಜ. ಅದರಲ್ಲಿ ಕೂಡ ಪ್ರಿಯಾ ಪ್ರಕಾಶ್ ವಾರಿಯರ್ ವಿದ್ಯಾರ್ಥಿನಿಯ ಪಾತ್ರದಲ್ಲೇ ಗಮನ ಸೆಳೆದಿದ್ದರು. ಹಾಗಾಗಿ ಅವರ ಅಭಿಮಾನಿಗಳು ಕೂಡ ವ್ಯಾಪಕವಾಗಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು. ಅಂಥ ಅಭಿಮಾನಿಗಳು ಆಕೆಗೆ ಭರ್ಜರಿ ಚಪ್ಪಾಳೆ, ಸಿಳ್ಳೆಗಳ ಸ್ವಾಗತ ಕೋರಿದರೆ ಅದನ್ನು ತಪ್ಪು ತಿಳಿಯಲು ಸಾಧ್ಯವಿಲ್ಲ” ಎಂದಿದ್ದಾರೆ ಹಿರಿಯ ನಿರ್ದೇಶಕ ಸಾಯಿ ಪ್ರಕಾಶ್.

ನಿಜವಾಗಿ ನೋಡಿದರೆಒಂದು ಸಿನಿಮಾಗೆ ಕ್ಯಾಪ್ಟನ್ ಆಫ್ ದಿ ಶಿಪ್ ಎನಿಸಿಕೊಳ್ಳುವುದೇ ನಿರ್ದೇಶಕರು. ಆದರೆ ಪ್ರೇಕ್ಷಕನ ಚಪ್ಪಾಳೆ ಯಾವಾಗಲೂ ಪರದೆಯ ಮೇಲಿನ ತಾರೆಗಳಿಗೆ ಮೀಸಲಿರುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದೆ ಜಗ್ಗೇಶ್ ಇಷ್ಟು ಕಾಲ ಚಿತ್ರರಂಗದಲ್ಲಿ ಇದ್ದಾರೆಯೇ? ” ಎಂದು ಸಾಯಿ ಪ್ರಕಾಶ್ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಜಗ್ಗೇಶ್ ಮಾಡಿದ್ದ ಪೋಸ್ಟ್ ನಲ್ಲಿ ಏನಿತ್ತು?
“ಇಂದು ಬಲವಂತಕ್ಕೆ ಗೌರವಿಸಿ ಕಾರ್ಯಕ್ರಮಕ್ಕೆ ಹೋಗಿ ಮೌನಕ್ಕೆ ಶರಣಾಗಿ ಮೂಕವಿಸ್ಮಿತನಾದೆ. ರಾಜ್ಯ, ರಾಷ್ಟ್ರಕ್ಕೆ ಯಾವ ಕೊಡುಗೆ ಇಲ್ಲ, ಬರಹಗಾರ್ತಿಯಲ್ಲಾ, ಸ್ವಾತಂತ್ರ್ಯ ಹೋರಾಟಗಾರ್ತಿಯಂತೂ ಅಲ್ಲವೆ ಅಲ್ಲ. ಹೋಗಲಿ ನೂರು ಸಿನಿಮಾ ನಟಿಯಂತು ಅಲ್ಲಾ, ಸಾಹಿತಿ ಅಲ್ಲಾ, ಅನಾಥ ಮಕ್ಕಳಿಗೆ ಮಹಾ ತಾಯಿ ಅಲ್ಲ, ಆಧುನಿಕ ಮದರ್ ತೆರೇಸಾ ಅಲ್ಲ, ನೂರಾರು ಮರ ನೆಟ್ಟ ಸಾಲು ಮರದ ತಿಮ್ಮಕ್ಕ ಅಲ್ಲ, ಕಾದಂಬರಿ ಬರೆದ ತ್ರಿವೇಣಿ ಅಲ್ಲಾ, ಝಾನ್ಸಿ ಅಲ್ಲ! ಅಬ್ಬಕ್ಕನಲ್ಲ. ಕಿತ್ತೂರು ಚನ್ನಮ್ಮನಲ್ಲಾ! ಮತ್ತೆ ಯಾರು ಅಂಥ ಯೋಚಿಸಿದರೆ ಬೇರ್ಯಾರು ಅಲ್ಲಾ! ಕಣ್ಣು ಹೊಡೆದು ಕಣ್ಣಲ್ಲಿ ಯುವಕನಿಗೆ ಪ್ರೀತಿ ತೋರ್ಪಡಿಸುವ ಸಾಮಾನ್ಯ ವೀಡಿಯೋ ಮಾಡಿ ಜಗ ಮೆಚ್ಚಿದ ಸಾಮಾನ್ಯ ಹೆಣ್ಣುಮಗು! ಆಕೆ ಹೆಸರು ವಾರಿಯರ್ ಕೇರಳದ ಮಗು. ಕರೆದು ತಂದದ್ದು ಕನ್ನಡ ನಿರ್ಮಾಪಕ ಸ್ನೇಹಿತ ಮಂಜು. ಅದು ಒಕ್ಕಲಿಗರ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವಕ್ಕೆ. ನೂರು ಸಿನಿಮಾ ನಿರ್ದೇಶಕ ಸಾಯಿಪ್ರಕಾಶ್, ವಿದ್ಯಾದಾನಿ ಶ್ರೀ ನಿರ್ಮಲಾನಂದ ಶ್ರೀಗಳು, ಅನೇಕ ಸಾಧಕರಿಗಿಂತ ಕಣ್ಣು ಹೊಡೆವ ವಿಡಿಯೋ ನಟಿ ಇಂದು ದೇವರಂತೆ ಕಂಡಳು ಯುವಸಮಾಜಕ್ಕೆ. ಎಂಥ ಶಿಕ್ಷೆ. ಹೋದರೆ ಸಹಿಸಲಾಗದ ಹಿಂಸೆ! ಹೋಗದಿದ್ದರೆ ದುರಹಂಕಾರ ಪಟ್ಟ. ಎಂಥ ಶಿಕ್ಷೆ! ಬದುಕು, ಜೀವನ, ದೇಶ, ಸಂಸ್ಕೃತಿ ತಾಯಿತಂದೆ ಶಿಕ್ಷಣ ಶಿಕ್ಷಕರು ಸಮಾಜ ಕಲಿಸುವ ಸಾಧಕರಿಗಿಂತ ಇಂದು ಇಂಥ ಕ್ಷಣಿಕ ಹೆಸರು ಮಾಡಿದ ಆರಾಧಕರು ದೇಶ ಸಂಸ್ಕೃತಿ ತಂದೆತಾಯಿ ಭಾವನೆ ಉಳಿಸುವ ಯುವ ಸಮುದಾಯವೇ? ಪ್ರಶ್ನೆ ನನ್ನ ಕಾಡಿ ಹುಚ್ಚನಂತೆ ಚಿಂತಿಸಿ ಮರಳಿದೆ..! ದೇಶದ ಬೆನ್ನೆಲುಬು ಯುವಸಮಾಜ? ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ. ಶುಭರಾತ್ರಿ” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top