fbpx
ಸಮಾಚಾರ

ತಮ್ಮ ಹೆಸರು ಬದಲಿಸಿಕೊಂಡ ರವಿಚಂದ್ರನ್ ಪುತ್ರ!

ಅದೃಷ್ಟ ಪರೀಕ್ಷೆಗಾಗಿ ಸಿನಿಮಾ ನಟ-ನಟಿಯರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಲೇ ಇರುತ್ತಾರೆ. ಆ ಮೂಲಕವಾದರೂ, ಯಶಸ್ಸು ಕೈ ಹಿಡಿಯಲಿ ಎಂಬುದು ಅವರ ಉದ್ದೇಶವಾಗಿರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಹೆಸರಿನಲ್ಲಿ ಕೆಲವೊಂದು ಅಕ್ಷರಗಳನ್ನು ಕತ್ತರಿಸಿಕೊಂಡಿದ್ದಾರೆ. ಈ ಸಾಲಿಗೆ ಈಗ ಮನೋರಂಜನ್‌ ಕೂಡ ಸೇರಿಕೊಂಡಿದ್ದಾರೆ.

 

 

ಮನೋರಂಜನ್ ರವಿಚಂದ್ರನ್ ಹೆಸರು ‘ಮನುರಂಜನ್ ರವಿಚಂದ್ರನ್’ ಆಗಿ ಬದಲಾಗಿದೆ. “‘ದೊಡ್ಡ ಬದಲಾವಣೆ ಏನೂ ಇಲ್ಲ. ಅಂಥ ಕಾರಣವೂ ಇಲ್ಲ. ಸಂಖ್ಯಾಶಾಸ್ತ್ರದ ಹಿನ್ನೆಲೆಯಲ್ಲಷ್ಟೇ ಸಣ್ಣ ಬದಲಾವಣೆ ಮಾಡಿಕೊಳ್ಳಲಾಗಿದೆ. ಮನೋರಂಜನ್​ನ ‘ಒ’ ಇದ್ದಲ್ಲಿ ‘ಯು’ ಮಾಡಲಾಗಿದೆ. ‘ಮನೋ’ ಇದ್ದಿದ್ದು ‘ಮನು’ ಆಗಿದೆ ಅಷ್ಟೇ..” ಎಂದು ರವಿಚಂದ್ರನ್ ಪುತ್ರ ಹೇಳಿದ್ದಾರೆ.

‘ಹೆಸರು ಬದಲಾವಣೆಗೆ ಸಂಖ್ಯಾಶಾಸ್ತ್ರ ಬಿಟ್ಟರೆ ಬೇರೇನೂ ಕಾರಣವಿಲ್ಲ. ಇಂಗ್ಲಿಷ್‌ನಲ್ಲಿ’ಓ’ ಬದಲಾಗಿ ‘ಯು’ ಬರೆಯುತ್ತೇನೆ. ಪ್ರೀತಿಯಿಂದ ಎಲ್ಲರೂ ನನ್ನನ್ನು ಮನು ಅಂತಾನೇ ಕರೆಯುತ್ತಾರೆ. ಈ ಒಂದು ಕಾರಣವೂ ಹೆಸರು ಬದಲಾವಣೆ ಹಿಂದಿದೆ’ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top