fbpx
ಸಮಾಚಾರ

ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಪ್ರಶಸ್ತಿ ಗೆದ್ದ ಬೀದರ್ ಜಿಲ್ಲೆಯ ಕುಗ್ರಾಮದ ಬೆಡಗಿ!

ಗಡಿ ಜಿಲ್ಲೆಯ ಕುಗ್ರಾಮದ ಬೆಡಗಿ ನಿಶಾ ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌-2019 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಮಿಸ್ ಇಂಡಿಯಾ ಪ್ರಶಸ್ತಿ ಗೆದ್ದ ಜಿಲ್ಲೆಯ ಹಾಗೂ ರಾಜ್ಯದ ಏಕೈಕ ಹುಡುಗಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ದ್ವೀಪ ರಾಷ್ಟ್ರ ಇಂಡೋನೇಷ್ಯಾದ ಜಕಾರ್ತಾದಲ್ಲಿ “ಇಂಡಿಯನ್‌ ಫ್ಯಾಶನ್‌ ಫೆಸ್ಟ್‌’ ಸೋಮವಾರ ರಾತ್ರಿ “ಮಿಸ್‌ ಇಂಡಿಯಾ ಇಂಟರ್‌ನ್ಯಾಷನಲ್‌ ಸ್ಪರ್ಧೆ’ ಆಯೋಜಿಸಿತ್ತು. ವರ್ಣರಂಜಿತ ಗ್ಲಾಮರಸ್‌ ವೇದಿಕೆಯಲ್ಲಿ ಬಿಸಿಲೂರಿನ ಚೆಲುವೆ ನಿಶಾ ತಾಳಂಪಳ್ಳಿ ವಿನ್ನರ್‌ ಆಗಿ ಗೆಲುವಿನ ನಗೆ ಬೀರಿದ್ದಾರೆ. ಅಡಿಷನ್‌ಗೆ 9000 ಅರ್ಜಿಗಳು ಸ್ವೀಕಾರವಾಗಿದ್ದವು, ಈ ಪೈಕಿ ಕೇವಲ 30 ಯುವತಿಯರು ಫೈನಲ್‌ಗೆ ಆಯ್ಕೆಯಾಗಿದ್ದರು.. ಗ್ರ್ಯಾಂಡ್ ಫಿನಾಲೆಯಲ್ಲಿ ದೇಶದ ವಿವಿಧೆಡೆಗಳ 30 ಸುಂದರಿಯರು ಸ್ಪರ್ಧಾಳುಗಳಾಗಿದ್ದರು. ನಿಶಾ ಕರುನಾಡಿನಿಂದ ಸ್ಪರ್ಧಿಸಿದ್ದ ಏಕೈಕ ಚೆಲುವೆ.

ನಿಶಾ ಈ ಸ್ಪರ್ಧೆಗೆ ಆಯ್ಕೆಯಾಗಿದ್ದಾಗ ಬೀದರ್ ರಾಜ್ಯ ಹಾಗೂ ದೇಶದ ಜನ ಹೆಮ್ಮೆ ಪಟ್ಟಿದ್ದರು. ಆದರೆ ಈಗ ನಿಶಾ ಪ್ರಶಸ್ತಿ ಗೆದ್ದಿದ್ದು ರಾಜ್ಯದ ಜನತೆ ಖುಷಿಪಡುತ್ತಿದ್ದಾರೆ. ಸ್ಪರ್ಧೆಗೆ ಆಯ್ಕೆ ಆಗಿದ್ದಾಗ ನಿಶಾ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುವ ಮೂಲಕ ನನಗೆ ಸಪೋರ್ಟ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.

ಪ್ರಾಥಮಿಕ ಶಿಕ್ಷಣವನ್ನು ಹುಮನಾಬಾದ್‌ನ ಭಗತ್‌ಸಿಂಗ್‌ ಶಾಲೆಯಲ್ಲಿಪೂರೈಸಿ, ಬಸವಕಲ್ಯಾಣದ ಎಸ್‌ಬಿಆರ್‌ನಲ್ಲಿ8ನೇ ತರಗತಿ ಓದಿದ್ದಾರೆ. ಬಳಿಕ ಹುಮನಾಬಾದ್‌ನ ರವೀಂದ್ರನಾಥ ಟ್ಯಾಗೋರ್‌ ಪ್ರೌಢ ಶಾಲೆಯಲ್ಲಿ9 ಮತ್ತು 10ನೇ ತರಗತಿಯಲ್ಲಿಓದಿರುವ ನಿಶಾ ಅವರು, ಪಿಯುಸಿಯನ್ನು ಬೀದರ್‌ನ ಜ್ಞಾನಸುಧಾ ಕಾಲೇಜಿನಲ್ಲಿಮುಗಿಸಿದ್ದಾರೆ. ಬಿಎಸ್ಸಿ ಪದವಿಯನ್ನು ಹುಮನಾಬಾದ್‌ನ ಬಸವಸಾಗರ ಕಾಲೇಜಿನಿಂದ ಪಡೆದು, ಹೈದರಾಬಾದ್‌ನಲ್ಲಿಡಿಪ್ಲೋಮಾ ಇನ್‌ ಏವಿಯೇಶನ್‌ ಪದವಿ ಪಡೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top