fbpx
ಸಮಾಚಾರ

ವಾಹಸ ಸವಾರರ ಗಮನಕ್ಕೆ:ಡಿಸೆಂಬರ್ 1ರಿಂದ ನಿಮ್ಮ ವಾಹನಕ್ಕೆ ಫಾಸ್ಟ್‌ಟ್ಯಾಗ್‌ ಕಡ್ಡಾಯ

ಹೆದ್ದಾರಿಗಳಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೆ ಡಿಸೆಂಬರ್ 1 ರಿಂದ ಫಾಸ್ಟ್ ಟ್ಯಾಗ್ ಹೊಂದುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಲ್ಲಾ ರಾಜ್ಯಗಳ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಡಿಸೆಂಬರ್ 1ರಿಂದ ಬಳಕೆದಾರರ ಶುಲ್ಕವನ್ನು ಅಂದ್ರೇ ಟೋಲ್ ಫೀ ಫಾಸ್ಟ್ಯಾಗ್ ಮೂಲಕವೇ ಸಂಗ್ರಹಿಸುವುದನ್ನು ಕಡ್ಡಾಯಗೊಳಿಸಿದೆ. ಹೀಗಾಗಿ ಎಲ್ಲಾ ವಾಹನ ಸವಾರರು ಡಿಸೆಂಬರ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಫೀ ಯನ್ನು ಫಾಸ್ಟ್ಯಾಗ್ ಮೂಲಕವೇ ಸಂದಾಯ ಮಾಡಬೇಕಿದೆ.

ಫಾಸ್ಟ್‌ಟ್ಯಾಗ್‌ ಹೊಂದಿಲ್ಲದಿದ್ದರೆ ವಾಹನ ಮಾಲೀಕರು ಅಥವಾ ಚಾಲಕರು ಡಿಸೆಂಬರ್‌ 1ರಿಂದ ದುಪ್ಪಟ್ಟು ಟೋಲ್‌ ಶುಲ್ಕ ಪಾವತಿಸಬೇಕಾಗುತ್ತದೆ. ಎಲ್ಲ ಟೋಲ್‌ಗಳಲ್ಲಿ ಎಕೆಟ್ರಾನಿಕ್‌ ಮಾರ್ಗದಲ್ಲಿ ಟೋಲ್ ಸಂಗ್ರಹಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಏನಿದು ಫಾಸ್ಟ್ ಟ್ಯಾಗ್?
ಟೋಲ್ ಪ್ಲಾಜಾಗಳಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆ ತಡೆಗಟ್ಟಲು ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಸೌಲಭ್ಯವನ್ನು ಜಾರಿಗೆ ತಂದಿದೆ. ಫಾಸ್ಟ್ ಟ್ಯಾಗ್ ಪ್ರಿಪೇಯ್ಡ್ ಟ್ಯಾಗ್ ಸೌಲಭ್ಯವಾಗಿದ್ದು, ಟೋಲ್ ಶುಲ್ಕವನ್ನು ನಗದು ರಹಿತವಾಗಿ ಪಾವತಿಸಬಹುದಾಗಿದೆ.

ಶುಲ್ಕ ಪಾವತಿ ಹೇಗೆ?
ರೇಡಿಯೋ-ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್(ಆರ್ ಎಫ್‍ಐಡಿ) ಆಧಾರಿತ ಫಾಸ್ಟ್ ಟ್ಯಾಗನ್ನು ವಾಹನದ ಮುಂಭಾಗದ ಗ್ಲಾಸ್‍ಗೆ ಅಂಟಿಸಲಾಗಿರುತ್ತದೆ. ಈ ಟ್ಯಾಗ್ ರೇಡಿಯೋ ಫ್ರಿಕ್ವೆನ್ಸಿ ಮೂಲಕ ಸ್ಕ್ಯಾನ್ ಆಗಲಿದ್ದು, ನಂತರ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಯಿಂದ ಹಣ ಕಡಿತವಾಗಲಿದೆ. ಆದರೆ ಬ್ಯಾಂಕ್ ಖಾತೆಯಲ್ಲಿ ಮುಂಗಡ ಹಣವನ್ನು ಇಟ್ಟಿರಬೇಕಾಗುತ್ತದೆ.

ಫಾಸ್ಟ್‌ ಟ್ಯಾಗ್‌ ಪಡೆಯುವುದು ಹೇಗೆ?
ಫಾಸ್ಟ್ ಟ್ಯಾಗ್‍ನ ಬೆಲೆ 100 ರೂಪಾಯಿ. ಖರೀದಿಸುವಾಗ ಮೊದಲಿಗೆ 150-200 ರೂ. ಭದ್ರತಾ ಶುಲ್ಕ ಪಾವತಿಸಬೇಕು. ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಕನಿಷ್ಠ 100 ರೂಪಾಯಿ ಇರಬೇಕು. ಈ ಫಾಸ್ಟ್ ಟ್ಯಾಗ್ ಮೂಲಕವೇ ಹೆದ್ದಾರಿ ಬಳಕೆದಾರರ ಶುಲ್ಕ ಪಾವತಿಯಾಗುತ್ತದೆ. ಪ್ರತಿ ಬಾರಿ ಪಾವತಿ ಮಾಡಿದಾಗ ಶೇ.2.5ರಷ್ಟು ಕ್ಯಾಶ್ ಬ್ಯಾಕ್ ದೊರೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top