fbpx
ಸಮಾಚಾರ

ಗಂಗೂಲಿ ಹೊಗಳಿದ ಕೊಹ್ಲಿ ವಿರುದ್ಧ ಗವಾಸ್ಕರ್ ಕೆಂಡಾಮಂಡಲ!

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಹೊಗಳಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ಹೊರಹಾಕಿದ್ದಾರೆ. ಮಾಜಿ ನಾಯಕ ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗೆಲುವಿನ ಅಭಿಯಾನ ಆರಂಭಗೊಂಡಿತ್ತು ಎಂಬ ನಾಯಕ ವಿರಾಟ್ ಕೊಹ್ಲಿ ಹೇಳಿಕೆಗೆ ಮಾಜಿ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಟಾಂಗ್ ನೀಡಿದ್ದಾರೆ.

ತಂಡದ ಗೆಲುವಿನ ನಂತರ ಮಾತನಾಡಿದ್ದ ವಿರಾಟ್ ಕೊಹ್ಲಿ ಅವರು, ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಗೆಲುವಿನ ಸಂಸ್ಕೃತಿಯನ್ನು ಹುಟ್ಟುಹಾಕಿದ್ದು ಅದನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದರು.

ಕೊಹ್ಲಿ ಅವರ ಈ ಹೇಳಿಕೆಗೆ ಕೆಂಡಾಮಂಡಲವಾಗಿರುವ ಮಾಜಿ ಆಟಗಾರ ಸುನಿಲ್ ಗವಾಸ್ಕಾರ್, ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದು ಬಹಳ ಸಂತೋಷವಾಗಿದೆ. ಆದರೆ ವಿರಾಟ್ ಕೊಹ್ಲಿ ಅವರು ಭಾರತ, 1970 ಮತ್ತು 1980 ರ ಸಮಯದಲ್ಲಿಯೂ ಗೆಲುವು ಸಾಧಿಸಿತ್ತು ಎಂಬುದನ್ನು ಮರೆತಿದ್ದಾರೆ. ಆ ಸಮಯದಲ್ಲಿ ಕೊಹ್ಲಿ ಹುಟ್ಟಿರಲಿಲ್ಲ ಎಂದು ಕಿಡಿಕಾರಿದ್ದಾರೆ.

‘ಸಾಕಷ್ಟು ಜನರು 2000ದ ಇಸವಿಯಿಂದ ಕ್ರಿಕೆಟ್ ಆರಂಭವಾಗಿದೆ ಅಂದುಕೊಂಡಿದ್ದಾರೆ. ಆದ್ರೆ 70ರ ದಶಕದಲ್ಲೂ ವಿದೇಶದ ನೆಲದಲ್ಲಿ ಭಾರತ ಜಯ ಸಾಧಿಸಿತ್ತು. ಭಾರತ ಈ ಬಲಿಷ್ಠ ವೆಸ್ಟ್ ಇಂಡೀಸ್ ವಿರುದ್ಧ ವಿಶ್ವಕಪ್ ಗೆದ್ದಿತ್ತು. . ವಿದೇಶಗಳಲ್ಲೂ ಟೀಂ ಇಂಡಿಯಾ ಸರಣಿ ಗೆದ್ದು ಕೊಂಡಿತ್ತು. ಬೇರೆ ತಂಡಗಳಂತೆ ಕೆಲವು ಪಂದ್ಯದಲ್ಲಿ ಸೋಲುನುಭವಿಸಿತ್ತು’’ ಎಂದು ನೆನಪಿಸಿ ಅಸಮಾಧಾನ ಹೊರಹಾಕಿದ್ದಾರೆ.

“ಸೌರವ್ ಗಂಗೂಲಿ ಈಗ ಬಿಸಿಸಿಐ ಐಧ್ಯಕ್ಷರಾಗಿರುವುದರಿಂದ ಅವರ ಬಗ್ಗೆ ಒಳ್ಳೆಯ ಮಾತನಾಡುವ ಅನಿವಾರ್ಯತೆ ಕೊಹ್ಲಿಗಿದೆ. ಆದರೆ 70 ಹಾಗೂ 80ರ ದಶಕದಲ್ಲೂ ಬಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿತ್ತು ” ಈ ವಿಚಾರವನ್ನು ಕೊಹ್ಲಿ ಮರೆಯಬಾರದು ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top