fbpx
ಸಮಾಚಾರ

ನವೆಂಬರ್ 26: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಮಂಗಳವಾರ, ನವೆಂಬರ್ 26 2019
ಸೂರ್ಯೋದಯ : 6:23 am
ಸೂರ್ಯಾಸ್ತ: 5:50 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಕಾರ್ತೀಕ
ಪಕ್ಷ :ಕೃಷ್ಣಪಕ್ಷ
ತಿಥಿ :ಅಮಾವಾಸ್ಯೆ
ನಕ್ಷತ್ರ: ವಿಶಾಖ 09:23
ಯೋಗ: ಅತಿಗಂಡ 20:52
ಕರಣ: ಚತುಷ್ಪಾದ 09:34 ನಾಗ 20:35

ಅಭಿಜಿತ್ ಮುಹುರ್ತ: 11:44 am – 12:29 pm
ಅಮೃತಕಾಲ :10:19 pm – 11:50 pm

ರಾಹುಕಾಲ-2:56 pm – 4:21 pm
ಯಮಗಂಡ ಕಾಲ- 9:16 am – 10:41 am
ಗುಳಿಕ ಕಾಲ- 12:06 pm – 1:31 pm

 

 

ಸಂಬಂಧಿಗಳ ಬಳಿ ಹಳೆ ವಿಚಾರಗಳನ್ನು ಕೆದಕಬೇಡಿ. ಕೆದಕಿದರೆ ಉತ್ತಮ ಬಾಂಧವ್ಯ ಮುರಿದು ಬೀಳುತ್ತದೆ. ಹಳೆ ಭಿನ್ನಾಭಿಪ್ರಾಯ ಉತ್ತಮ ಮಾತುಕತೆಯಿಂದ ಕೊನೆಗೊಳ್ಳಲಿದೆ. ಜೀವನದಲ್ಲಿ ಹರ್ಷ ಸಿಗುವುದು.

ನಿಮ್ಮನ್ನು ಪ್ರಶಂಸಿಸುವ ಪಾರದರ್ಶಕ ವ್ಯಕ್ತಿತ್ವವುಳ್ಳ ಜನರು ನಿಮ್ಮ ಇಚ್ಛಾಶಕ್ತಿಯನ್ನು ಹೆಚ್ಚಿಸಿ ಸಂತೋಷಕ್ಕೆ ಉಂಟು ಮಾಡುವರು. ಶುಭ ಸಮಾರಂಭದಲ್ಲಿ ಭಾಗವಹಿಸುವಿರಿ. ಹೆತ್ತವರ ಜೊತೆ ಸಮಯ ಕಳೆಯುವಿರಿ.

ಬದಲಾವಣೆ ಬಯಸಿ ಬಯಸಿ ನಿರಾಶರಾಗಿದ್ದ ನಿಮಗೆ ಹೊಸ ಬೆಳಕು ಗೋಚರಿಸಲಿದೆ. ಇದು ನಿಮ್ಮ ಮನೋಕಾಮನೆ ಪೂರ್ತಿಗೊಳಿಸಲು ಸಹಕಾರಿಯಾಗುವುದು. ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿಂದ ಇರಿ.

ಮುಖ್ಯವಾಗಿ ಆಲಸ್ಯದಿಂದ ಹೊರಬರಬೇಕು. ಮೈ ಕೊಡವಿ ಎದ್ದರೆ ನಿಮಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಗಟ್ಟಿ ನಿರ್ಧಾರ ಮಾಡಿ ಮುಂದಡಿ ಇಡಿರಿ. ನಿಮ್ಮನ್ನು ಹುಡುಕಿ ಬರುವ ಸ್ಥಾನಮಾನಗಳನ್ನು ತಿರಸ್ಕರಿಸದಿರಿ.

 

ಸಾಮಾಜಿಕವಾಗಿ ಯಾವುದೇ ಬದ್ಧತೆಗಳಿಗೆ ಈಡಾಗಬೇಡಿ. ಆರ್ಥಿಕ ವಿಚಾರಗಳಲ್ಲಿಯೂ ಯಾರಿಗೂ ಭರವಸೆ ನೀಡಬೇಡಿ. ನಿಮ್ಮ ಸಾಧನೆಯನ್ನು ಕುಟುಂಬಸ್ಥರು, ಬಂಧುಗಳು ಕೊಂಡಾಡುವರು. ವೃತ್ತಿಯಲ್ಲಿ ನೆಮ್ಮದಿಯ ದಿನ.

 

ಕೆಲಸದ ವಿಚಾರದಲ್ಲಿ ದೈಹಿಕ ಮತ್ತು ಮಾನಸಿಕ ಒತ್ತಡ ಕಾಡುವುದು. ಅಂದರೆ ಅನಗತ್ಯ ತಿರುಗಾಟಗಳು ಕಾದಿವೆ. ಕೆಲವರ ಆರೋಗ್ಯದಲ್ಲಿ ವ್ಯತ್ಯಯ ತೋರುವ ಸಾಧ್ಯತೆ. ಹಣವು ನೀರಿನಂತೆ ಖರ್ಚಾಗುವುದು.

 

ಹಣವಿದ್ದಲ್ಲಿ ಸಕಲರು ಆದರಿಸುವರು. ಈದಿನ ವಿವಿಧ ಮೂಲಗಳಿಂದ ಹಣ ಹರಿದು ಬರುವುದು. ಸಂಗಾತಿಯೊಂದಿಗಿನ ಶಾಪಿಂಗ್‌ ಖುಷಿ ನೀಡುವುದು. ಮಹತ್ತರ ನಿರ್ಧಾರಗಳನ್ನು ಮುಂದೂಡಲು ಹೋಗಬೇಡಿ.

 

ಖುಷಿಯಿಂದ ಕೂಡಿರುವ ದಿನ. ಅನಿರೀಕ್ಷಿತವಾಗಿ ದೂರ ಪ್ರಯಾಣ ಕೂಡಿ ಬರುವುದು. ಹೊಸ ಜವಾಬ್ದಾರಿಗಳು ಬಂದರೆ ಅದನ್ನು ಸ್ವೀಕರಿಸಿರಿ. ಮುಂದಿನ ದಿನಗಳಲ್ಲಿ ಒಳಿತಾಗುವುದು. ಸಾಲ ಪಡೆದಿದ್ದಲ್ಲಿ ಅದನ್ನು ತೀರಿಸುವ ಪ್ರಯತ್ನ ಮಾಡಿರಿ.

 

ಕೆಲವರು ಹಣ ಕೂಡಿಡುವುದರಲ್ಲಿ ನಿಸ್ಸೀಮರು. ದೀರ್ಘಕಾಲಿನ ಹೂಡಿಕೆಗಳ ಬಗ್ಗೆ ಆಸಕ್ತಿ ಹೊಂದಿ ಕಾರ್ಯೋನ್ಮುಖರಾಗುವಿರಿ. ಹಣಕಾಸಿನ ವ್ಯವಹಾರ ತಲೆನೋವು ಉಂಟು ಮಾಡುವುದಾದರೂ ಸಂಗಾತಿಯ ಸಲಹೆಯಿಂದ ಬೇಗ ವಾಸಿಯಾಗುವುದು.

ಸಣ್ಣ ಪುಟ್ಟ ಅಡೆತಡೆಗಳ ಬಗ್ಗೆ ಗಮನ ಕೊಡದೇ ಆತ್ಮವಿಶ್ವಾಸದಿಂದ ಮುಂದಡಿ ಇಡಿ. ನಿಮ್ಮಲ್ಲಿ ಅಡಗಿರುವ ಶಕ್ತಿ ಏನು ಎನ್ನುವುದು ಸ್ವತಃ ನಿಮ್ಮ ಅರಿವಿಗೆ ಬರುವುದು. ಇದರಿಂದ ನಿಮ್ಮ ಬಗ್ಗೆಯೇ ನಿಮಗೆ ಹೆಮ್ಮೆ ಎನಿಸುವುದು.

 

ಅಧ್ಯಾತ್ಮಿಕ ವಿಷಯಗಳ ಕಡೆಗೆ ಒಲವು ತೋರುವಿರಿ. ಜೀವನದಲ್ಲಿ ಯಶಸ್ಸು ಗಳಿಸಲು ಸಹನೆ, ತಾಳ್ಮೆ ಮುಖ್ಯ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ಸಲ್ಲದ ವಿಷಯಗಳ ಬಗ್ಗೆ ಅನಗತ್ಯ ಕುತೂಹಲ ತೋರಿಸುವುದು ಒಳ್ಳೆಯದಲ್ಲ

 

ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಎದುರಾಗುವುದು. ನಿಮ್ಮ ನಾಯಕತ್ವ ಗುಣಕ್ಕೆ ಮನ್ನಣೆ ದೊರೆಯುವುದು. ಸಂಬಂಧಗಳಲ್ಲಿಯೂ ಗಣನೀಯ ಸುಧಾರಣೆ ಕಂಡುಬರುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top