fbpx
ಸಮಾಚಾರ

ರಾಜ್ಯ ಸರ್ಕಾರದಿಂದ 2020 ಸಾಲಿನ ಸಾರ್ವಜನಿಕ ರಜಾದಿನಗಳ ಪಟ್ಟಿ ಬಿಡುಗಡೆ

ರಾಜ್ಯ ಸರ್ಕಾರ 2020ನೇ ಸಾಲಿನ ಸರ್ಕಾರಿ ರಜಾ ದಿನಗಳನ್ನು ಘೋಷಣೆ ಮಾಡಿದ್ದು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಎರಡನೇ ಹಾಗೂ ನಾಲ್ಕನೇ ಶನಿವಾರ ಹಾಗೂ ಭಾನುವಾರಗಳನ್ನು ಹೊರತುಪಡಿಸಿ 18 ಸಾರ್ವತ್ರಿಕ ರಜಾ ದಿನಗಳು ಹಾಗೂ 21 ಪರಿಮಿತ ರಜಾ ದಿನಗಳನ್ನು ಘೋಷಣೆ ಮಾಡಲಾಗಿದೆ. ಕೆಲವು ಸಾರ್ವತ್ರಿಕ ರಜಾ ದಿನಗಳು ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ಬರುವುದರಿಂದ ಪ್ರತ್ಯೇಕ ಸರ್ಕಾರಿ ರಜೆ ದಿನ ಪರಿಗಣನೆ ಮಾಡಲಾಗಿಲ್ಲ.

ಕರ್ನಾಟಕದ ರಜಾದಿನಗಳ ಪಟ್ಟಿ ಇಲ್ಲಿದೆ:
ಜನವರಿ 15 (ಬುಧವಾರ) – ಮಕರ ಸಂಕ್ರಾಂತಿ
ಫೆಬ್ರವರಿ 21 (ಶುಕ್ರವಾರ) – ಶಿವರಾತ್ರಿ
ಮಾರ್ಚ್ 21 (ಬುಧವಾರ) – ಯುಗಾದಿ
ಏಪ್ರಿಲ್ 6 (ಸೋಮವಾರ) – ಮಹಾವೀರ ಜಯಂತಿ

ಏಪ್ರಿಲ್ 10 (ಶುಕ್ರವಾರ) – ಶುಭ ಶುಕ್ರವಾರ (ಗುಡ್ ಫ್ರೈಡೆ)
ಏಪ್ರಿಲ್ 14 (ಮಂಗಳವಾರ) – ಅಂಬೇಡ್ಕರ್ ಜಯಂತಿ
ಮೇ 1 (ಶುಕ್ರವಾರ) – ಮೇ ದಿನ
ಮೇ 25 (ಸೋಮವಾರ) – ಖುತ್ಬಾ-ಎ-ರಂಜಾನ್

ಆಗಸ್ಟ್ 1 (ಶನಿವಾರ) – ಬಕ್ರೀದ್
ಆಗಸ್ಟ್ 15 (ಶನಿವಾರ) – ಸ್ವಾತಂತ್ರ್ಯ ದಿನ
ಸೆಪ್ಟೆಂಬರ್ 15 (ಗುರುವಾರ) – ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 2 (ಶುಕ್ರವಾರ) – ಗಾಂಧಿ ಜಯಂತಿ
ಅಕ್ಟೋಬರ್ 26 (ಸೋಮವಾರ) – ವಿಜಯದಶಮಿ

ಅಕ್ಟೋಬರ್ 30 (ಶುಕ್ರವಾರ) – ಈದ್ ಮಿಲಾದ್
ಅಕ್ಟೋಬರ್ 31 (ಶನಿವಾರ) – ವಾಲ್ಮೀಕಿ ಜಯಂತಿ
ನವೆಂಬರ್ 16 (ಸೋಮವಾರ) – ದೀಪಾವಳಿ
ಡಿಸೆಂಬರ್ 3 (ಗುರುವಾರ) – ಕನಕದಾಸ ಜಯಂತಿ
ಡಿಸೆಂಬರ್ 25 (ಶುಕ್ರವಾರ) – ಕ್ರಿಸ್‌ಮಸ್

ಇನ್ನು ಗಣರಾಜ್ಯೋತ್ಸವ (ಜನವರಿ 26), ಬಸವ ಜಯಂತಿ (ಏಪ್ರಿಲ್ 26), ಮೊಹರಂ (ಆಗಸ್ಟ್ 8), ಮಹಾನವಮಿ, ಆಯುಧ ಪೂಜೆ (ಅಕ್ಟೋಬರ್ 26) ಮತ್ತು ಕನ್ನಡ ರಾಜ್ಯೋತ್ಸವ (ನವೆಂಬರ್ 1) ಗಳು ಭಾನುವಾರದಂದು ಇರಲಿದೆ. ನರಕ ಚತುರ್ದಶಿ (ನವೆಂಬರ್ 14) ಎರಡನೇ ಶನಿವಾರ ಬಂದರೆ ಗಣೇಶ್ ಚತುರ್ಥಿ (ಆಗಸ್ಟ್ 22). ನಾಲ್ಕನೇ ಶನಿವಾರದಂದು ಬರಲಿದೆ.

ಕೈಲ್ ಮುಹೂರ್ತ (ಸೆಪ್ಟೆಂಬರ್ 3), ತುಲಾ ಸಂಕ್ರಮಣ (ಅಕ್ಟೋಬರ್ 17) ಮತ್ತು ಹುತ್ತರಿ (ಡಿಸೆಂಬರ್ 1) ಗೆ ಕೊಡಗು ಜಿಲ್ಲೆಗೆ ಕರ್ನಾಟಕ ಸರ್ಕಾರ ಸ್ಥಳೀಯ ರಜಾದಿನವನ್ನು ಘೋಷಿಸಿದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತ್ಯೇಕವಾಗಿ ರಜಾ ದಿನಗಳನ್ನು ಘೋಷಣೆ ಮಾಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top