fbpx
ಸಮಾಚಾರ

2019-20ನೇ ಸಾಲಿನ ಎಸ್​ಎಸ್​​ಎಲ್​ಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್​ಎಸ್​ಎಲ್​ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾರ್ಚ್, ಏಪ್ರಿಲ್​ ತಿಂಗಳುಗಳಲ್ಲಿ ಪರೀಕ್ಷೆ ನಡೆಯಲಿದ್ದು 2020ರ ಮಾರ್ಚ್​ 27 ರಿಂದ ಪರೀಕ್ಷೆ ಆರಂಭವಾಗಲಿದೆ. ಏಪ್ರಿಲ್ 9 ಪರೀಕ್ಷೆ ನಡೆಯುವ ಕೊನೆಯ ದಿನವಾಗಿರಲಿದೆ..

2020ರ ಮಾರ್ಚ್ 27ರಿಂದ ಏಪ್ರಿಲ್ 9ರವರೆಗೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30/45ರವರೆಗೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 5.15ರವರೆಗೆ ಪರೀಕ್ಷೆಗಳು ನಡೆಯಲಿವೆ. ಈ ಸಂಬಂಧ ಅಧಿಕೃತ ವೇಳಾಪಟ್ಟಿಯನ್ನು ಮಂಡಳಿ ತನ್ನ ಅಧಿಕೃತ ವೆಬ್ ಸೈಟ್‌ನಲ್ಲಿ ಪ್ರಕಟಿಸಿದೆ.

ಪರೀಕ್ಷೆ ವೇಳಾಪಟ್ಟಿ ಹೀಗಿದೆ:
1. ಮಾರ್ಚ್​ 27– (ಪ್ರಥ,ಮ ಭಾಷೆ)
ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ

2. ಮಾರ್ಚ್ 30 – (ಕೋರ್ ಸಬ್ಜೆಕ್ಟ್​)
ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ

3. ಏಪ್ರಿಲ್ 01 – (ದ್ವಿತೀಯ ಭಾಷೆ)
ಇಂಗ್ಲಿಷ್, ಕನ್ನಡ

4. ಏಪ್ರಿಲ್​ 03 – (ತೃತ್ತೀಯ ಭಾಷೆ ಹಿಂದಿ, )
ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು

5. ಏಪ್ರಿಲ್​ 04 ​ – (ಕೋರ್ ಸಬ್ಜೆಕ್ಟ್)
ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2, ಇಂಜಿನಿಯರಿಂಗ್ ಗ್ರಾಫಿಕ್ಸ್​-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್​ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ

6. ಏಪ್ರಿಲ್​ 07- (ಕೋರ್ ಸಬ್ಜೆಕ್ಟ್)
ಗಣಿತ, ಸಮಾಜಶಾಸ್ತ್ರ

7. ಏಪ್ರಿಲ್​ 09- (ಕೋರ್ ಸಬ್ಜೆಕ್ಟ್)
ಸಮಾಜ ವಿಜ್ಞಾನ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top