fbpx
ಸಮಾಚಾರ

ಕಿರಿಯರ ವಿಶ್ವಕಪ್: ಭಾರತ ತಂಡದಲ್ಲಿ ಸ್ಥಾನ ಪಡೆದ ಇಬ್ಬರು ಕರ್ನಾಟಕದ ಪ್ರತಿಭೆಗಳು

ಮುಂದಿನ ವರ್ಷ ನಡೆಯಲಿರುವ ಕಿರಿಯರ ಕ್ರಿಕೆಟ್ ವಿಶ್ವಕಪ್​ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಉತ್ತರ ಪ್ರದೇಶದ ಅನುಭವಿ ಆಟಗಾರ ಪ್ರಿಯಂ ಗರ್ಗ್ ನಾಯಕತ್ವದ 15 ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದೆ. ಜನವರಿ 17ರಿಂದ ಫೆಬ್ರವರಿ 9ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ಈ ವಿಶ್ವಕಪ್ ನಡೆಯಲಿದೆ. ವಿಶ್ವಕಪ್​ಗೂ ಮುನ್ನ ಅಭ್ಯಾಸಕ್ಕೆಂದು ದಕ್ಷಿಣ ಆಫ್ರಿಕಾದಲ್ಲಿ ಒಂದೆರಡು ಸರಣಿಗಳನ್ನು ಭಾರತ ತಂಡ ಆಡಲಿದೆ.

 

 

ಬಿಸಿಸಿಐ ಪ್ರಕಟಿಸಿರುವ 15 ಜನರ ತಂಡದಲ್ಲಿ ಕರ್ನಾಟಕದಿಂದ ಇಬ್ಬರು ಆಯ್ಕೆಯಾಗಿದ್ದಾರೆ. ವಿದ್ಯಾಧರ್ ಪಾಟೀಲ್ ಶುಭಾಂಗ್ ಹೆಗ್ಡೆ ಕರ್ನಾಟಕದಿಂದ ಟೀಮ್ ಇಂಡಿಯಾವನ್ನು ಪ್ರತಿನಿಧಿಸುತ್ತಿರುವ ಆಟಗಾರರಾಗಿದ್ದಾರೆ. ರಾಯಚೂರು ತಾಲೂಕಿನ ಯರಮರಸ್ ಕ್ಯಾಂಪ್‍ನ ನಿವೃತ್ತ ಕೃಷಿ ಇಲಾಖೆ ಅಧಿಕಾರಿ ಸೋಮಶೇಖರ್ ಪಾಟೀಲ್ ಹಾಗೂ ಕವಿತಾ ದಂಪತಿಗಳ ಪುತ್ರ ವಿದ್ಯಾಧರ್ ಪಾಟೀಲ್ ವಿಶ್ವಕಪ್ ಗೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 2019ರ ಕೆಪಿಎಲ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್‌ ತಂಡದಲ್ಲಿ ವಿದ್ಯಾಧರ್‌ ಉತ್ತಮ ಪ್ರದರ್ಶನ ತೋರಿದ್ದರು.

ವಿಶ್ವಕಪ್‍ಗೆ ಕರ್ನಾಟಕದಿಂದ ಮತ್ತೊಬ್ಬ ಆಟಗಾರ ಶುಭಾಂಗ್ ಹೆಗ್ಡೆ ಸಹ ಆಯ್ಕೆಯಾಗಿದ್ದಾರೆ. ಉದಯೋನ್ಮುಖ ಆಟಗಾರ ಶುಭಾಂಗ್‌ ಹೆಗ್ಡೆ, ಮೂಲತಃ ಮಂಗಳೂರಿನವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕರ್ನಾಟಕ ಇನ್ಸಿಟ್ಯೂಟ್ ಆಫ್‌ ಕ್ರಿಕೆಟ್‌ (ಕೆಐಒಸಿ) ಕ್ರಿಕೆಟ್‌ ಅಕಾಡೆಮಿಯಲ್ಲಿ ಕಳೆದ 6 ವರ್ಷಗಳಿಂದ ಆಡುತ್ತಿದ್ದಾರೆ. ಅಪ್ಪ ಸಮರ್ಥ್ ಹೆಗಡೆ ಕೋಚ್‌ ಆಗಿದ್ದು, ಅವರ ಗರಡಿಯಲ್ಲಿ ಕ್ರಿಕೆಟ್‌ ಆಟದ ಮಜಲುಗಳನ್ನು ಕಲಿತಿದ್ದಾರೆ.

ಅಂಡರ್ 19 ವಿಶ್ವಕಪ್‌ಗೆ ಭಾರತ ತಂಡ:
ಪ್ರಿಯಾಮ್ ಗರ್ಗ್ (ನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ದಿವ್ಯಾಂಶ್ ಸಕ್ಸೇನಾ, ಧ್ರುವ್ ಚಂದ್ ಜೂರೆಲ್ (ಉಪನಾಯಕ ಮತ್ತು ವಿಕೆ), ಶಾಶ್ವತ್ ರಾವತ್, ದಿವ್ಯಾಂಶ್ ಜೋಶಿ, ಶುಭಾಂಗ್ ಹೆಗ್ಡೆ, ರವಿ ಬಿಷ್ಣೋಯ್, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲೆಕರ್ (ವಿಕೆ), ಸುಶಾಂತ್ ಮಿಶ್ರಾ, ವಿದ್ಯಾಧರ್ ಪಾಟೀಲ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top