fbpx
ಸಮಾಚಾರ

ಡಿಸೆಂಬರ್ 09: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಶನಿವಾರ, ಡಿಸೆಂಬರ್ 09 2019
ಸೂರ್ಯೋದಯ : 6:28 am
ಸೂರ್ಯಾಸ್ತ: 5:53 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಮಾರ್ಗಶಿರ
ಪಕ್ಷ : ಶುಕ್ಲಪಕ್ಷ
ತಿಥಿ : ದ್ವಾದಶೀ 09:53
ನಕ್ಷತ್ರ:ಭರಣಿ 29:01
ಯೋಗ:ಪರಿಘ 17:05
ಕರಣ: ಬಾಲವ 09:53 ಕುಲವ 22:23

ಅಭಿಜಿತ್ ಮುಹುರ್ತ: 11:49 am – 12:34 pm
ಅಮೃತಕಾಲ : 11:55 pm – 1:37 am

ರಾಹುಕಾಲ- 7:58 am – 9:22 am
ಯಮಗಂಡ ಕಾಲ- 10:47 am – 12:11 pm
ಗುಳಿಕ ಕಾಲ- 1:36 pm – 3:00 pm

 

 

ಯಾರೊಂದಿಗೂ ವಾದ ವಿವಾದಕ್ಕೆ ಮುಂದಾಗಬೇಡಿ. ಉದ್ವೇಗದಲ್ಲಿ ಬಾಯಿತಪ್ಪಿ ಆಡುವ ಸಣ್ಣಮಾತೇ ದೊಡ್ಡ ಜಗಳಕ್ಕೆ ನಾಂದಿ ಹಾಡುವ ಅಪಾಯವಿದೆ. ಸಣ್ಣಪುಟ್ಟ ನಿರಾಶೆ ಕಾಡಬಹುದು. ಆಂಜನೇಯ ಸ್ತೋತ್ರವನ್ನು ಪಠಿಸಿರಿ.

ಅದಷ್ಟ ನಿಮ್ಮ ಹಿಂದೆಯೇ ಇದೆ. ಕೊಂಚ ಪರಿಶ್ರಮ ಪಟ್ಟರೆ, ತುಸು ಯೋಚಿಸಿ ಮುಂದಡಿ ಇಟ್ಟರೆ ಸುಂದರ ಭವಿಷ್ಯ ರೂಪಿಸಿಕೊಳ್ಳುವ ಎಲ್ಲಾ ಅವಕಾಶಗಳು ನಿಮ್ಮೆದುರು ಇವೆ. ಒಮ್ಮೆ ನಿರ್ಧಾರ ಕೈಗೊಂಡ ಮೇಲೆ ಹಿಂದೆಮುಂದೆ ಯೋಚಿಸಬೇಡಿರಿ.

ಕೆಲಸದ ಒತ್ತಡಗಳಲ್ಲಿ ಸಿಟ್ಟಿನಿಂದ ಮಾತನಾಡುವಿರಿ. ಇದರಿಂದ ನಿಮ್ಮ ಸುತ್ತಮುತ್ತಲಿನ ವಾತಾವರಣ ಕೆಟ್ಟುಹೋಗುವುದು. ಆದಷ್ಟು ತಾಳ್ಮೆಯಿದ್ದರೆ ಒಳ್ಳೆಯದು. ತಾಳಿದವನು ಬಾಳಿಯಾನು ಎಂಬುದನ್ನು ಮರೆಯದಿರಿ.

ಇದ್ದಕ್ಕಿದ್ದಂತೆ ಭೂತಕಾಲಕ್ಕೆ ಜಾರಿಬಿಡುವಿರಿ. ಹಿಂದಿನ ನಿರ್ಧಾರಗಳ ಪರಾಮರ್ಶೆ ಮಾಡಿಕೊಳ್ಳುವಿರಿ. ತಪ್ಪು ನಿರ್ಧಾರಗಳ ಬಗ್ಗೆ ಕೊರಗುತ್ತ ಕೂಡುವ ಸಮಯವಲ್ಲ. ಸಮಯವನ್ನು ವ್ಯರ್ಥ ಮಾಡದೆ ಮುಂದಿನ ನಡೆ ಬಗ್ಗೆ ಗಮನ ಕೊಡುವುದು ಒಳ್ಳೆಯದು.

 

ನಿಮ್ಮ ಮೇಲೆ ಅತಿಯಾದ ವಿಶ್ವಾಸವಿಟ್ಟು ನಂಬಿದವರಿಗೆ ದ್ರೋಹ ಬಗೆಯುವುದು ತರವಲ್ಲ. ವೈಯಕ್ತಿಕ ಕೆಲಸಗಳಿಗೆ ಮತ್ತೊಬ್ಬರನ್ನು ಆಶ್ರಯಿಸುವುದು ಸೂಕ್ತವಲ್ಲ. ಗುರು-ಹಿರಿಯರ ಆಶೀರ್ವಾದ ಪಡೆದು ಸ್ವತಂತ್ರ ನಿರ್ಧಾರ ತಳೆಯಿರಿ.

 

ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಲು ಹರಸಾಹಸ ಮಾಡುವಿರಿ. ಆದಾಯದ ಹೆಚ್ಚಳಕ್ಕೆ ದಾರಿ ಕಾಣಲಿದೆ. ಮಾನಸಿಕ ತೊಳಲಾಟ ನಿಮ್ಮ ಆತ್ಮವಿಶ್ವಾಸವನ್ನು ಕುಂದಿಸುವ ಸಾಧ್ಯತೆ ಇದೆ. ಸಜ್ಜನರ ಸಹವಾಸ ಮಾಡಿರಿ.

 

ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಸಂಪೂರ್ಣ ವಿಶ್ವಾಸವಿರಲಿ. ಅಡ್ಡಿ ಆತಂಕಗಳು ಎದುರಾದರೂ ಅವು ತಾತ್ಕಾಲಿಕ ಎಂಬುದನ್ನು ಮರೆಯದಿರಿ. ಮಾಡುವ ಕೆಲಸಗಳ ಬಗ್ಗೆ ವಿಶೇಷ ಗಮನವಿಟ್ಟಲ್ಲಿ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿಯಾಗುವುದು.

 

ಮಾನಸಿಕ ನೆಮ್ಮದಿಯನ್ನು ಅರಸುತ್ತಾ ಹೋಗುವುದು ಮೂರ್ಖತನವಾಗುತ್ತದೆ. ಅದು ನಿಮ್ಮಲ್ಲೇ ಇದ್ದು ಅಂತರ್‌ಮುಖಿಯಾಗಿ ಶೋಧಿಸಿ ಆತ್ಮಸಾಕ್ಷಾತ್ಕಾರದ ಮಜಲುಗಳನ್ನು ಕಾಣುವಿರಿ. ಗುರುಹಿರಿಯರನ್ನು ಗೌರವಿಸಿರಿ.

 

ಆರೋಗ್ಯ ಉತ್ತಮ. ಮುಂಬರುವ ದಿನಗಳಲ್ಲಿ ಆತ್ಮೀಯರೊಬ್ಬರನ್ನು ಭೇಟಿಯಾಗುವ ಸಾಧ್ಯತೆ. ನಿಮ್ಮ ಸಾಧನೆಗಳನ್ನು ಪಟ್ಟಿ ಮಾಡಿ ನಿಮ್ಮನ್ನು ಸಂತೋಷ ಪಡಿಸುವ ಶಿಷ್ಯಮಂಡಳಿ ಹೆಚ್ಚಾಗುವುದು. ಸಾಮಾಜಿಕ ಮನ್ನಣೆ ದೊರೆಯುವುದು.

ಹಳೆ ತಪ್ಪುಗಳನ್ನು ಪುನರಾವರ್ತಿಸದೆ ಮುಂದಡಿ ಇಡಿ. ನಿಮ್ಮ ಬಂಧುಗಳು ಸ್ನೇಹಿತರು ನಿಮ್ಮ ಕೆಲಸ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲುವರು. ಹಮ್ಮಿಕೊಂಡ ಕಾರ್ಯಗಳಿಗೆ ವಿವಿಧ ಮೂಲಗಳಿಂದ ಹಣ ಹರಿದು ಬರುವುದು.

 

 

ನಿಮ್ಮ ಆತ್ಮವಿಶ್ವಾಸ ದಿಢೀರ್ ಹೆಚ್ಚಾಗುವುದು. ಬಹುದಿನಗಳಿಂದ ಇತ್ಯರ್ಥವಾಗದೇ ಉಳಿದಿದ್ದ ಸಂಗತಿಗಳು ಬಗೆಹರಿಯುವುದು. ಮನೆಯಲ್ಲಿ ಮತ್ತು ಕಚೇರಿಯಲ್ಲೂ ಉತ್ತಮ ಸಮಯವನ್ನು ಕಳೆಯುವಿರಿ. ಸಮಯಕ್ಕೆ ತಕ್ಕ ಸಲಹೆಗಳು ದೊರೆಯುವವು.

ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಲು ಈದಿನ ಕಟಿಬದ್ಧರಾಗಿರುವಿರಿ. ಇದಕ್ಕೆ ಪೂರಕವಾಗಿ ಭಗವಂತನ ಆಶೀರ್ವಾದವು ನಿಮ್ಮ ಮೇಲಿರುವುದರಿಂದ ಒಳಿತಾಗುವುದು. ಆರೋಗ್ಯ ಸ್ಥಿತಿ ಉತ್ತಮವಾಗಿರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top